News Kannada
Tuesday, September 27 2022

ಕರಾವಳಿ

ಗದ್ದೆಯಲ್ಲಿ ಕೃಷಿ ಶಿಕ್ಷಣ: 1 ಎಕರೆ ಗದ್ದೆಯನ್ನು ನಾಟಿ ಮಾಡಿದ ಕಡಂದಲೆ ಹೈಕಳು - 1 min read

Photo Credit :

ಗದ್ದೆಯಲ್ಲಿ ಕೃಷಿ ಶಿಕ್ಷಣ: 1 ಎಕರೆ ಗದ್ದೆಯನ್ನು ನಾಟಿ ಮಾಡಿದ ಕಡಂದಲೆ ಹೈಕಳು

ಮೂಡುಬಿದಿರೆ : ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲಿನರಾಗಿರುವ ಕಾಲೇಜು ಮಕ್ಕಳಿಗೆ ಗದ್ದೆ ಅಂದರೆ ಏನು? ಬೇಸಾಯ ಅಂದರೆ ಹೇಗೆ? ನಾಟಿ ಹೇಗೆ ಮಾಡಬೇಕು ಎಂಬ ವಿಷಯದ ಬಗ್ಗೆ ಕ್ಲಾಸಿನಲ್ಲಿ ಪಾಠ ಮಾಡಿದರೆ ಪ್ರಯೋಜವಾಗುವುದಿಲ್ಲ. ಅದರ ಬಗ್ಗೆ ಮನದಟ್ಟಾಗಬೇಕಾದರೆ ಮಕ್ಕಳಿಗೆ ಪ್ರಾಕ್ಟಿಕಲ್ ನಾಲೇಜ್ ಇರಲೇಬೇಕು ಇದಕ್ಕಾಗಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯ ಅನಾವರಣವನ್ನು ಕಡಂದಲೆಯ ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಕೃಷಿ ಶಿಕ್ಷಣವನ್ನು ಭಾನುವಾರ ನೀಡಲಾಯಿತು.

ಮೂಡಬಿದ್ರೆ ತಾಲೂಕಿನ ಕಡಂದಲೆ ಗ್ರಾಮದ ರವೀಂದ್ರ ಶೆಟ್ಟಿಯವರ ಗದ್ದೆಯಲ್ಲಿ. ಮಂಗಳೂರು ತಾಲೂಕಿನ ಐಕಳ ಪೊಂಪೈ ಕಾಲೇಜಿನ ಎನ್‍ಎಸ್‍ಎಸ್ ಘಟಕ ಮತ್ತು ಯೂತ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಸುಮಾರು 120 ಕಾಲೇಜು ವಿದ್ಯಾರ್ಥಿಗಳು ಭತ್ತದ ನಾಟಿ ಕೈಕಂಕರ್ಯದಲ್ಲಿ ಮನಪೂರ್ವಕವಾಗಿ ಭಾಗವಹಿಸಿ ಗದ್ದೆಗೆ ಇಳಿದು ಸುಮಾರು 1 ಎಕ್ರೆ ಗದ್ದೆಯನ್ನು ನಾಟಿ ಮಾಡಿ ಮುಗಿಸಿದ್ದಾರೆ.
ವಿದ್ವಾನ್ ಸ್ಕಂದ ಭಟ್ ಕಡಂದಲೆ ಅವರು ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು . ದಕ್ಷಿಣ ಕನ್ನಡದ ಜಿಲ್ಲಾ ಪಂಚಾಯತ್‍ನ ಮಾಜಿ ಅಧ್ಯಕ್ಷ ಹಾಗು ಕೃಷಿಕ ಸುಚರಿತ ಶೆಟ್ಟಿಯವರು ಮಾತನಾಡಿ ಇಂದು ಯುವ ಸಮುದಾಯ ಕೃಷಿ ಬಗ್ಗೆ ವಿಮುಖರಾಗುತ್ತಿರುವುದು ಖೇದದ ಸಂಗತಿ, ಕೃಷಿ ಉಳಿಯಬೇಕಾದರೆ ಯುವಕರು ಕೃಷಿಯ ಬಗ್ಗೆ ಆಸಕ್ತಿ ಬೆಳೆಸಬೇಕು. ಪೊಂಪೈ ಕಾಲೇಜಿನ ವಿದ್ಯಾ ಸಂಸ್ಥೆಯ ಎನ್‍ಎಸ್‍ಎಸ್ ಘಟಕ ತನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯವನ್ನು ಕಲಿಸಿಕೊಡುತ್ತಿರುವುದು ಒಳ್ಳೆಯ ಕೆಲಸ ಎಂದು ಅವರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಪಾಲಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೀಲಾಧರ್ ಪೂಜಾರಿ, ಸಂತೋಷ್ ಭಂಡಾರಿ, ಕರಿಯ ಮಡಿವಾಳ, ಕರಿಯ, ಎನ್‍ಎಸ್‍ಎಸ್ ಘಟಕದ ಅಧಿಕಾರಿ ಡಾ.ವಿಕ್ಟರ್ ವಾಜ್,ಸಿಲ್ವಿಯ ಪಾಯಸ್,ಯೂತ್ ರೆಡ್ ಕ್ರಾಸ್‍ನ ಪ್ರೋಗ್ರಾಮ್ ಅಧಿಕಾರಿ ಕ್ಲಿಸ್ಟನ್ ಡಿಸೋಜ, ಶ್ರುತಿ, ಪ್ರಜ್ಞಾ ಮರಿಯ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಮೊದಲ ಬಾರಿಗೆ ನಾನು ಗದ್ದೆಗೆ ಇಳಿದಿದ್ದೇನೆ,ತುಂಬ ಖುಷಿಯಾಗುತ್ತಿದೆ, ನಮ್ಮ ರೈತರು ಒಂದು ಹೊತ್ತಿನ ತುತ್ತಿಗಾಗಿ ಎಷ್ಟು ಕಷ್ಟ ಪಡುತ್ತಿದ್ದಾರೆಂದು ಇಲ್ಲಿಗೆ ಬಂದಾಗ ತಿಳಿಯಿತು.ನಮ್ಮ ಕೃಷಿ ಬದುಕು ಉಳಿಯಬೇಕು ಅದಕ್ಕಾಗಿ ಕೃಷಿಯಿಂದ ವಿಮುಖರಾಗುವ ಇಂದಿನ ಯುವ ಸಮುದಾಯಕ್ಕೆ ಕೃಷಿಯ ಬಗ್ಗೆ ಶಿಕ್ಷಣ ನೀಡುವ ಅಗತ್ಯ ಇದೆ : ಅರ್ಪಿತಾ (ವಿದ್ಯಾರ್ಥಿನಿ)

• ನಮ್ಮ ಎನ್‍ಎಸ್‍ಎಸ್ ಘಟಕ ಮತ್ತು ಯೂತ್ ರೆಡ್ ಕ್ರಾಸ್ ಘಟಕದ ಅಶ್ರಯದಲ್ಲಿ ಮಕ್ಕಳಿಗೆ ಕೃಷಿಯ ಬಗ್ಗೆ ಅಭಿರುಚಿ ಬೆಳಯಲಿ ಎಂಬ ನಿಟ್ಟಿನಲ್ಲಿ ನಾವು ಪ್ರತಿ ವರ್ಷ ನಮ್ಮ ನಡೆ ಕೃಷಿ ಕಡೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳತ್ತಿದ್ದೇವೆ,ನಮ್ಮ ಕಾಲೇಜಿನ 120 ವಿಧ್ಯಾರ್ಥಿಗಳು ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ಭಾಗವಹಿಸಿದ್ದಾರೆ . ಇಂತಹ ಕಾರ್ಯಕ್ರಮದಿಂದ ಪಾಠ ಜೊತೆ ಪಠ್ಯೇತರ ಚಟುವಟಿಕೆಗಳ ನಡೆಸುವ ಮುಖೇನ ಮಕ್ಕಳಲ್ಲಿ ಅರಿವು ಮೂಡಿಸಲು ಸಾಧ್ಯವಿದೆ : ಡಾ.ವಿಕ್ಟರ್ (ಯೋಜನಾಧಿಕಾರಿ, ಪೊಂಪೈ ಕಾಲೇಜ್ ಐಕಳ)

See also  ಧರ್ಮಸ್ಥಳ ಲಕ್ಷದೀಪೋತ್ಸವ: ನ.17ರಂದು ಸ್ವಚ್ಛತಾ ಕಾರ್ಯಕ್ರಮ

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು