News Kannada
Sunday, September 25 2022

ಕರಾವಳಿ

ರೋಟರಿ ಸಂಸ್ಥೆಯಿಂದ ಜನಪರ ಸೇವೆ: ಜೋಸೆಫ್ ಮಾಥ್ಯು - 1 min read

Photo Credit :

ರೋಟರಿ ಸಂಸ್ಥೆಯಿಂದ ಜನಪರ ಸೇವೆ: ಜೋಸೆಫ್ ಮಾಥ್ಯು

ಮಂಗಳೂರು: “ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಪ್ರತಿನಿಧಿಗಳು ಜಿಲ್ಲಾಮಟ್ಟದ ವಿವಿಧ ಕಾರ್ಯಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉನ್ನತ ತರಬೇತಿ ಪಡೆದು, ಅದರ ಸದುಪಯೋಗವನ್ನು ರೋಟರಿ ಧ್ಯೇಯೋದ್ದೇಶಗಳನ್ನು ಪಾಲಿಸಿ ಜನಪರ ಸೇವಾ ಯೋಜನೆಗಳನ್ನು ಹಮ್ಮಿಕೊಂಡು, ಕಾರ್ಯಗತಗೊಳಿಸಿ ಯಶಸ್ಸು ಸಾಧಿಸಬೇಕು” ಎಂದು ರೋಟರಿ ಜಿಲ್ಲಾ 3181ರ ಗವರ್ನರ್ ರೋ| ಜೋಸೆಪ್ ಮಾಥ್ಯು ಹೇಳಿದರು.

ಅವರು ರೋಟರಿ ಕ್ಲಬ್ ಮಂಗಳೂರು ಸಿಟಿ ಮತ್ತು ರೋಟರಿ ಜಿಲ್ಲಾಡಳಿತ ಸಮಿತಿ ಜಂಟಿ ಆಶ್ರಯದಲ್ಲಿ ನಡೆದ ಪೋಲಿಯೋ ಪ್ಲಸ್ ಅಭಿಯಾನ, ಸದಸ್ಯತ್ವ ಅಭಿವೃದ್ಧಿ ಅಭಿಯಾನ, ಮಾಹಿತಿ ಹಕ್ಕು ಕಾಯಿದೆ, ಸಾಂಸ್ಥಿಕ ಸಾಮಾಜಿಕ ಜವಬ್ದಾರಿಯ ಬಗ್ಗೆ ಈಚೆಗೆ ನಗರದ ಕೋರ್ಡೆಲ್ ಚರ್ಚ್ ಹಾಲ್‍ನಲ್ಲಿ ಜರಗಿದ “ಹೊಸ ಚಿಗುರು” ಕಾರ್ಯಗಾರವನ್ನು ಉದ್ಘಾಟಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಪ್ರವಾಹ, ಭೂಕುಸಿತ, ಹೆದ್ದಾರಿ, ಸೇತುವೆ ಕುಸಿತದಿಂದ ಸಂಪರ್ಕ ನಾಶವಾಗಿ, ರಸ್ತೆ, ರೈಲು, ಸಾರಿಗೆ ಸ್ಥಗಿತದ ಆಡಚಣೆಯನ್ನು ಲೆಕ್ಕಿಸದೆ ಕಷ್ಟಕರ ಪ್ರಯಾಣ ಬೆಳೆಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸದಸ್ಯರ ಉತ್ಸಾಹ ಮತ್ತು ರೋಟರಿ ಸಂಸ್ಥೆಯ ಮೇಲಿನ ಅಭಿಮಾನ ಇದು ರೋಟರಿ ಸಂಸ್ಥೆಗೆ ಸಂದ ಗೌರವ ಎಂದು ಶ್ಲಾಘಿಸಿ ಕಾರ್ಯಗಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರೋಟರಿ ಕ್ಲಬ್ ಮಂಗಳೂರು ಸಿಟಿಯ ಅಧ್ಯಕ್ಷರಾದ ರೋ| ಡಾ| ರಂಜನ್‍ರವರು ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಕಾರ್ಯಗಾರದ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ನಿಯೋಜಿತ ಗವರ್ನರ್ ರೋ| ರವೀಂದ್ರ ಭಟ್, ಜಿಲ್ಲಾಡಳಿತ ಕಾರ್ಯದರ್ಶಿ ರೋ| ಎಂ.ಜಿ. ಬೈಂದೂರು, ಸಂಘಟನಾ ಅಧ್ಯಕ್ಷ ರೋ| ಡಾ| ರೋಹನ್ ಮೊನಿಸ್, ಕಾರ್ಯದರ್ಶಿ ಪ್ರಶಾಂತ್ ರೈ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ರಾಷ್ಟ್ರೀಯ ಪೋಲಿಯೋ ಪ್ಲಸ್ ಸಮಿತಿಯ ಉಪಾಧ್ಯಕ್ಷ ಶಿವಮೊಗ್ಗ ಮೂಲದ ರೋ| ಡಾ| ಪಿ. ನಾರಾಯಣ, ಪೋಲಿಯೋ ಪ್ಲಸ್ ಅಭಿಯಾನದ ಬಗ್ಗೆ, ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷ ಉಡುಪಿ ಮೂಲದ ಡಾ| ರವೀಂದ್ರನಾಥ್ ಶ್ಯಾನ್‍ಬೋಗ್ ಗ್ರಾಹಕರ ಹಕ್ಕು ಕಾಯಿದೆಯ ಬಗ್ಗೆ, ಎಂ.ಆರ್.ಪಿ.ಎಲ್. ಮಹಾ ಪ್ರಬಂಧಕರಾದ ಬಿ.ಎಚ್. ವಿ. ಪ್ರಸಾದ್, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಬಗ್ಗೆ ನಗರದ ಖ್ಯಾತ ರೋ| ಡಾ| ಎಸ್.ಆರ್. ನಾಯಕ್‍ರವರು ಶಿಶು ಮತ್ತು ತಾಯಿ ಆರೋಗ್ಯ ಮತ್ತು ಆರೈಕೆಯ ಬಗ್ಗೆ ಉಪನ್ಯಾಸ ನೀಡಿ ಸೂಕ್ತ ಮಾರ್ಗದರ್ಶನ ನೀಡಿದರು.

ಕೊಡಗು, ಮೈಸೂರು, ಚಾಮರಾಜನಗರ, ದ.ಕ. ಜಿಲ್ಲೆಯಿಂದ ಸುಮಾರು 500 ಪ್ರತಿನಿಧಿಗಳು ಭಾಗವಹಿಸಿದರು. ಶ್ರೀಮತಿ ಹೀನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಹಾಯಕ ಗವರ್ನರ್ ರೋ| ಸುಮಿತ್ ರಾವ್ ವಂದಿಸಿರು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಖ್ಯಾತ ಹುಲಿವೇಷ ಕುಣಿತ ಪ್ರದರ್ಶನವನ್ನು ಆಯೋಜಿಸಲಾಯಿತು.

See also  ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ಸವ ಪೂರಕವಾಗಲಿ : ಶಾಸಕ ಉಮನಾಥ್ ಕೋಟ್ಯಾನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು