News Kannada
Thursday, December 08 2022

ಕರಾವಳಿ

ಅನಿಯಮಿತ ಲೋಡ್ ಶೆಡ್ಡಿಂಗ್: ಕೃಷಿಕರಿಂದ ಮೆಸ್ಕಾಂ ಅಧಿಕಾರಿಗೆ ಮನವಿ

Photo Credit :

ಅನಿಯಮಿತ ಲೋಡ್ ಶೆಡ್ಡಿಂಗ್: ಕೃಷಿಕರಿಂದ ಮೆಸ್ಕಾಂ ಅಧಿಕಾರಿಗೆ ಮನವಿ

ಬೆಳ್ತಂಗಡಿ: ಅನಿಯಮಿತ ಲೋಡ್ ಶೆಡ್ಡಿಂಗ್‍ನಿಂದಾಗಿ ತೊಂದರೆಯಾಗುತ್ತಿರುವ ಬಗ್ಗೆ ಕೃಷಿಕರು ಸೋಮವಾರ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ದಿನದ 24 ಗಂಟೆಗಳಲ್ಲಿ 6 ಗಂಟೆ ಮಾತ್ರ ಮೂರು ಫೇಸ್ ನೀಡಿ 10ಕ್ಕೂ ಹೆಚ್ಚು ವಿದ್ಯುತ್ ಸರಬರಾಜು ಸ್ಥಗಿತಗೊಳಿಸುತ್ತಿರುವದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಇದರಿಂದ ಕೃಷಿ ಒಣಗುತ್ತಿದೆ. ನಡ, ಕನ್ಯಾಡಿ, ನಾವೂರು ಹಾಗೂ ಇಂದಬೆಟ್ಟು ಪ್ರದೇಶಗಳಿಗೆ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಸಬ್ ಸ್ಟೇಶನ್ ನಿರ್ಮಿಸುವಂತೆ ಬೆಳ್ತಂಗಡಿ ತಾಲೂಕು ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಎಚ್. ಶಿವಶಂಕರ್ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.

ಸಿ.ಎಚ್. ಶಿವಶಂಕರ್ ಮಾತನಾಡಿ, ಈ ಬಾರಿ ಸತತ ಮಳೆ ಬಾರದೇ ಇರುವುದರಿಂದ ಕೃಷಿಕರು ವಿದ್ಯುತ್ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ. ಬಂಗಾಡಿ ಫೀಡರ್‍ ನ ಸಾಮರ್ಥ್ಯ ಮೀರಿ ವಿದ್ಯುತ್ ಬಳಕೆಯಾಗುತ್ತಿರುವುದರಿಂದ ಒತ್ತಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಬಂಗಾಡಿ ಫೀಡರ್‍ ಗೆ ಪರ್ಯಾಯವಾಗಿ ನಾವೂರದಲ್ಲಿ ಪ್ರತ್ಯೇಕ ಫೀಡರ್ ರಚಿಸಿ ಇಂದಬೆಟ್ಟು ಕಿಲ್ಲೂರು, ಕೊಲ್ಲಿ ಕಡೆಗೆ ವಿದ್ಯುತ್ ಪೂರೈಸಲು ಈಗಾಗಲೇ 65 ಲಕ್ಷಕ್ಕೆ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸಬ್ ಸ್ಟೇಶನ್ ರಚಿಸುವ ಸಲುವಾಗಿ ಈಗಾಗಲೇ ಉಜಿರೆ ಹಾಗೂ ನಡದಲ್ಲಿ ಜಾಗಕ್ಕಾಗಿ ಸ್ಥಳೀಯ ಪಶು ವೈದ್ಯ ಇಲಾಖೆ ಸ್ಥಳ ಪಡೆಯಲು ತಹಶೀಲ್ದಾರ್ ಜತೆ ಮಾತುಕತೆ ನಡೆಸಲಾಗುವುದು. ಮುಂದಿನ ವರ್ಷ ಸಬ್ ಸ್ಟೇಷನ್ ನಿರ್ಮಾಣದ ಇರಾದೆ ಇದೆ. ಇದರಿಂದ ಆ ಭಾಗಕ್ಕೆ ನಿರಂತರ ವಿದ್ಯುತ್ ನೀಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಹರೀಶ್ ಕಾರಿಂಜ, ಸೆಬಾಸ್ಟಿನ್ ವಿ.ಪಿ., ಹರೀಶ್ ಸಾಲ್ಯಾನ್, ಸೇವಿಯರ್ ಪಾಲೇಲಿ, ಸುರೇಶ್ ಪಿ.ಎನ್., ಅಜಿತ್ ಆರಿಗ, ಅಭಿನಂದನ್ ಹರೀಶ್ ಕುಮಾರ್, ಶ್ರೀನಿವಾಸ ಕೋಡಿಜಾಲ್, ಗೋವಿಂದ ಮೂಲ್ಯ, ಸಂಕಪ್ಪ ಪೂಜಾರಿ, ರವಿರಾಜ್ ಜೈನ್, ವಸಂತ, ಜೋಸ್ ಸಿ.ಟಿ. ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಸ್ಥರು ಪಾಲ್ಗೊಂಡಿದ್ದರು.

See also  ಉಜಿರೆ ಏರ್ನೋಡಿ ಬಳಿ ಕಾಂಪೌಂಡ್ ಕುಸಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು