ಪುಣೆ: ಶನಿವಾರ ಕೊಂಧ್ವಾ ಪ್ರದೇಶದ ತಲಾಬ್ ಮಸೀದಿ ಹತ್ತಿರದ ವಸತಿ ಸಮುಚ್ಚಯದ 60 ಅಡಿ ಎತ್ತರದ ಗೋಡೆ ಕುಸಿದು 15ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬಿಹಾರ, ಬಂಗಾಳದಿಂದ ಕೂಲಿ ಕೆಲಸಕ್ಕೆ ಬಂದಿದ್ದ 15 ಮಂದಿ ಘಟನೆಯಲ್ಲಿ ದುರ್ಮರಣರಾಗಿದ್ದಾರೆ.
ಪುಣೆಯಲ್ಲಿ ಸುರಿದ ಭಾರೀ ಮಳೆಗೆ ಗೋಡೆ ಕುಸಿದು ಈ ಅವಘಡ ಸಂಭವಿಸಿದೆ. ಮಧ್ಯರಾತ್ರಿ ಸುಮಾರು 1.45ರ ವೇಳೆ ಕಾಂಪೌಂಡ್ ಗೋಡೆ ನೆಲಕ್ಕುರುಳಿದೆ. ಎನ್ ಡಿಆರ್ ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.