News Kannada
Thursday, February 09 2023

ಕರಾವಳಿ

ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳಿಂದ ಮೂಡುಬಿದಿರೆ ಮಾರ್ಕೆಟ್ ಜಂಟಿ ಸರ್ವೇ

Photo Credit :

ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳಿಂದ ಮೂಡುಬಿದಿರೆ ಮಾರ್ಕೆಟ್ ಜಂಟಿ ಸರ್ವೇ

ಮೂಡುಬಿದಿರೆ: ಇಲ್ಲಿನ ಪುರಸಭಾ ಮಾರುಕಟ್ಟೆಯ ಜಂಟಿ ಸಮೀಕ್ಷೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ಮೇರೆಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಬೆಂಗಳೂರು ವೃತ್ತದ ಉಪ ಪುರಾತತ್ವಶಾಸ್ತ್ರಜ್ಞ ಅಧೀಕ್ಷಕ ಕೆ.ಪಿ. ಮೋಹನ್‍ದಾಸ್ ಅವರ ನೇತೃತ್ವದಲ್ಲಿ ಮಂಗಳವಾರ ಜಂಟಿ ಸಮೀಕ್ಷೆ ನಡೆಯಿತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ಜೈಸನ್ ತಾಕೊಡೆ ಮತ್ತು ಪುರಸಭಾ ಮುಖ್ಯಾಧಿಕಾರಿ ಇಂದು ಎಂ. ಅವರು ಸಮ್ಮುಖದಲ್ಲಿ ಸಂರಕ್ಷಿತ ಸ್ಮಾರಕವಾದ ಮೂಡುಬಿದಿರೆ ಅರಮನೆಯಿಂದ, ಮೂಡುಬಿದಿರೆ ಮಾರುಕಟ್ಟೆ ಕಟ್ಟಡದ ಅಂತರವನ್ನು ಜಿಪಿಎಸ್ ಆಧಾರಿತ ಮಾಪನಾ ಯಂತ್ರದ ಮೂಲಕ ಅಳೆಯಲಾಯಿತು.

ಸಮೀಕ್ಷೆ ವೇಳೆ ಸಂರಕ್ಷಿತ ಸ್ಮಾರಕದ ಪರಿಧಿಯಿಂದ ಮೂಡುಬಿದಿರೆ ಮಾರುಕಟ್ಟೆ ಕಟ್ಟಡದ ಅಂತರ 190 ಮೀಟರ್ ಇದೆ ಎಂದು ದೃಢಪಟ್ಟಿದ್ದು, ಮೂಡುಬಿದಿರೆ ಮಾರುಕಟ್ಟೆ ಕಟ್ಟಡ ಪುರಾತತ್ವ ಸ್ಮಾರಕದ ನಿಯಂತ್ರಿತ ವಲಯದಲ್ಲಿ ಇರುವುದು ದೃಢಪಟ್ಟಿದೆ. ಹಾಗಾಗಿ ನಿಯಮಾನುಸಾರ ನಿರಕ್ಷೇಪಣಾ ಪತ್ರ ಪಡೆಯದೆ ಕಾಮಗಾರಿ ನಡೆಸುವಂತಿಲ್ಲ.

ಪುರಾತತ್ವ ಇಲಾಖೆಯ ಅನುಮತಿ ಸಿಗದಿದ್ದರೂ ಕಾಮಗಾರಿ ಆರಂಭಿಸಲಾಗಿದೆ. ಆದ್ದರಿಂದ ಕಾಮಗಾರಿಗೆ ತಡೆ ನೀಡಬೇಕು ಎಂದು ಪತ್ರಕರ್ತ ಜೈಸನ್ ತಾಕೊಡೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪುರಾತತ್ವ ಇಲಾಖೆಯ ನಿರಕ್ಷೇಪನಾ ಪತ್ರ ಪಡೆಯದೆ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹೈಕೋರ್ಟ್‍ಗೆ ಅವಕಾಶವಿದೆ
ಸಂರಕ್ಷಿತ ಸ್ಮಾರಕ ಮೂಡುಬಿದಿರೆ ಚೌಟರ ಅರಮನೆಯ ಸಮೀಪ ನಿರ್ಮಾಣವಾಗುತ್ತಿರುವ ಮೂಡುಬಿದಿರೆ ಮಾರುಕಟ್ಟೆ ಕಾಮಗಾರಿಗೆ ಸಂಬಂಧಪಟ್ಟಂತೆ ಜೈಸನ್ ತಾಕೊಡೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾ. ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಹೈಕೋರ್ಟ್ ಜೂನ್ 11ರಂದು ಮಧ್ಯಂತರ ತಡೆ ನೀಡಿತ್ತು.

ಈ ಮಧ್ಯಂತರ ಆದೇಶ ನೀಡಿದ್ದು ಸಂರಕ್ಷಿತ ಪ್ರದೇಶಗಳನ್ನು ಕಾಪಾಡುವುದು ಸಾರ್ವಜನಿಕ ಹಿತಾಸಕ್ತಿಯ ಆದ್ಯತೆಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟು, ಕಾಮಗಾರಿ ನಿಲ್ಲಿಸುವಂತೆ ಮೂಡುಬಿದಿರೆ ಪುರಸಭೆಗೆ ಮಧ್ಯಂತರ ಆದೇಶ ನೀಡಿತ್ತು. ಪುರಾತತ್ವ ಇಲಾಖೆಯವರು ವಿವಾದಿತ ಪ್ರದೇಶದ ಸರ್ವೇ ಕಾರ್ಯ ನಡೆಸಿ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸರಕಾರಕ್ಕೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿತ್ತು.
ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸರ್ವೇಯರ್ ಮುರಳಿ ಮೋಹನ್, ಕಾರ್ಕಳ ಸಬ್‍ಸರ್ಕಲ್ ಸಂರಕ್ಷಣಾ ಸಹಾಯಕ ಗೋಕುಲ್, ಸ್ಮಾರಕ ರಕ್ಷಕ್ ಆರ್.ಎನ್. ನಾಯಕ್ ಜಂಟಿ ಸರ್ವೆಯಲ್ಲಿ ಉಪಸ್ಥಿತರಿದ್ದರು.

See also  ಭಾರೀ ಮಳೆಗೆ ಆವರಣ ಗೋಡೆ ಕುಸಿದು ಮಹಿಳೆ ಮೃತ್ಯು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

193
Deevith S K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು