News Kannada
Tuesday, December 06 2022

ಕರಾವಳಿ

ಬಾಲಕಿಯ ಚಿಕಿತ್ಸೆಗಾಗಿ ನೀರು ಮಾರಾಟ ಮಾಡಿದ ರಾಜಕೇಸರಿ ಸಂಘಟನೆ

Photo Credit :

ಬಾಲಕಿಯ ಚಿಕಿತ್ಸೆಗಾಗಿ ನೀರು ಮಾರಾಟ ಮಾಡಿದ ರಾಜಕೇಸರಿ ಸಂಘಟನೆ

ಬೆಳ್ತಂಗಡಿ: ಕಳೆದ ಐದು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಬೆಳ್ತಂಗಡಿಯ ರಾಜಕೇಸರಿ ಸಂಘಟನೆ ಅಸೌಖ್ಯದಿಂದ ಬಳಲುತ್ತಿರುವ ಬಾಲಕಿಯ ಚಿಕಿತ್ಸೆಗಾಗಿ ಕುಡಿಯುವ ನೀರಿನ ಬಾಟಲ್‍ಗಳನ್ನು ಮಾರಾಟ ಮಾಡಿ ಅದರಿಂದ ಸಂಗ್ರಹಿಸಲಾದ ಹಣವನ್ನು ಆಕೆ ನೀಡುವ ನಿಟ್ಟಿನಲ್ಲಿ ಭಾನುವಾರ ಹಮ್ಮಿಕೊಂಡ ಮಾದರಿ ಕಾರ್ಯಕ್ರಮ ಎಲ್ಲರ ಪ್ರಸಂಶೆಗೆ ಪಾತ್ರವಾಯಿತು.

ಸಂಘಟನೆಯೊಂದು ಅಸಕ್ತರಿಗೆ ಯಾವ ರೀತಿಯಲ್ಲಿ ನೆರವಾಗಬಹುದುದೆಂದು ರಾಜಕೇಸರಿ ಬೆಳ್ತಂಗಡಿ ಎಲ್ಲರಿಗೂ ಮಾದರಿಯಾಗಿದೆ. ಮುಂಡಾಜೆ ಬಳಿಯ ಶೃತಿ ಶೆಟ್ಟಿ ಎಂಬ ಬಾಲಕಿ ಟ್ರಂಬೊಸೈಟೋಫೆನಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ರಾಜಕೇಸರಿ ಸಂಘಟನೆ ಈ ಅಭಿಯಾನವನ್ನು ಕೈಗೊಂಡಿದೆ.

ಶೃತಿ ಶೆಟ್ಟಿ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಕುಟುಂಬಕ್ಕೆ ಧೈರ್ಯವನ್ನು ನೀಡುವ ನಿಟ್ಟಿನಲ್ಲಿ ಈ ರೀತಿಯ ಅಭಿಯಾನ ಕೈಗೊಂಡು ಶೃತಿಗೆ ಆಸರೆಯಾಗಿ ಸಂಘಟನೆ ನಿಂತಿದೆ.

ಭಾನುವಾರ ಬೆಳಗ್ಗಿನಿಂದಲೇ ಸಂಘಟನೆಯ ಸಮವಸ್ತ್ರವನ್ನು ಧರಿಸಿದ ರಾಜಕೇಸರಿಯ ಸದಸ್ಯರು ಇಲ್ಲಿನ ಬಸ್ ನಿಲ್ದಾಣದಲ್ಲಿ ಬರುವ-ಹೋಗುವಸರಕಾರಿ ಹಾಗೂ ಖಾಸಗಿ ಬಸ್ಸನ್ನೇರಿ ಪ್ರಯಾಣಿಕರಿಗೆ ಸಂಕ್ಷಿಪ್ರವಾಗಿ ವಿವರಿಸಿ,ಕುಡಿಯುವ ನೀರಿನ ಬಾಟಲ್‍ಗಳನ್ನು ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸಿದ್ದಾರೆ.

22 ಮಂದಿ ಸದಸ್ಯರು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದು, 3000 ಕುಡಿಯುವ ನೀರಿನ ಬಾಟಲ್‍ನ್ನು ಮಾರಾಟ ಮಾಡಿದ್ದಾರೆ. ರೂ.5 ದರದಂತೆ ಕುಡಿಯುವ ನೀರಿನ ಬಾಟಲನ್ನು ಕಂಪೆನಿಯಿಂದ ಪಡೆದು, ಅದನ್ನು ರೂ.10 ದರದಂತೆ ಮಾರಾಟ ಮಾಡಲಾಗಿದೆ. ಶೇ.50ರಷ್ಟು ಲಾಭಾಂಶ ಬಂದಿದ್ದು, ಸುಮಾರು 40 ರಿಂದ 50 ಸಾವಿರದಷ್ಟು ಆರ್ಥಿಕ ಸಹಾಯವನ್ನು ನೀಡುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ.

 

See also  ಧರ್ಮಸ್ಥಳ ಕೆಎಸ್ ಆರ್ ಟಿಸಿ ಡೆಪೋ ಅಕ್ರಮ ಬಯಲಿಗೆಳೆದ ಚಾಲಕ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು