News Kannada
Friday, December 09 2022

ಕರಾವಳಿ

ಸೀಡ್‍ಬಾಲ್ ಅಭಿಯಾನದಿಂದ ಅರಣ್ಯಗಳನ್ನು ಬೆಳೆಸಬಹುದು : ಪ್ರಕಾಶ್ ಪೂಜಾರಿ

Photo Credit :

ಸೀಡ್‍ಬಾಲ್ ಅಭಿಯಾನದಿಂದ ಅರಣ್ಯಗಳನ್ನು ಬೆಳೆಸಬಹುದು : ಪ್ರಕಾಶ್ ಪೂಜಾರಿ

ಮೂಡುಬಿದಿರೆ: ಅಭಿವೃದ್ಧಿಯ ನೆಪದಲ್ಲಿ ನಾವು ಅರಣ್ಯದ ಮೇಲೆ ಒತ್ತಡ ಹಾಕಿ ನಾಶ ಮಾಡುತ್ತಿದ್ದೇವೆ. ಆದರೆ ಅರಣ್ಯವನ್ನು ಬೆಳೆಸುವಂತಹ ಕೆಲಸಗಳನ್ನು ಮಾಡುತ್ತಿಲ್ಲ. ಇದೀಗ ಅರಣ್ಯ ಇಲಾಖೆಯು ಕೈಗೊಂಡಿರುವ ಸೀಡ್‍ಬಾಲ್ ಅಭಿಯಾನದ ಮೂಲಕ ಅರಣ್ಯಗಳನ್ನು ಬೆಳೆಸಲು ಸಾಧ್ಯವಿದೆ ಎಂದು ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಹೇಳಿದರು.

ಅವರು ಶನಿವಾರ ದರೆಗುಡ್ಡೆಯ ವಿಠಲ ಸೋಮನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ವಲಯ ಅರಣ್ಯ ಇಲಾಖೆ, ಎಸ್‍ಕೆಡಿಆರ್ ಪಿ ಹಾಗೂ ದರೆಗುಡ್ಡೆ ಫ್ರೆಂಡ್ಸ್ ಇವುಗಳ ಸಹಯೋಗದಲ್ಲಿ ನಡೆದ ಸೀಡ್ ಬಾಲ್ ಪಸರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅರಣ್ಯಗಳ ನಾಶದಿಂದಾಗಿ ಪರಿಸರ ಸಮತೋಲನವನ್ನು ಕಳೆದುಕೊಳ್ಳುತ್ತಿದ್ದು ಇದರ ಪರಿಣಾಮವಾಗಿ ತಾಪಮಾನದಲ್ಲಿ ಏರಿಕೆ ಹಾಗೂ ಮಳೆಯ ಅಭಾವ ಸೃಷ್ಟಿಯಾಗಿದೆ. ಜೆಸಿಬಿಯಿದಾಗಿ ಭೂಮಿಯ ಮೇಲ್ಪದರದಲ್ಲಿ ನೀರು ನಿಲ್ಲದೆ ನೇರ ಸಮುದ್ರಕ್ಕೆ ಹೋಗುತ್ತಿದ್ದು ಪರಿಸರದ ಮೇಲಿನ ಒತ್ತಡ ಇದೇ ರೀತಿ ಮುಂದುವರಿದರೆ 2050 ನೇ ಇಸವಿಯಲ್ಲಿ ಭೂಮಿಯಲ್ಲಿ ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೆ ದೊಡ್ಡ ಅಪಾಯ ಎದುರಾಗಲಿದೆ’ ಎಂದರು.

ಮೂಡುಬಿದಿರೆ ಕೃಷಿ ವಿಚಾರವಿನಿಮಯ ಕೇಂದ್ರದ ಅಧ್ಯಕ್ಷ ಸುಭಾಶ್ ಚಂದ್ರ ಚೌಟ ಅಧ್ಯಕ್ಷತೆ ವಹಿಸಿದ್ದರು.

ದರೆಗುಡ್ಡೆ ಪಂಚಾಯತ್‍ನ ಪ್ರಭಾರ ಅಧ್ಯಕ್ಷ ಮುನಿರಾಜ ಹೆಗ್ಡೆ, ಆನಡ್ಕ ದಿನೇಶ್ ಕುಮಾರ್, ಎಸ್‍ಕೆಡಿಆರ್‍ಡಿಪಿಯ ಮೂಡುಬಿದಿರೆ ತಾಲೂಕಿನ ಯೋಜನಾಧಿಕಾರಿ ನಾರಾಯಣ ಶೆಟ್ಟಿ, ದರೆಗುಡ್ಡೆ ಫ್ರೆಂಡ್ಸ್ ಅಧ್ಯಕ್ಷ ನವೀನ್, ದರೆಗುಡ್ಡೆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಉಪಸ್ಥಿತರಿದ್ದರು.

ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ಜಿನೇಂದ್ರ ನಿರೂಪಿಸಿದರು. ಜಯಶ್ರೀ ಹರೀಶ್ ವಂದಿಸಿದರು.

ಕಾರ್ಯಕ್ರಮದ ಬಳಿಕ ಮೂರುಮಲೆ ಮೀಸಲು ಅರಣ್ಯ ಪ್ರದೇಶದಲ್ಲಿ ಸುಮಾರು 500 ಸೀಡ್‍ಬಾಲ್, 2000 ಹಲಸಿನ ಬೀಜ ಮತ್ತು 200 ಮಾವು ಗೊರಟುಗಳನ್ನು ಪಸರಿಸಲಾಯಿತು.

 

See also  ಬಂಟ್ವಾಳದಲ್ಲಿ ಕುಡಿಯುವ ನೀರಿನ ಸಮಸ್ಯೆ: ಪರಿಹಾರಕ್ಕೆ ರೈ ನೇತೃತ್ವದಲ್ಲಿ ಕಾಂಗ್ರೆಸ್ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು