News Kannada
Monday, November 28 2022

ಕರಾವಳಿ

ಬೆಳ್ತಂಗಡಿ ತಾಲೂಕಿನ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ - 1 min read

Photo Credit :

ಬೆಳ್ತಂಗಡಿ ತಾಲೂಕಿನ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ

ಬೆಳ್ತಂಗಡಿ: ಕಳೆದೊಂದು ವರ್ಷದಿಂದ ಬೆಳ್ತಂಗಡಿ ತಾಲೂಕು ಕಸದ ಗುಂಡಿಯಾಗುತ್ತಿದೆಯೇ ಎನ್ನುವ ಸಂಶಯ ನಾಗರಿಕರಲ್ಲಿ ಮೂಡುತ್ತಿದೆ. ಯಾಕೆಂದರೆ ತಾಲೂಕಿನಲ್ಲಿ ಯಾವ ಮೂಲೆಗೆ ಹೋಗಿ ತ್ಯಾಜ್ಯವೇ ಕಾಣಸಿಗುತ್ತಿದೆ. ಅದರಲ್ಲೂ ರಸ್ತೆಯ ಇಕ್ಕೆಲಗಳು ಕಸದ ತಿಪ್ಪೆಗುಂಡಿಗಳಾಗುತ್ತಿರುವುದನ್ನು ನೋಡಬಹುದಾಗಿದೆ. ತಾಲೂಕಿನಾದ್ಯಂತ ಕಸವೋ ಕಸ ಎಂಬಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಸ್ವಚ್ಛ ಭಾರತ ಮಿಷನ್ ತಂದರು. ಭಾರತವೇ ಸ್ವಚ್ಛವಾಗಬೇಕು ಎಂಬ ಇರಾದೆ ಅದರಲ್ಲಿದೆ. ಆದರೆ ಬೆಳ್ತಂಗಡಿ ತಾಲೂಕು ಹೊರತು ಪಡಿಸಿ ಎಂಬಂತಾಗಿದೆ. ಸ್ವಚ್ಛ ಭಾರತ ಎಂದರೆ ಕೇವಲ ಶೌಚಾಲಯಗಳನ್ನು ಮಾತ್ರ ನಿರ್ಮಿಸುವುದು ಎಂಬ ಭಾವನೆ ಆಡಳಿತದವರಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿದೆ ಎಂಬುದು ತಾಲೂಕಿನ ಪರಿಸರವನ್ನು ಗಮನಿಸಿದರೆ ಗೊತ್ತಾಗುತ್ತದೆ. ಊರು-ಕೇರಿ ಸ್ವಚ್ಛತೆಯ ಬಗ್ಗೆ ಜನಪ್ರತಿನಿಧಿಗಳಲ್ಲಾಗಲಿ, ಆಡಳಿತದವರಲ್ಲಾಗಲಿ ಕಾಳಜಿ ಇಲ್ಲದಿರುವುದು ದುರಂತವೇ ಆಗಿದೆ.

ತಾಲೂಕಿನಲ್ಲಿ ಚಾರ್ಮಾಡಿಯಿಂದ ಪುಂಜಾಲಕಟ್ಟೆ ತನಕ ರಾಷ್ಟ್ರಿಯ ಹೆದ್ದಾರಿ, ಗುರುವಾಯನಕೆರೆಯಿಂದ ಹೊಸ್ಮಾರುವರೆಗೆ, ಗುರುವಾಯನಕೆರೆಯಿಂದ ಹೊಸಂಗಡಿಯವರೆಗೆ, ಗುರುವಾಯನಕೆರೆಯಿಂದ ಉಪ್ಪಿನಂಗಡಿಯವರೆಗೆ, ಉಜಿರೆಯಿಂದ ಧರ್ಮಸ್ಥಳ, ಕೊಕ್ಕಡದವರೆಗೆ ರಾಜ್ಯ ಹೆದ್ದಾರಿ, ಉಳಿದೆಲ್ಲೆಡೆ ತಾ.ಪಂ. ಜಿ.ಪಂ. ರಸ್ತೆಗಳು ಹಾದು ಹೋಗಿವೆ. ಇದರಲ್ಲಿ ಉಜಿರೆಯಿಂದ ಧರ್ಮಸ್ಥಳ ಹಾಗೂ ವೇಣೂರಿನಿಂದ ಹೊಸಂಗಡಿಯವರೆಗಿನ ರಸ್ತೆ ಬದಿಗಳನ್ನು ಬಿಟ್ಟರೆ ಉಳಿದೆಲ್ಲ ರಸ್ತೆಗಳ ಕಿ.ಮೀ. ಇಕ್ಕೆಲಗಳು ತ್ಯಾಜ್ಯದಿಂದ ಅಲಂಕೃತವಾಗಿವೆ. ಕೆಲವು ಕಡೆ ತ್ಯಾಜ್ಯದ ರಾಶಿ ಇದ್ದು ದುರ್ವಾಸನೆ ಬೀರುತ್ತಿದೆ. ಇದು ರಸ್ತೆಗಳ ಕಥೆಯಾದರೆ ಗ್ರಾಮೀಣ ಒಳ ಸಾರ್ವಜನಿಕ ಪ್ರದೇಶಗಳೆಲ್ಲ ತ್ಯಾಜ್ಯದ ಗುಂಡಿಗಳಾಗಲು ಹೆಚ್ಚು ಸಮಯವಿಲ್ಲ. ಸೇತುವೆಗಳ ತಳಭಾಗವು ಕಸ ಬಿಸಾಡುವ ಜಾಗವಾಗಿವೆ ಪರಿವರ್ತಿತವಾಗಿದೆ. ಕೊಳೆತ ತರಕಾರಿ, ಕೋಳಿ ತ್ಯಾಜ್ಯ, ಬಾಟಲಿಗಳೆ ಎಲ್ಲೆಂದರಲ್ಲಿ ಕಾಣಸಿಗುತ್ತಿದೆ. ತ್ಯಾಜ್ಯಗಳಲ್ಲಿ ಪ್ಲಾಸ್ಟಿಕ್ ಕಸವೇ ಹಚ್ಚಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಒಟ್ಟಾರೆ ತಾಲೂಕಿನ ಶೇ. ತೊಂಭತ್ತರಷ್ಟು ಭಾಗ ಕಸವೇ ತುಂಬಿರುವುದು ದುರಂತ.

See also  ಕಾಂಗ್ರೆಸ್ ಸದಸ್ಯೆ ಗೆದ್ದರೂ ಸಂಭ್ರಮಿಸಲು ಕಾರ್ಯಕರ್ತರೇ ಇಲ್ಲ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು