News Kannada
Monday, December 05 2022

ಕರಾವಳಿ

ಎಸ್ ಎಸ್ ಎಲ್ ಸಿ ಫಲಿತಾಂಶ: ಜ್ಯೋತಿಕಾ ಬೆಳ್ತಂಗಡಿ ತಾಲೂಕಿಗೆ ಪ್ರಥಮ

Photo Credit :

ಎಸ್ ಎಸ್ ಎಲ್ ಸಿ ಫಲಿತಾಂಶ: ಜ್ಯೋತಿಕಾ ಬೆಳ್ತಂಗಡಿ ತಾಲೂಕಿಗೆ ಪ್ರಥಮ

ಬೆಳ್ತಂಗಡಿ: 2018-19ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಶೇ 86.83 ಫಲಿತಾಂಶ ಪಡದಿದ್ದು, ಜಿಲ್ಲೆಯಲ್ಲಿ ತಾಲೂಕಿಗೆ ಎರಡನೇ ಸ್ಥಾನ ಲಭಿಸಿದೆ. ತಾಲೂಕಿನಲ್ಲಿ ಪರೀಕ್ಷೆಗೆ ಕುಳಿತ 3,758 ಮಂದಿ ವಿಧ್ಯಾರ್ಥಿಗಳಲ್ಲಿ 3263 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ತಾಲೂಕಿನಲ್ಲಿ ಐದು ಸರಕಾರಿ ಪ್ರೌಢಶಾಲೆಗಳು ಹಾಗೂ ಖಾಸಗಿ ಹದಿನಾರು ಶಾಲೆಗಳು ಶೇ. 100 ಫಲಿತಾಂಶವನ್ನು ದಾಖಲಿಸಿದೆ. ತಾಲೂಕಿನಲ್ಲಿ ಉಜಿರೆಯ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯ ಜ್ಯೋತಿಕಾ 622 ಅಂಕಗಳನ್ನು ಪಡೆದು ತಾಲೂಕಿನಲ್ಲಿ ಪ್ರಧಮ ಸ್ಥಾನವನ್ನು ಪಡೆದಿದ್ದಾರೆ. ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆ ಉಜಿರೆಯ ವಿಕ್ರಂ ಶೆಟ್ಟಿ ಹಾಗೂ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯ ನೀತು ಮೆರಿನ್ 621 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಶೇ.100 ಫಲಿತಾಂಶ ಪಡೆದ 5 ಸರಕಾರಿ ಶಾಲೆಗಳು 
ಸತತ ಎಂಟನೇ ಬಾರಿಗೆ ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ ಶೇ 100 ಫಲಿತಾಂಶವನ್ನು ಪಡೆದು ಹೊಸ ದಾಖಲೆ ಮಾಡಿದೆ, ಮಚ್ಚಿನ ಮೊರಾರ್ಜಿ ದೇಸಾಯಿ ವಸತಿಶಾಲೆ ಸತತ ಒಂಬತ್ತನೇ ಬಾರಿಗೆ ಶೇ. ನೂರು ಫಲಿತಾಂಶವನ್ನು ಪಡೆದುಕೊಂಡಿದೆ. ಉಳಿದಂತೆ ಸರಕಾರಿ ಪ್ರೌಢಶಾಲೆ ನೇಲ್ಯಡ್ಕ, ಸರಕಾರಿ ಪ್ರೌಢಶಾಲೆ ಮಿತ್ತಬಾಗಿಲು, ಸರಕಾರಿ ಪ್ರೌಢಶಾಲೆ ಸರಳಿಕಟ್ಟೆ ಶೇನೂರು ಫಲಿತಾಂಶವನ್ನು ಪಡೆದುಕೊಂಡಿದೆ.

ಶೇ 100 ಫಲಿತಾಂಶ ಪಡೆದ 21 ಖಾಸಗಿ ಶಾಲೆಗಳು 
ಸೇಂಟ್ ಮೇರೀಸ್ ಆಂಗ್ಲಮಾಧ್ಯಮ ಶಾಲೆ ಲಾಯಿಲ, ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳ, ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆ ನಿಟ್ಟಡೆ, ವಾಣಿ ಆಂಗ್ಲಮಾಧ್ಯಮ ಶಾಲೆ ಹಳೆಕೋಟೆ ಬೆಳ್ತಂಗಡಿ, ಸಂತ ಥಾಮಸ್ ಅನುದಾನಿತ ಪ್ರೌಢಶಾಲೆ ನೆರಿಯ, ಸೈಂಟ್ ಫ್ರಾನ್ಸಿಸ್ ಆಂಗ್ಲಮಾಧ್ಯಮ ಶಾಲೆ ಕೊಕ್ಕಡ, ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಮಡಂತ್ಯಾರು, ರಹ್ಮಾನಿಯಾ ಹೈಸ್ಕೂಲ್ ಕಾಜೂರು, ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಾಯರ್ತಡ್ಕ, ಕಾರುಣ್ಯ ಆಂಗ್ಲಮಾಧ್ಯಮ ಶಾಲೆ ಕಕ್ಕಿಂಜೆ, ಗುಡ್ ಫ್ಯೂಚರ್ ಆಂಗ್ಲಮಾಧ್ಯಮ ಶಾಲೆ ಪಿಲ್ಯ, ಸೈಟ್ ಪೌಲ್ ಆಂಗ್ಲಮಾಧ್ಯಮ ಶಾಲೆ ನಾರಾವಿ, ಸೈಟ್ ಸಾವಿಯೋ ಆಂಗ್ಲಮಾಧ್ಯಮ ಶಾಲೆ ತೋಟತ್ತಾಡಿ, ವಿಧ್ಯೋದಯ ಆಂಗ್ಲಮಾಧ್ಯಮ ಶಾಲೆ ವೇಣೂರು, ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆ ಬೆಳ್ತಂಗಡಿ, ಶ್ರೀ ಭಾರತಿ ಆಂಗ್ಲಮಾಧ್ಯಮ ಶಾಲೆ ಉರುವಾಲು ಶೇ ನೂರು ಫಲಿತಾಂಶ ಪಡೆದುಕೊಂಡಿದೆ.

See also  ಈಶ್ವರಮಂಗಲ ವ್ಯಾಪ್ತಿಯಲ್ಲಿ ಬಾರೀ ಗಾಳಿ: 6 ವಿದ್ಯುತ್ ಕಂಬಗಳಿಗೆ ಹಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು