News Kannada
Tuesday, December 06 2022

ಕರಾವಳಿ

ನೀರಿನ ಮಿತಬಳಕೆ ಜೀವನ ಶೈಲಿಯಾಗಿರಲಿ: ಡಾ.ಬಿ. ಯಶೋವರ್ಮ

Photo Credit :

ನೀರಿನ ಮಿತಬಳಕೆ ಜೀವನ ಶೈಲಿಯಾಗಿರಲಿ: ಡಾ.ಬಿ. ಯಶೋವರ್ಮ

ಬೆಳ್ತಂಗಡಿ: “ನೀರಿನ ಮಿತಬಳಕೆಯ ಪಾಠ ಕಲಿಯದಿದ್ದರೆ ಮಾನವ ಸಂಕಷ್ಟಕ್ಕೆ ಸಿಲುಕುವ ದಿನ ದೂರವಿಲ್ಲ. ನೀರು ನಮ್ಮ ಜೀವನದ ಅವಿಭಾಜ್ಯ ಅಂಗ ಎಂಬುದು ತಿಳಿದಿದ್ದರೂ, ಅದನ್ನು ಉಳಿಸುವ ಪ್ರಯತ್ನ ಮಾಡುತ್ತಿಲ್ಲ. ನೀರು ಉಚಿತವಾಗಿ ಸಿಗುತ್ತದೆಂಬ ಒಂದೇ ಕಾರಣಕ್ಕೆ ಬೇಕಾಬಿಟ್ಟಿ ಬಳಸದೇ, ಜವಾಬ್ದಾರಿಯುವತವಾಗಿ, ಮಿತವಾಗಿ ಬಳಸುವುದನ್ನು ನಾವು ಕಲಿಯಬೇಕಿದೆ. ಅನಗತ್ಯವಾಗಿ ನೀರು ಪೋಲಾಗುವುದನ್ನು ತಡೆಯಬೇಕಿದೆ” ಎಂದು ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಕಿವಿಮಾತು ಹೇಳಿದರು.

ಅವರು ಉಜಿರೆಯ ಶ್ರೀ ಸಿದ್ಧವನ ಗುರುಕುಲದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನೀರಿನ ಮಿತಬಳಕೆ ಕುರಿತು ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ಭೂಮಿ ಸೃಷ್ಟಿಯಾದಾಗ ಎಷ್ಟು ನೀರು ಇತ್ತೋ, ಇಂದು ಸಹ ಅಷ್ಟೇ ನೀರು ಇದೆ. ನೀರಿನ ಪ್ರಮಾಣದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಆದರೆ ನೀರಿನ ಬಳಕೆಯ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅಪಾರ ಬೇಡಿಕೆ ಸೃಷ್ಟಿಯಾಗುತ್ತಲೇ ಇದೆ. ನೀರು ನಮ್ಮ ಜೀವನ ದ್ರವ್ಯ, ಅದಿಲ್ಲದೆ ನಮ್ಮ ಬದುಕನ್ನು ಊಹಿಸುವುದೂ ಸಾಧ್ಯವಿಲ್ಲ. ಆದರೆ ಪ್ರಸಕ್ತ ಸನ್ನಿವೇಶಗಳನ್ನು ಗಮನಿಸಿದರೆ ಜಗತ್ತಿನಾದ್ಯಂತ ನೀರಿನ ತೀವ್ರ ಅಭಾವ ಕಂಡು ಬರುತ್ತಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲೂ ನೀರಿನ ಕೊರತೆಯಾಗುತ್ತಿರುವುದ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಇನ್ನಾದರೂ ನೀರಿನ ಸದ್ಭಳಕೆಯ ಕುರಿತು ಜಾಗೃತಿ ಮೂಡಿಸದಿದ್ದರೆ ಭವಿಷ್ಯದಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ ಎಂದರು.

ಇದೇ ವೇಳೆ ನೀರಿನ ದುರ್ಬಳಕೆಯಿಂದ ಮಾನವ ಕುಲ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಂಬಿಸುವ ವಿಡಿಯೋ ಪ್ರದರ್ಶನ ಮಾಡಿ, ನೀರಿನ ಮಹತ್ವಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತೋರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳಿಗೆ ಸೇರಿದ ವಿವಿಧ ವಸತಿ ನಿಲಯಗಳ ಪಾಲಕರು, ಆಹಾರ ವಿಭಾಗದ ಮೇಲ್ವಿಚಾರಕರು, ಪ್ರಧಾನ ಅಡುಗೆಯವರು, ಸಹಾಯಕರು ಹಾಗೂ ಸ್ವಚ್ಛತಾ ವಿಭಾಗದ ನೌಕರರಿಗೆ ನೀರಿನ ಮಿತಬಳಕೆಯ ಮಾಹಿತಿ ನೀಡಿ, ಸದ್ಭಳಕೆಯ ಕುರಿತಾದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಪಟ್ಟ, ಉಜಿರೆ ವ್ಯಾಪ್ತಿಯಲ್ಲಿರುವ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ ಶೆಟ್ಟಿ ಸ್ವಾಗತಿಸಿ, ಎಸ್.ಡಿ.ಎಂ ಪದವಿಪೂರ್ವ (ವಸತಿ) ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ಕೃಷ್ಣಮೂರ್ತಿ ವಂದಿಸಿದರು.

 

See also  ಯುವಕನನ್ನು ಕೊಚ್ಚಿ ಬರ್ಬರ ಕೊಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು