News Kannada
Saturday, September 24 2022

ಕರಾವಳಿ

ದೇವೇಗೌಡರ ಕುಟುಂಬವನ್ನು ಕುಗ್ಗಿಸಲು ಸಾಧ್ಯವಿಲ್ಲ: ಕುಮಾರಸ್ವಾಮಿ - 1 min read

Photo Credit :

ದೇವೇಗೌಡರ ಕುಟುಂಬವನ್ನು ಕುಗ್ಗಿಸಲು ಸಾಧ್ಯವಿಲ್ಲ: ಕುಮಾರಸ್ವಾಮಿ

ಬೆಳ್ತಂಗಡಿ: ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಯಡಿಯೂರಪ್ಪ ಅವರು ಸಿಬಿಐಗೆ ನೀಡಲು ಸಿದ್ದರಾಗಿದ್ದಾರೆ. ದೇವೇಗೌಡ ಕುಟುಂಬವನ್ನು ಯಾವುದೇ ಸಿಬಿಐ ತನಿಖೆಗೆ ಒಳಪಡಿಸಿದರೂ ಕುಗ್ಗಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ.

ಬೆಳ್ತಂಗಡಿ ತಾಲೂಕಿನ ನೆರೆಪೀಡಿತ ಪ್ರದೇಶಕ್ಕೆ ಭೇಡಿ ನೀಡುವ ಉದ್ದೇಶದಿಂದ ಬೆಳ್ತಂಗಡಿಗೆ ಆಗಮಿಸಿದ ಎಚ್‍ಡಿಕೆ ಅವರು ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮಗಳ ಜತೆ ಮಾತನಾಡಿದರು.

ಪ್ರಸ್ತುತ ಫೋನ್ ಕದ್ದಾಲಿಕೆ ಪ್ರಕರಣವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನವಿ ಮೇರೆಗೆ ಸಿಬಿಐ ತನಿಖೆ ನಡೆಸಲು ಸಿದ್ದತೆ ನಡೆಸಿದ್ದು, ನಾನು ಸಿಬಿಐ ತನಿಖೆಗೆ ಸಿದ್ಧ ಯಡಿಯೂರಪ್ಪ ಹತ್ತು ಜನ್ಮ ಎತ್ತಿ ಬಂದರೂ ನನ್ನನ್ನು ಹಾಗೂ ದೇವೇಗೌಡ ಕುಟುಂಬವನ್ನು ಏನೂ ಮಾಡಲು ಸಾಧ್ಯವಿಲ್ಲ, ಸಿಬಿಐ ಬದಲಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ತನಿಖೆ ಮಾಡಿದರೂ ನಾನು ಎ¯್ಲÁ ತನಿಖೆಗೆ ಸಿದ್ಧವಾಗಿz್ದÉೀನೆ. ಯಾವ ಸರ್ಕಾರಕ್ಕೂ ನನ್ನ ಇಮೇಜï ನಾಶ ಮಾಡೋಕೆ ಸಾಧ್ಯವಿಲ್ಲ ಎಂದು ಗುಡುಗಿದರು.

ಮಾಜಿ ಸಿಎಂ ಸಿದ್ಧರಾಮಯ್ಯ ಮನವಿ ಮೇರೆಗೆ ಮುಖ್ಯ ಮಂತ್ರಿ ಯಡಿಯೂರಪ್ಪ ಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಕೊಟ್ಟಿz್ದÁರೆ. ಸಿದ್ದರಾಮಯ್ಯರ ಮನವಿಗೆ ಶೀಘ್ರವಾಗಿ ಸ್ಫಂದಿಸಿದ ಯಡಿಯೂರಪ್ಪರಿಗೆ ಸಿದ್ದರಾಮಯ್ಯ ಪರವಾಗಿ ಯಡಿಯೂರಪ್ಪ ಅವರಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ. ಕೇವಲ ನನ್ನ ಅವಧಿಯ ಮಾತ್ರವಲ್ಲ, ಯಡಿಯೂರಪ್ಪ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಾದ ಕz್ದÁಲಿಕೆ ಬಗ್ಗೆ ಸಿಬಿಐಗೆ ನೀಡಲಿ ನೀಡಲಿ, ನಾನು ಸಿಬಿಐ ತನಿಖೆ ಎದುರಿಸಲು ನಾನು ಸರ್ವ ಸನ್ನದ್ದನಾಗಿದ್ದೇನೆ ಎಂದರು.

ಸಿಎಂ ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ಯದೆಲ್ಲೆಡೆ ನೆರೆ ಪ್ರವಾಹ ಬಂದಿದ್ದು, ಈ ಸಂದರ್ಭ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದು, ತಕ್ಷಣದಲ್ಲಿ 1ಸಾವಿರ ಕೋಟಿ ರೂ. ನೆರೆ ಪರಿಹಾರ ತಕ್ಷಣದಲ್ಲಿ ಘೋಷಿಸಿದ್ದು, ಇದಕ್ಕೆ ನನ್ನಲ್ಲಿ ದಾಖಲೆಯೂ ಇದೆ. ಆದರೆ ಇಂದು ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದ್ದು, ಕೇಂದ್ರದಲ್ಲೂ ಎನ್‍ಡಿಎ ಸರ್ಕಾರವಿದೆ.

ಆದರೂ ಈವರೆಗೆ ನೆರೆಪರಿಹಾರ ಘೋಷಣೆಯಾಗಿಲ್ಲ. ಇತ್ತೀಚೆಗೆ ಸಿಎಂ ಯಡಿಯೂರಪ್ಪ ಅವರು ನೆರೆ ಪೀಡಿತ ಪ್ರದೇಶಕ್ಕೆ ಕೇವಲ ಬೇಟಿ ನೀಡಿ ಸಮಗ್ರ ಮಾಹಿತಿ ಪಡೆಯದೆ ಬರಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ಹಾನಿ ಪ್ರಮಾಣ ಹೆಚ್ಚಿದೆ. ಈಬಗ್ಗೆ ಸಮಗ್ರವಾಗಿ ಸರ್ಕಾರದ ಗಮನ ಸೆಳೆಯಲ್ಲಿ ನಾನು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು.

 

See also  ನಕ್ರೆ ಮಾಣಿಗುಡ್ಡೆ ಪರಿಸರದ ದಲಿತ ಕೇರಿಗೆ ಭೇಟಿ ನೀಡಿದ ಯಡಿಯೂರಪ್ಪ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು