ಪುತ್ತೂರು: ಶಾಲೆಗೆ ಹೋಗುತ್ತಿರುವ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಜು.5ರಂದು ಮಾಡ್ನೂರು ಗ್ರಾಮದ ಪಳನೀರು ಎಂಬಲ್ಲಿ ನಡೆದಿದ್ದು, ಅತ್ಯಾಚರ ಎಸಗಿರುವ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಶಾಲೆಗೆ ಹೋಗುವ ಸಮಯ ಪಳನೀರು ಎಂಬಲ್ಲಿ ನಿನ್ನ ತಾಯಿ ಸುಸ್ತಾಗಿ ಗುಡ್ಡೆಯಲ್ಲಿ ಬಿದ್ದಿದ್ದಾರೆ ಎಂದು ಹೇಳಿ ಆರೋಪಿ ಅಜಿತ್ ಎಂಬವ ಆಕೆಯನ್ನು ಕೈ ಹಿಡಿದು ಎಳೆದು ಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚರಕ್ಕೆ ಒಳಗಾದ ಬಾಲಕಿಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಅಜಿತ್‍ನನ್ನು ಸಂಪ್ಯ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಕಲಂ 376(2)(1), ಪೋಕ್ಸೊ ಮತ್ತು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ.