News Kannada
Friday, December 02 2022

ಕರಾವಳಿ

ತಾಲೂಕಿನಲ್ಲಿ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಜಲಮರುಪೂರಣ ಅಭಿಯಾನ: ಶಾಸಕ ಪೂಂಜ

Photo Credit :

ತಾಲೂಕಿನಲ್ಲಿ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಜಲಮರುಪೂರಣ ಅಭಿಯಾನ: ಶಾಸಕ ಪೂಂಜ

ಬೆಳ್ತಂಗಡಿ: ಅಂತರ್ಜಲ ಕುಸಿತದಿಂದ ನೀರಿನ ಅಭಾವವನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಮಳೆ ನೀರು ಶೇಖರಣೆ ಮತ್ತು ಸಂರಕ್ಷಣೆ ಮೂಲಕ ಜಲಮರುಪೂರಣ ಅಭಿಯಾನ ಕುರಿತು ಶಾಸಕ ಹರೀಶ ಪೂಂಜ ಅವರು ಗ್ರಾ.ಪಂ. ಪಿಡಿಒಗಳು ಹಾಗೂ ಅಧಿಕಾರಿಗಳೊಂದಿಗೆ ಗುರುವಾರ ಬೆಳ್ತಂಗಡಿ ತಾ.ಪಂ. ಸಭಾಂಗಣದಲ್ಲಿ ಚರ್ಚೆ ನಡೆಸಿ ಸಮಾಲೋಚನಾ ಸಭೆ ನಡೆಸಿದರು.

48 ಗ್ರಾಮ ಪಂಚಾಯಿತಿ ಪಿಡಿಒಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ಮಾತನಾಡಿದ ಶಾಸಕ ಪೂಂಜ, ಜಲ-ಪರಿಸರ ಸಂರಕ್ಷಣ ತಜ್ಞ ಶ್ರೀಪಡ್ರೆ ಅವರು 20 ವರ್ಷಗಳ ಹಿಂದೆ ಮಳೆ ಕೊಯ್ಲು ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಆದರೆ ಅದನ್ನು ಕಡೆಗಣಿಸಿದ್ದರಿಂದ ದ.ಕ.ಜಿಲ್ಲೆಗೆ ಬರ ಅಧ್ಯಯನ ತಂಡ ಬರುವ ಸ್ಥಿತಿ ಬಂದೊದಗಿದೆ. ಮಳೆ ಪ್ರಮಾಣ ಕಡಿಮೆಯಾದ್ದರಿಂದ ಮುಂದಿನ ಬೇಸಿಗೆ ಎದುರಿಸಲು ನಾವೆಲ್ಲ ಸಿದ್ಧರಿರಬೇಕಾಗಿರುವುದು ಅನಿವಾರ್ಯ. ಮಳೆ ನೀರು ಸಂರಕ್ಷಿಸುವ ದೃಷ್ಟಿಯಿಂದ ತಾಲೂಕಲ್ಲಿ ಪ್ರಥಮ ಬಾರಿಗೆ ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳವಲ್ಲಿ ಗಂಭೀರ ಚಿಂತನೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ತಾಲೂಕಿನ ಜನತೆ, ಸಂಘಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಕೈಜೋಡಿಸಬೇಕಾಗಿದೆ ಎಂದರು.

ತಾಲೂಕಲ್ಲಿ 9,713 ಖಾಸಗಿ ಹಾಗೂ 618 ಸರಕಾರಿ ಬೋರ್‍ವೆಲ್‍ಗಳಿದೆ. ಇದರಲ್ಲಿ 272 ಸರಕಾರಿ ಹಾಗೂ 935 ಖಾಸಗಿ ಬೋರ್‍ವೆಲ್‍ಗಳು ನಿರುಪಯುಕ್ತವಾಗಿವೆ. ಈ ನಿಟ್ಟಿನಲ್ಲಿ 81 ಗ್ರಾ.ಪಂ.ನಿಂದ ನೂರು ಸರಕಾರಿ ಬೋರ್‍ವೆಲ್ ಮರುಪೂರಣ ಗುರಿ ಇರಿಸಿಕೊಳ್ಳಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಯಾವುದಾದರು ಸರಕಾರಿ ಅನುದಾನದ ಮೂಲಕ ನೀಡಲಾಗುವುದು. ನೀರಿನ ಸಂರಕ್ಷಣೆ ವಿಚಾರದಲ್ಲಿ ನಾನು 24 ಗಂಟೆಯೂ ಸೇವೆಗೆ ಲಭ್ಯವಿರುತ್ತೇನೆ ಎಂದು ಭರವಸೆ ನೀಡಿದರು.

ತಾಲೂಕಿನಲ್ಲಿ ಈಗಾಗಲೇ ಬೋರ್‍ವೆಲ್ ಇದ್ದವರಿಗೆ ಎನ್‍ಒಸಿ ನೀಡಿದ್ದರೂ ಕಡ್ಡಾಯವಾಗಿ ಜಲ ಮರುಪೂರಣ ಮಾಡಬೇಕೆಂಬ ಮನವಿ ಮಾಡಬೇಕು. ಹೊಸ ಬೋರ್‍ವೆಲ್‍ಗೆ ಅನುಮತಿ ನೀಡುವ ಮೊದಲು ಕಡ್ಡಾಯ ಜಲಮರುಪೂರಣ ಅಳವಡಿಸಿದಲ್ಲಿ ಮಾತ್ರ ಎನ್‍ಒಸಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಜಿರೆ ಗ್ರಾಪಂ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಮಳೆ ಕೊಯ್ಲು ಕುರಿತಾಗಿ ಸಲಹೆ ನೀಡಿ, ವೈಜ್ಞಾನಿಕ ರೀತಿಯಲ್ಲಿ ಕೊಳವೆಬಾವಿಗೆ ಮರುಪೂರಣವಾದಲ್ಲಿ ಅಭಿಯಾನ ಯಶಸ್ವಿಯಾಗಲಿದೆ. ಇಂಗುಗುಂಡಿ ನಿರ್ಮಾಣ ಹಾಗೂ ಗಿಡ ನೆಟ್ಟು ಪೆÇೀಷಿಸುವ ಕುರಿತಾಗಿ ಸಲಹೆ ನೀಡಿದರು.
ಮಡಂತ್ಯಾರು ಗ್ರಾಪಂ ಪಿಡಿಒ ನಾಗೇಶ್ ಮಾತನಾಡಿ, ಸರಳ ರೀತಿಯಲ್ಲಿ ನೀರಿಂಗಿಸುವ ವಿಧಾನವನ್ನು ಸಭೆಯಲ್ಲಿ ವಿವರಿಸಿದರು.

ಹೊಸಂಗಡಿ ಗ್ರಾಪಂ ಪಿಡಿಒ ಗಣೇಶ್ ಮಾತನಾಡಿ, ಗ್ರಾ.ಪಂ.ನಲ್ಲಿ ಜಲ, ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡಿರುವ ಕುರಿತು ಸಭೆಗೆ ಮಾಹಿತಿ ನೀಡಿದರು. 48 ಗ್ರಾಪಂ ಪಿಡಿಒಗಳಿಂದ ಮಾಹಿತಿ ಸಂಗ್ರಹಿಸಿ, ಸಲಹೆಗಳನ್ನು ನೀಡಿದರು. ಎಲ್ಲಾ ಗ್ರಾಪಂನಲ್ಲಿ ಈಗಿರುವ ಸರಕಾರಿ ಹಾಗೂ ಖಾಸಗಿ ಬೋರ್‍ವೆಲ್‍ಗಳ ಪೈಕಿ ಮರು ಜಲಪೂರಣ ಎಷ್ಟು ಬೋರ್‍ವೆಲ್‍ಗಳನ್ನು ಮಾಡಲಾಗುತ್ತದೆ ಎಂದು ಪಿಡಿಒಗಳು ಅಂಕಿ ಅಂಶಗಳನ್ನು ಸಭೆಯಲ್ಲಿ ನೀಡಿದರು. ನರೇಗಾ ಮೂಲಕ ಇಂಗುಗುಂಡಿ ನಿರ್ಮಾಣದ ಕುರಿತು ಚರ್ಚೆ ನಡೆಯಿತು. ಸರಕಾರಿ ಜಾಗದಲ್ಲಿ ಸಂಘಸಂಸ್ಥೆಗಳ ಒಗ್ಗೂಡಿಕೆಯಿಂದ ಇಂಗುಗುಂಡಿ ರಚಿಸುವಂತೆ ಸೂಚಿಸಲಾಯಿತು.

See also  ತುಂಬೆಯ ನೂತನ ವೆಂಟೆಡ್ ಡ್ಯಾಂನ ಭದ್ರತಾಗೋಡೆ ಕುಸಿತ!

ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾ.ಪಂ. ಇಒ ಕೆ.ಇ.ಜಯರಾಂ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ತಾ.ಪಂ. ಸದಸ್ಯರು, ಪಿಡಿಒ, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀಪಡ್ರೆ , ಜೋಸೆಫ್ ಜತೆ ಕಾರ್ಯಾಗಾರ: ಜಲಮರುಪೂರಣಕ್ಕಾಗಿ ಜಲತಜ್ಞ ಶ್ರೀಪಡ್ರೆ ಹಾಗೂ ಪ್ರಾಧ್ಯಾಪಕ ಜೋಸೆಫ್ ಮಡಂತ್ಯಾರು ಅವರ ಮಾರ್ಗದರ್ಶನದೊಂದಿಗೆ ಸಂಘಸಂಸ್ಥೆಗಳು, ತಾಲೂಕು ಮಟ್ಟದ ಅಧಿಕಾರಿಗಳು, ಧಾರ್ಮಿಕ ಸಂಸ್ಥೆ ಮುಖಂಡರು, ಜನ ಪ್ರತಿನಿಧಿಗಳನ್ನು ಜತೆಗೂಡಿಸಿ ಮಳೆ ಕೊಯ್ಲು ಮರುಪೂರಣದ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಮುಂದಿನ ವಾರ ಗುರುವಾಯನಕೆರೆ ಕಿನ್ಯಮ ಸಭಾಭವನದಲ್ಲಿ ಕಾರ್ಯಾಗಾರ ನಡೆಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪೊಟೊ 27 ಡಿಎಲ್ ಎಂಎಲ್‍ಎ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು