News Kannada
Tuesday, November 29 2022

ಕರಾವಳಿ

ಪುಚ್ಚಮೊಗರು ಡ್ಯಾಂನಲ್ಲಿ ಕಡಿಮೆಯಾದ ನೀರು: ಶಾಸಕರಿಂದ ಪರಿಶೀಲನೆ - 1 min read

Photo Credit :

ಪುಚ್ಚಮೊಗರು ಡ್ಯಾಂನಲ್ಲಿ ಕಡಿಮೆಯಾದ ನೀರು: ಶಾಸಕರಿಂದ ಪರಿಶೀಲನೆ

ಮೂಡುಬಿದಿರೆ: ಇಲ್ಲಿನ ಪುರಸಭಾ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ಪುಚ್ಚಮೊಗರು ವೆಂಟೆಡ್ ಡ್ಯಾಂನಲ್ಲಿ ನೀರಿನ ಕೊರತೆ ಕಂಡು ಬಂದಿದ್ದು, ಶಾಸಕ ಉಮನಾಥ ಕೋಟ್ಯಾನ್ ಅವರು ಪುರಸಭಾ ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆಯ ವೇಳೆ ಇನ್ನೂ ಒಂದು ವಾರಕ್ಕೆ ಬೇಕಾಗುವಷ್ಟು ನೀರಿನ ಲಭ್ಯತೆಯಿದ್ದು, ಅಣೆಕಟ್ಟಿನಲ್ಲಿ ತುಂಬಿರುವ ಹೂಳನ್ನು ತೆಗೆದು ಹೆಚ್ಚು ನೀರು ಸಂಗ್ರಹಕ್ಕೆ ಅವಕಾಶ ಕಲ್ಪಿಸುವುದು ಮತ್ತು ನೀರಿನ ಕೊರತೆಯಾದಲ್ಲಿ ನದಿ ಹರಿವಿನ ನಡುವೆ ಇರುವ ಆನೆಗುಂಡಿಯಿಂದ ನೀರೊದಗಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಉಮಾನಾಥ ಕೋಟ್ಯಾನ್ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಡ್ಯಾಂ ಮೂಲಕ ಮುಂದಿನ 15 ದಿನಗಳಿಗೆ ಸಾಕಾಗುವಷ್ಟು ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು. ಭವಿಷ್ಯದಲ್ಲಿ ಮಾರೂರಿನಲ್ಲಿ ಹಾಗೂ ಇರುವೈಲ್‍ನಲ್ಲಿ ಹೊಸ ವೆಂಟೆಡ್ ಡ್ಯಾಂಗಳನ್ನು ನಿರ್ಮಿಸುವ ಕಾರ್ಯ ಪ್ರಸ್ತಾಪದಲ್ಲಿದೆ ಎಂದರು.

ಪುರಸಭೆಯ ಪ್ರಭಾರ ಮುಖ್ಯಾಧಿಕಾರಿ ಸೂರ್ಯಕಾಂತ ಖಾರ್ವಿ ಮಾಹಿತಿ ನೀಡಿ ಪ್ರಸ್ತುತ ದಿನದ 24 ಗಂಟೆಯೂ ಪಟ್ಟಣಕ್ಕೆ ನೀರೊದಗಿಸಲಾಗುತ್ತಿದೆ. ಪುರಸಭಾ ವ್ಯಾಪ್ತಿಯಲ್ಲಿರುವ 150 ವ್ಯಾಪ್ತಿಯಲ್ಲಿರುವ ಬೋರ್‍ವೆಲ್‍ಗಳ ನೀರನ್ನು ಬಳಕೆ ಮಾಡುತ್ತಿದ್ದು ನೀರು ಸರಬರಾಜಿಗೆ ತಾಂತ್ರಿಕವಾಗಿ ತೊಂದರೆಯಾಗುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಇಂಜಿನಿಯರ್ ದಿನೇಶ್, ನೀರು ಸರಬರಾಜು ನಿರ್ವಾಹಕ ಆನಂದ, ಗುತ್ತಿಗೆದಾರ ಗಿರೀಶ್ ಉಪಸ್ಥಿತರಿದ್ದರು.

See also  ಲಸಿಕೆ ಪಡೆಯಲು ಜನರ ತಳ್ಳಾಟ ನೂಕಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು