News Kannada
Thursday, February 09 2023

ಕರಾವಳಿ

94ಸಿ ತಿರಸ್ಕೃತಗೊಂಡ ಅರ್ಜಿಗಳ ಮರು ಪರಿಶೀಲನೆಗೆ ಐವನ್ ಡಿಸೋಜ ಆದೇಶ

Photo Credit :

94ಸಿ ತಿರಸ್ಕೃತಗೊಂಡ ಅರ್ಜಿಗಳ ಮರು ಪರಿಶೀಲನೆಗೆ ಐವನ್ ಡಿಸೋಜ ಆದೇಶ

ಸುಳ್ಯ: ತಾಲೂಕಿನಲ್ಲಿ 94ಸಿ ಯೋಜನೆಯಡಿಯಲ್ಲಿ ತಿರಸ್ಕೃತಗೊಂಡ ಅರ್ಜಿಗಳ ಮರು ಪರಿಶೀಲನೆ ನಡೆಸುವಂತೆ ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗು ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಆದೇಶ ನೀಡಿದ್ದಾರೆ.

ಸುಳ್ಯ ತಾಲೂಕು ಕಚೇರಿಯಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಸುಳ್ಯದಲ್ಲಿ ಒಟ್ಟು 5082 ಅರ್ಜಿಗಳಿಗೆ 94ಸಿ ಮಂಜೂರು ಮಾಡಿದ್ದರೆ 4703 ಅರ್ಜಿಗಳು ತಿರಸ್ಕೃತಗೊಂಡಿದೆ ಎಂದು ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಮಾಹಿತಿ ನೀಡಿದರು. ಇಷ್ಟು ಅರ್ಜಿಗಳು ಯಾಕೆ ತಿರಸ್ಕೃತಗೊಂಡಿದೆ ಎಂದು ಐವನ್ ಡಿಸೋಜ ಪ್ರಶ್ನಿಸಿದರು. 94ಸಿ ಯೋಜನೆ ಅನುಷ್ಠಾನದಲ್ಲಿ ಜನರಿಗೆ ಅನ್ಯಾಯ ಆಗಿದೆ ಎಂದು ಸಭೆಯಲ್ಲಿದ್ದ ಪ್ರಮುಖರು ದೂರಿದರು. ಒಂದೇ ಸರ್ವೇ ನಂಬರ್ ನಲ್ಲಿ ಕೆಲವರಿಗೆ ನೀಡಿದೆ, ಕೆಲವರಿಗೆ ನೀಡಿಲ್ಲ ಎಂದು ಶಾಸಕ ಎಸ್.ಅಂಗಾರ ಹೇಳಿದರು. ಈ ಕುರಿತು ಚರ್ಚೆ ನಡೆದಾಗ ಪ್ರತಿ ಗ್ರಾಮ ಮಟ್ಟದಲ್ಲಿ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಮರು ಪರಿಶೀಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸಹಾಯಕ ಕಮೀಷನರ್ ಮತ್ತು ತಹಶೀಲ್ದಾರ್‍ ಗೆ ಸೂಚಿಸಿದರು.

ಸುಳ್ಯ ಮಿಲಿಟ್ರಿ ಗ್ರೌಂಡ್‍ನಲ್ಲಿ ವಾಸಿಸುವ ಜನರ ಹಕ್ಕು ಪತ್ರ ನೀಡುವ ವಿಚಾರದ ಕುರಿತು ಚರ್ಚೆ ನಡೆದಾಗ ಈ ಕುರಿತು ವರದಿ ನೀಡುವಂತೆ ಅವರು ಸೂಚಿಸಿದರು.

ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್‍ಗಳನ್ನು ಸಮರ್ಪಕವಾಗಿ ಮಾಡಲು ಸೂಚನೆ ನೀಡಿದರು. ಮುಂದಿನ ಕಂದಾಯ ಅದಾಲತ್‍ಗೆ ಖುದ್ದಾಗಿ ಭಾಗವಹಿಸಿ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವುದಾಗಿ ಅವರು ಹೇಳಿದರು. ಸರ್ವೇ ಇಲಾಖೆಯಲ್ಲಿ ಅರ್ಜಿಗಳು ಕಡಿಮೆ ವಿಲೇವಾರಿ ಆಗಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸರ್ವೇ ಇಲಾಖೆಯ ಬಗ್ಗೆ ತುಂಬಾ ದೂರುಗಳಿವೆ ಇದರ ಬಗ್ಗೆ ಕ್ರಮ ಕೈಗೊಳ್ಳಲು ಸಹಾಯಕ ಕಮೀಷನರ್‍ ಗೆ ಸೂಚಿಸಿದರು. ಸರ್ವೇ ಇಲಾಖೆಯಲ್ಲಿ ಹೆಚ್ಚು ಸರ್ವೆಯರ್‍ ಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು. ನಗರ ವ್ಯಾಪ್ತಿಯಲ್ಲಿ ಮತ್ತು ಗ್ರಾಮ ಮಟ್ಟದಲ್ಲಿ ನಿವೇಶನಕ್ಕೆ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಸ್ಥಳ ಕಾದಿರಿಸುವಂತೆ ಸೂಚಿಸಿದರು. ಅಕ್ರಮ ಸಕ್ರಮ ಸಮಿತಿಗೆ ಹೋಬಳಿ ಮಟ್ಟದಲ್ಲಿ ಸಮಿತಿ ರಚಿಸುವ ಬಗ್ಗೆ ಸರ್ಕಾರ ಯೋಚನೆ ನಡೆಸುತ್ತಿದೆ ಎಂದು ಅವರು ಹೇಳಿದರು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಶಾಸಕ ಎಸ್.ಅಂಗಾರ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಪುತ್ತೂರು ಸಹಾಯಕ ಕಮೀಷನರ್ ಡಾ.ಹೆಚ್.ಕೆ.ಕೃಷ್ಣಮೂರ್ತಿ, ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್, ತಾ.ಪಂ.ಉಪಾಧ್ಯಕ್ಷೆ ಶುಭದಾ ಎಸ್.ರೈ, ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ ಮತ್ತಿತರರು ಉಪಸ್ಥಿತರಿದ್ದರು.

See also  ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗೆ ಕೊರೋನಾ ಪಾಸಿಟಿವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು