News Kannada
Saturday, April 01 2023

ಕರಾವಳಿ

ಸಿಎಂ ಪರಿಹಾರ ನಿಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ 25ಕೋಟಿ ರೂಪಾಯಿ

Photo Credit :

ಸಿಎಂ ಪರಿಹಾರ ನಿಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ 25ಕೋಟಿ ರೂಪಾಯಿ

ಬೆಳ್ತಂಗಡಿ: ಪ್ರವಾಹ ಪೀಡಿತ ಕುಟುಂಬಗಳಿಗೆ ನೆರವಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ರೂ. 25 ಕೋಟಿ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಯೋಜನೆ ಅಧ್ಯಕ್ಷ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ. ಅದೇ ರೀತಿ ಬೆಳ್ತಂಗಡಿ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳ ಪುನರ್ ನಿರ್ಮಾಣಕ್ಕಾಗಿ ಯೋಜನೆಯ ವತಿಯಿಂದ ರೂ. 50 ಲಕ್ಷ ಮಂಜೂರು ಮಾಡಲಾಗಿದೆ ಎಂದು ಅವರು ಘೋಷಿಸಿದ್ದಾರೆ.

ಅವರು ಶನಿವಾರ ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಠಿ ಕರೆದು ಪರಿಹಾರದ ಮೊತ್ತಗಳ ಬಗ್ಗೆ ವಿವರ ನೀಡಿದರು.

ರೂ. 25 ಕೋಟಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪರಿಹಾರದ ಮೊತ್ತವನ್ನು ಪಾವತಿಸಲಾಗುವುದು ಎಂದರು.

ಬೆಳ್ತಂಗಡಿ ತಾಲೂಕಿನಲ್ಲಿ 174 ಮನೆಗಳು ಹಾನಿಯಾಗಿರುವ ವರದಿ ಲಭ್ಯವಿದ್ದು ಶಾಸಕರ ಮುಂದಾಳತ್ವದಲ್ಲಿ ಪುನರ್ ನಿರ್ಮಾಣದ ಕೆಲಸ ಪ್ರಾರಂಭಗೊಂಡಿರುತ್ತದೆ. ಶಾಸಕ ಹರೀಶ್ ಪೂಂಜಾರವರು ಈ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನಗಳು ಶ್ಲಾಘನಾರ್ಹವಾಗಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಉತ್ತಮ ಸಹಕಾರವನ್ನು ನೀಡುತ್ತಿವೆ. ಬೆಳ್ತಂಗಡಿ ತಾಲೂಕಿನ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆಯ ವತಿಯಿಂದ ರೂ. 50 ಲಕ್ಷ ಮೊತ್ತವನ್ನು ‘ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್ ಫಂಡ್‍ಗೆ’ ವರ್ಗಾಯಿಸಲಾಗುವುದು ಎಂದರು.

ಯೋಜನೆಯ ವತಿಯಿಂದ ಮಾಡಲಾದ ಕಾರ್ಯಗಳನ್ನು ವಿವರಿಸುತ್ತಾ ಅವರು ಈ ಬಾರಿಯ ಮಳೆಗಾಲದಲ್ಲಿ ನಮ್ಮ ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ನೆರೆ ಹಾನಿ ಸಂಭವಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾಂ, ಧಾರವಾಡ, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಗದಗ, ಹಾವೇರಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಸಮೀಕ್ಷೆಯಂತೆ ರಾಜ್ಯದಾದ್ಯಂತ 20,827 ಮನೆಗಳು ಹಾನಿಗೊಳಗಾಗಿವೆ. 28,288 ಕುಟುಂಬಗಳ ಕೃಷಿಭೂಮಿಗಳು ನೀರು ಪಾಲಾಗಿವೆ. ಕಡುಬಡವರು ಕಷ್ಟಪಟ್ಟು ಗಳಿಸಿಕೊಂಡ ಗೃಹೋಪಯೋಗಿ ವಸ್ತುಗಳು 22,711 ಕುಟುಂಬಗಳಲ್ಲಿ ನಾಶವಾಗಿವೆ. ಇದೊಂದು ಭೀಕರ ದುರಂತವಾಗಿದ್ದು ಇದರಿಂದ ಚೇತರಿಸಿಕೊಳ್ಳಲು ರಾಜ್ಯಕ್ಕೆ ಬಹಳಷ್ಟು ಸಮಯ ಬೇಕಾಗಬಹುದಾಗಿದೆ ಎಂದರು.

ತನ್ನ ವಿವಿಧ ಸಂಸ್ಥೆಗಳ ಮುಖಾಂತರ ಸಮಾಜ ಸೇವಾ ಕೆಲಸಗಳಲ್ಲಿ ತೊಡಗಿಕೊಂಡಿರುವ ಕ್ಷೇತ್ರ ಧರ್ಮಸ್ಥಳವು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದ ಅವರು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ತನ್ನ ಬೆಳ್ತಂಗಡಿ ತಾಲೂಕಿನ ಶಾಲಾ ಕಾಲೇಜಿಗಳಲ್ಲಿ ಓದುತ್ತಿರುವ ಬಾಧಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಘೋಷಿಸಿದೆ. ಯೂನಿಫಾರ್ಮ್ ಕಳೆದುಕೊಂಡವರಿಗೆ ಎರಡು ಜೊತೆ ಯೂನಿಫಾರ್ಮ್, ಅಗತ್ಯ ಬಿದ್ದಿರುವ ವಿದ್ಯಾಥಿಗಳಿಗೆ ಪಠ್ಯಪುಸ್ತಕಗಳು, ನೋಟ್‍ಬುಕ್, ಸ್ಕೂಲ್ ಬ್ಯಾಗ್, ಬಟ್ಟೆ, ಸಂಸ್ಥೆಯ ವಾಹನ ಹೋಗುತ್ತಿರುವಲ್ಲಿ ವಾಹನದ ವವಸ್ಥೆ, ಅಗತ್ಯವಿರುವ ಮಕ್ಕಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆಯನ್ನು ಘೋಷಿಸಿದೆ. ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂತ್ರಸ್ಥ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು, ಪ್ರಚಾರ್ಯ ತುರ್ತಾಗಿ ಭೇಟಿಯಾಗಲು ತಿಳಿಸಲಾಗಿದೆ ಎಂದರು.

See also  ಬಂಟ್ವಾಳಕ್ಕೆ ಮೊದಲ ಭಾರಿ ರಾಜ್ಯಪಾಲರ ಆಗಮನ

ಪೂರಕ ಮಾಹಿತಿ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್. ಎಚ್.ಮಂಜುನಾಥ್ ಅವರು ಇದುವರೆಗೆ ಸುಮಾರು 19,000 ಬೆಡ್‍ಶೀಟ್‍ಗಳನ್ನು ಹಂಚಲಾಗಿದೆ. ಮುಳುಗಡೆಯಾದ ಮನೆಗಳನ್ನು ಸ್ವಚ್ಛಗೊಳಿಸಲು ಸುಮಾರು 2 ಟನ್‍ನಷ್ಟು ಬ್ಲೀಚಿಂಗ್ ಪೌಡರ್ ಗಳನ್ನು ಒದಗಿಸಿಕೊಡಲಾಗಿದೆ. ನೆರೆ ಇಳಿದ ನಂತರ ಮನೆಗೆ ತೆರಳುತ್ತಿರುವ 4,990 ಕುಟುಂಬಗಳಿಗೆ ತಲಾ ರೂ. 1,000 ಮೌಲ್ಯದ ತುರ್ತು ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು ಕಡಿಮೆಯಾಗಿರುವ ಹಿನ್ನಲೆಯಲ್ಲಿ ತೀರ್ಥಹಳ್ಳಿಯಿಂದ ತಾಲೂಕಿನಿಂದ ಎರಡು ಲೋಡ್ ಹುಲ್ಲು ತರಿಸಲಾಗುತ್ತಿದ್ದು, ಹೊಳೆನರಸೀಪುರದಿಂದ ಸೋಮವಾರ ಮೂರು ಲೋಡ್ ಹುಲ್ಲನ್ನು ಒದಗಿಸಲಾಗುವುದು. ಇದಲ್ಲದೆ ಸಮಸ್ಯೆಗೊಳಗಾಗಿರುವ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ. ಸ್ವಸಹಾಯ ಸಂಘಗಳ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಯೋಜನೆಯ ಕಾರ್ಯಕರ್ತರು ನೆರೆಪರಿಹಾರ ಕಾರ್ಯಕ್ರಮದಲ್ಲಿ ಈಗಾಗಲೇ ತೊಡಗಿಕೊಂಡಿದ್ದಾರೆ ಎಂದರು.

ವಿಪತ್ತು ನಿರ್ವಹಣಾ ವೇದಿಕೆ ಸ್ಥಾಪನೆ : ನೆರೆ ಹಾವಳಿ, ಭೂಕುಸಿತ, ಬಿರುಗಾಳಿ ಮುಂತಾದ ಪ್ರಕೋಪಗಳು ಪುನರಾವರ್ತಿಸುತ್ತಿರುವ ಹಿನ್ನಲೆಯಲ್ಲಿ ತುರ್ತು ರಕ್ಷಣೆಗೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆಗಳ ಪೈಕಿ ಜನಜಾಗೃತಿ ವೇದಿಕೆ, ಪ್ರಗತಿಬಂಧು ಒಕ್ಕೂಟಗಳು, ಜ್ಞಾನವಿಕಾಸ ಕೇಂದ್ರಗಳು, ಸ್ವಸಹಾಯ ಸಂಘಗಳು ಜಂಟಿ ಬಾಧ್ಯತಾ ಗುಂಪುಗಳು, ಸಕ್ರಿಯವಾಗಿದ್ದು ಇವರುಗಳಿಂದ ಆಯ್ದ ಸದಸ್ಯರ ತಂಡವೊಂದನ್ನು ಪ್ರತಿ ತಾಲೂಕು ಮಟ್ಟದಲ್ಲಿ ರಚಿಸಲಾಗುವುದು. ಪ್ರತಿಯೊಂದು ತಾಲೂಕಿನಲ್ಲಿಯೂ 100 ಸದಸ್ಯರುಗಳ ವಿಪತ್ತು ನಿರ್ವಹಣಾ ತಂಡವೊಂದನ್ನು ರಚಿಸಲಾಗುವುದು. ರಾಜ್ಯದಾದ್ಯಂತ ಸುಮಾರು 2 ಲಕ್ಷ ಸದಸ್ಯರುಗಳುಳ್ಳ ‘ವಿಪತ್ತು ನಿರ್ವಹಣಾ ವೇದಿಕೆ’ಯನ್ನು ಸ್ಥಾಪಿಸಲಾಗುವುದು. ಇವರಿಗೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯಿಂದ ತರಬೇತಿ ದೊರಕಿಸುವುದಲ್ಲದೆ, ಅಗತ್ಯವಿರುವ ಉಪಕರಣಗಳನ್ನು ದಾಸ್ತಾನು ಇರಿಸಲಾಗುವುದು. ಮುಂದಿನ ದಿನಗಳಲ್ಲಿ ಯಾವುದೇ ತಾಲೂಕಿನಲ್ಲಿ ಯಾವುದೇ ಪ್ರಾಕೃತಿಕ ವಿಕೋಪ ಉಂಟಾದಲ್ಲಿ ಕೂಡಲೇ ಸ್ಪಂದಿಸುವಂತೆ ವೇದಿಕೆಯು ಕಾರ್ಯನಿರ್ವಹಿಸುವುದು ಎಂದು ಮಾಹಿತಿ ನೀಡಿದರು.

ಈ ಕುರಿತಂತೆ ಎನ್.ಡಿ.ಆರ್.ಎಫ್ (ನ್ಯಾಶನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್) ಮತ್ತು ಸಮಾನ ಮನಸ್ಕರೊಂದಿಗೆ ಸಮಾಲೋಚನೆ ನಡೆಸಿ ಸದ್ಯದಲ್ಲಿಯೇ ಇದಕ್ಕೆ ಅಂತಿಮ ಸ್ವರೂಪವನ್ನು ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ಹಣವನ್ನು ಕ್ಷೇತ್ರದಿಂದ ಒದಗಿಸಲಾಗುವುದು ಎಂದರು.

ಪಶ್ಚಿಮ ಘಟ್ಟ ಅಧ್ಯಯನ ಪೀಠ ಸ್ಥಾಪನೆ : ಜೀವವೈವಿದ್ಯಗಳಿಂದ ಕೂಡಿರುವ ಪಶ್ಚಿಮ ಘಟ್ಟ ಶ್ರೇಣಿಯು ಹಲವಾರು ಕಾರಣಗಳಿಂದ ಸೂಕ್ಷ್ಮ ಸನ್ನಿವೇಶ ನಿರ್ಮಾಣವಾಗಿದೆ. ಈ ವರ್ಷ ಘಟ್ಟ ಪ್ರದೇಶದಲ್ಲಿ ಸುಮಾರು 500 ಕ್ಕೂ ಮಿಕ್ಕಿದ ಸ್ಥಳಗಳಲ್ಲಿ ಭೂಕುಸಿತ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಜೊತೆಯಲ್ಲಿ ಈ ಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಪ್ರಾಕೃತಿಕ ದುರಂತದ ಸಾಧ್ಯತೆಗಳು ಹೆಚ್ಚಾಗ ತೊಡಗಿವೆ.

ಈ ಹಿನ್ನಲೆಯಲ್ಲಿ ಪ್ರಾಕೃತಿಕ ಸಮತೋಲನವನ್ನು ಪಶ್ಚಿಮ ಘಟ್ಟದಲ್ಲಿ ಕಾಪಾಡಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಂತೆ, ಇಲ್ಲಿ ವಾಸಿಸುತ್ತಿರುವ ಜನಸಮೂಹದ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವ ಕುರಿತಂತೆ ಕ್ಷೇತ್ರ ಧರ್ಮಸ್ಥಳದ ವತಿಯಿಂದ ರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಯಲ್ಲಿ ರೂ. 2 ಕೋಟಿ ನೆರವಿನೊಂದಿಗೆ ‘ಪಶ್ಚಿಮ ಘಟ್ಟ ಅಧ್ಯಯನ ಪೀಠ’ವನ್ನು ಸ್ಥಾಪಿಸಲಾಗುವುದು. ಪಶ್ಚಿಮ ಘಟ್ಟದ ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ಕ್ರಮಗಳ ಕುರಿತಂತೆ ಸಂಶೋಧನಾ ವರದಿಯೊಂದನ್ನು ತಯಾರಿಸಲಾಗುವುದು. ನಂತರ ಸಮಾನ ಮನಸ್ಕರ ಭಾಗವಹಿಸುವಿಕೆಯೊಂದಿಗೆ ಸರಕಾರದ ಗಮನ ಸೆಳೆಯಲಾಗುವುದು. ಇದಕ್ಕಾಗಿ ಎರಡು ವರ್ಷಗಳ ಕಾಲಮಿತಿಯೊಂದಿಗೆ ಅಧ್ಯಯನ ಪೀಠವು ಕ್ರಿಯಾಯೋಜನೆಯನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುವುದು- ಡಾ| ಹೆಗ್ಗಡೆ

See also  ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ: ಉಡುಪಿ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

ಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು. ಕಾಳಜಿ ರಿಲೀಫ್ ಫಂಡ್‍ಗೆ ಡಾ| ಹೆಗ್ಗಡೆಯವರು ನೀಡಿದ ರೂ. 50 ಲಕ್ಷದ ಚೆಕ್‍ನ್ನು ಸ್ವೀಕರಿಸಿದರು. ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು