News Kannada
Monday, September 26 2022

ಕರಾವಳಿ

ತಹಶೀಲ್ದಾರ್ ವರ್ಗಾವಣೆ ವಿರುದ್ಧ ಪ್ರತಿಭಟನೆ - 1 min read

Photo Credit :

ತಹಶೀಲ್ದಾರ್ ವರ್ಗಾವಣೆ ವಿರುದ್ಧ ಪ್ರತಿಭಟನೆ

ಸುಳ್ಯ. ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರ ವರ್ಗಾವಣೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ವರ್ಗಾವಣೆ ವಿರೋಧಿಸಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ- ಕರ್ನಾಟಕ ವತಿಯಿಂದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಮಾತನಾಡಿ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿರುವ ಸುಳ್ಯ ತಹಶೀಲ್ದಾರ್ ಅವರನ್ನು ರಾಜಕೀಯ ಒತ್ತಡದಿಂದ ವರ್ಗಾವಣೆ ಮಾಡಿಸಲಾಗಿದೆ. ಇದರ ವಿರುದ್ಧ ಅಹೋರಾತ್ರಿ ಧರಣಿ ನಡೆಸಲಾಗುವುದು. ಸಹಾಯಕ ಕಮೀಷನರ್ ಅಥವಾ ಜಿಲ್ಲಾಧಿಕಾರಿ ಸುಳ್ಯಕ್ಕೆ ಬಂದು ವರ್ಗಾವಣೆ ಹಿಂಪಡೆಯುತ್ತೇವೆ ಎಂದು ಭರವಸೆ ನೀಡದಿದ್ದರೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಮಳೆ, ಪ್ರಾಕೃತಿಕ ವಿಕೋಪದಿಂದ ಜನರು ತತ್ತರಿಸಿರುವ ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಅಕ್ಷಮ್ಯ ಎಂದು ಹೇಳಿದರು.

ಬಳಿಕ ದೂರವಾಣಿ ಮೂಲಕ ಪುತ್ತೂರು ಸಹಾಯಕ ಕಮೀಷನರ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿ ಅವರು ನೀಡಿದ ಭರವಸಯೆ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ತಹಶೀಲ್ದಾರ್ ವರ್ಗಾವಣೆ ತಡೆ ಹಿಡಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಮುಖಂಡರು ಎಚ್ಚರಿಸಿದ್ದಾರೆ. ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ಸುಳ್ಯ ತಾಲೂಕು ಅಧ್ಯಕ್ಷ ಸುಂದರ ಪಾಟಾಜೆ, ಮುಖಂಡರಾದ ಕೆ.ಕೆ.ನಾಯ್ಕ್, ವಿಠಲ ರೈ, ಕುಶಾಲಪ್ಪ, ವಿಜಯ ಪಾಟಾಜೆ, ಪರಮೇಶ್ವರ ಮತ್ತಿತರರು ಮಾತನಾಡಿದರು.

ಐದೇ ತಿಂಗಳಲ್ಲಿ ತಹಶೀಲ್ದಾರ್ ವರ್ಗಾವಣೆ:
ಎನ್.ಎ.ಕುಂಞಿ ಅಹಮ್ಮದ್ ಅವರು ಕಳೆದ ಫೆಬ್ರವರಿಯಲ್ಲಿ ಸುಳ್ಯ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿದ್ದರು. ಕಂದಾಯ ಇಲಾಖೆಯಲ್ಲಿ ತ್ವರಿತ ಮತ್ತು ಜನಪರ ಕೆಲಸ ಕಾರ್ಯಗಳ ಮೂಲಕ ಜನರಿಗೆ ಹತ್ತಿರವಾಗಿದ್ದರು. ನಗರ ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ಕುಂಞಿ ಅಹಮ್ಮದ್ ಅವರು ನಗರ ಸ್ವಚ್ಛತೆ, ವಿವಿಧ ಮೂಲಭೂತ ಅವಶ್ಯಕತೆಯ ಪೂರೈಕೆಗೆ ಒತ್ತು ನೀಡಿದ್ದರು. ಇದೀಗ ಅವರಿಗೆ ವರ್ಗಾವಣೆಯ ಆದೇಶ ಆಗಿದ್ದು ವರ್ಗಾವಣೆಯ ವಿರುದ್ಧ ಎಲ್ಲೆಡೆಯಿಂದ ತೀವ್ರ ಆಕ್ರೋಶ ಉಂಟಾಗಿದೆ. ತಹಶೀಲ್ದಾರ್ ವರ್ಗಾವಣೆ ರದ್ದುಪಡಿಸಬೇಕು ಎಂದು ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ವರ್ಗಾವಣೆ ರದ್ದುಪಡಿಸಬೇಕು ಎಂದು ವಿವಿಧ ಸಂಘಟನೆಗಳು, ಸಾರ್ವಜನಿಕರು ಆಗ್ರಹಿಸಿದ್ದಾರೆ.

See also  ಅಕ್ರಮ ಮದ್ಯ ಸಾಗಾಟ ಪತ್ತೆ: ಓರ್ವನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು