News Kannada
Tuesday, September 27 2022

ಕರಾವಳಿ

ಬೆಳ್ತಂಗಡಿಯಲ್ಲಿ ನಗರ ಪಂಚಾಯತ್ ಗೆ ಇನ್ನೂ ಆಯ್ಕೆಯಾಗದ ಅಧ್ಯಕ್ಷ, ಉಪಾಧ್ಯಕ್ಷರು: ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ - 1 min read

Photo Credit :

ಬೆಳ್ತಂಗಡಿಯಲ್ಲಿ ನಗರ ಪಂಚಾಯತ್ ಗೆ ಇನ್ನೂ ಆಯ್ಕೆಯಾಗದ ಅಧ್ಯಕ್ಷ, ಉಪಾಧ್ಯಕ್ಷರು: ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ

ಬೆಳ್ತಂಗಡಿ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದರೂ ಸರಕಾರದ ಆದೇಶ ಬಂದಿರದ ಪರಿಣಾಮ ಇಲ್ಲಿನ ನಗರ ಪಂಚಾಯತ್ ನಲ್ಲಿ ಆಡಳಿತ ಮಂಡಳಿ ರಚನೆಯಾಗದ ಕಾರಣ ಎಲ್ಲಾ ಕಾರ್ಯಗಳು ಮುಖ್ಯಾಧಿಕಾರಿಯವರ ನೇತೃತ್ವದಲ್ಲಿ ನಡೆಯುವಂತಾಗಿದೆ.

ತಾಲೂಕಿನ ಪ.ಪಂ.ನ ಹನ್ನೊಂಡು ವಾರ್ಡ್‍ಗಳಿಗೆ 2018ರ ಅಕ್ಟೋಬರ್‍ ನಲ್ಲಿ ಚುನಾವಣೆ ನಡೆದಿತ್ತು. ಪಂ.ಗೆ ಜನಪ್ರತಿನಿಧಿಗಳ ಆಯ್ಕೆ ಆಗಿ ಏಳು ತಿಂಗಳುಗಳು ಆಗಿವೆ. ಪ.ಪಂ.ನಲ್ಲಿ ಸದಸ್ಯರು ಆಯ್ಕೆಯಾಗಿದ್ದರೂ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಚರಂಡಿಗಳ ನಿರ್ವಹಣೆ ಇಲ್ಲದೆ ಕಸಕಡ್ಡಿಗಳು ತುಂಬಿಕೊಂಡಿದೆ. ಚರಂಡಿಗಳಲ್ಲಿ ಕೊಳಚೆ ನೀರು ಹರಿಯುತ್ತಿದೆ. ಈ ಬಾರಿ ಮಳೆಯಾಗದೇ ನೀರಿನ ಅಭಾವದ ಜತೆಗೆ ಅಭಿವೃದ್ಧಿ ಕಾರ್ಯಗಳು ನಿಧಾನಗತಿಯಿಂದ ಸಾಗುತ್ತಿದೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಬಂದಿದ್ದರೂ ಸರಾಕಾರದ ಆದೇಶ ಇನ್ನು ಬಂದಿಲ್ಲ. ಇದರಿಂದ ಅಧಿಕಾರಿಗಳೇ ಎಲ್ಲಾ ನಿರ್ವಹಿಸಬೇಕಾಗಿದೆ.

2.60 ಲಕ್ಷ ರೂ. ರಾಷ್ಟ್ರೀಯ ಹೆದ್ದಾರಿಯ ಚರಂಡಿ ನಿರ್ವಹಣೆ ಹಾಗೂ 4.90 ಲಕ್ಷ. ರೂ. 11 ವಾರ್ಡಿನ ಚರಂಡಿಗಳ ನಿರ್ವಹಣೆಗೆ ಮೀಸಲಿರಿಸಲಾಗಿದ್ದು, ಟೆಂಡರ್ ಕರೆಯಲಾಗಿದೆ. ಜೂನ್ ಮೊದಲ ವಾರದೊಳಗೆ ಚರಂಡಿಗಳ ಪ,ಪಂ.ವ್ಯಾಪ್ತಿಯ ಎಲ್ಲಾ ಚರಂಡಿಗಳ ನಿರ್ವಹಣೆ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಅರುಣ್ ಬಿ. ತಿಳಿಸಿದರು.

ಈಗಾಗಲೇ ಪೌರ ಕಾರ್ಮಿಕರು ಚರಂಡಿಗಳಿಗೆ ಬಿಸಾಕಿರುವ ಪ್ಲಾಸ್ಟಿಕ್ ಬಾಟಲಿಗಳನ್ನು, ಕಸಕಡ್ಡಿಗಳನ್ನು ತೆಗೆಸುವ ಕಾರ್ಯ ನಡೆದಿದೆ. ಮಳೆಗಾಲದಲ್ಲಿ ಪ.ಪಂ.ವ್ಯಾಪ್ತಿಯ ಬಂಟರ ಭವನದ ಬಳಿ ನೆರೆ ಹಾವಳಿ ಕುರಿತು ತಹಸೀಲ್ದಾರಿಗೆ ಮನವಿ ಮಾಡಿದ್ದೇವೆ. ನಗರದ ಮುಖ್ಯ ಬಸ್ ನಿಲ್ದಾಣದ ಹಿಂಭಾಗದಲ್ಲಿ ತಾಲೂಕು ಕಚೇರಿಯ ಅಧಿನದಲ್ಲಿರುವ ಸ್ಥಳದ ಧರೆಯಲ್ಲಿರುವ ಅಪಾಯಕಾರಿ ಮರದ ತೆರವಿಗೂ ಮನವಿ ಮಾಡಲಾಗಿದೆ. ಪ.ಪಂ.ನಿಂದ ಮಳೆಗಾಲದ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪ.ಪಂ. ತಿಳಿಸಿದೆ.

ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ನಡೆದ ಸಭೆಯ ಸೂಚನೆ ಮೇರೆಗೆ ಪ.ಪಂ. ವ್ಯಾಪ್ತಿಯ ಜೆಸಿಬಿ, ಮರ ತುಂಡರಿಸುವ ಉಪಕರಣಗಳ ಉಳ್ಳವರ ಮಾಲಕರ ಮತ್ತು ಯಂತ್ರಗಳನ್ನು ನಿಭಾಯಿಸುವವರ ವಿಳಾಸವನ್ನು ಪಡೆದುಕೊಳ್ಳಲಾಗಿದ್ದು, ಅವರನ್ನು ಅಗತ್ಯವಿದ್ದಲ್ಲಿ ಬಳಸಿಕೊಳ್ಳಲಾಗುವುದು. ಯಾವುದೇ ಸಮಸ್ಯೆಗಳಿದ್ದರೆ ತಕ್ಷಣ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿಯ ಗುರುವಾಯನಕೆರೆ ಬಂಟರ ಭವನದಿಂದ ಬೆಳ್ತಂಗಡಿ ಲಾಯಿಲ ಸೇತುವೆ ತನಕ ರಾಷ್ಟ್ರೀಯ ಹೆದ್ದಾರಿ ಹಾಗೂ ಪ.ಪಂ.ನ 11 ವಾರ್ಡಿನ ಚರಂಡಿ ನಿರ್ವಹಣೆಗೆ ಟೆಂಡರ್ ಕರೆದಿದ್ದು, ಜೂನ್ ತಿಂಗಳ ಮೊದಲ ವಾರದೊಳಗೆ ನಿರ್ವಹಣೆ ಮಾಡಲಾಗುವುದು. ಮಳೆಗಾಲಕ್ಕೆ ಮುಂಜಾಗ್ರತಾ ಕ್ರಮಕೈಗೊಂಡಿದ್ದು, ಯಾವುದೇ ಸಮಸ್ಯೆಗಳಿದ್ದರೆ ಪ.ಪಂ.08256-234596 ಸಹಾಯವಾಣಿಗೆ ತಿಳಿಸಬಹುದು.
ಮಹಾವೀರ ಆರಿಗ, ಇಂಜಿನಿಯರ್, ಪ,ಪಂ.ಬೆಳ್ತಂಗಡಿ

See also  ಬೆಳ್ತಂಗಡಿ: ಲೋಕಾಯುಕ್ತ ಅಹವಾಲು ಸ್ವೀಕಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು