News Kannada
Sunday, October 02 2022

ಕರಾವಳಿ

ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರರ ಹಠಾತ್ ಪ್ರತಿಭಟನೆ - 1 min read

Photo Credit :

ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರರ ಹಠಾತ್ ಪ್ರತಿಭಟನೆ

ಬಂಟ್ವಾಳ: ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ‘ಡಿ’ ಗ್ರೂಪ್ ನೌಕರರು ಆಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ಡಾ.ಸದಾಶಿವ ಕಚೇರಿ ಮುಂದೆ ಸೋಮವಾರ ಹಠಾತ್ ಧರಣಿ ಸತ್ಯಾಗ್ರಹ ನಡೆಸಿದರು.

ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗದೆ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಡಿ ಗ್ರೂಪ್ ನೌಕರರು ಹಠಾತ್ ಪ್ರತಿಭಟನೆ ನಡೆಸಿದರು.

ಸರಿಯಾಗಿ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಮನೆಗೆ ಆಹಾರ ಸಾಮಗ್ರಿ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ನಾವು ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದರೂ ನಮ್ಮ ಮನೆಮಂದಿಗೆ ಅನಾರೋಗ್ಯ ಬಾಧಿಸಿದಾಗ ಔಷಧಿಗೆ ಹಣವಿಲ್ಲ, ಮಕ್ಕಳನ್ನು ಶಾಲೆಗೆ ಕಳುಹಿಸಲಾಗದೆ ಮನೆಯಲ್ಲಿಯೇ ಉಳಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಬಂಟ್ವಾಳ ಶಾಸಕರು, ಈಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಲೋಕಾಯುಕ್ತರು, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಈ ಕಾರಣ ಪ್ರತಿಭಟನೆ ಆರಂಭಿಸಿದ್ದು, ವೇತನ ಸಿಗುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಧರಣಿ ನಿರತರು ತಿಳಿಸಿದ್ದಾರೆ.

ಡಿ ಗ್ರೂಪ್ ನೌಕರರ ಹಠಾತ್ ಪ್ರತಿಭಟನೆಯಿಂದಾಗಿ ಬಂಟ್ವಾಳ ಆಸ್ಪತ್ರೆಗೆ ಬಂದ ರೋಗಿಗಳು ತೊಂದರೆ ಅನುಭವಿಸುವಂತಾಯಿತು.

ಹೆಡ್ ನರ್ಸ್ ನಿಂದ ಬೆದರಿಕೆ: ಡಿ ಗ್ರೂಪ್ ನೌಕರರು ಪ್ರತಿಭಟನೆ ನಡೆಸುತ್ತಿದ್ದಂತೆ ಆಸ್ಪತ್ರೆಯ ಹೆಡ್ ನರ್ಸ್ ಒಬ್ಬರು ಕೆಲಸದಿಂದ ವಜಾಗೊಳಿಸುವ ಬೆದರಿಕೆಯೊಡ್ಡಿರುವ ಪ್ರಸಂಗವು ನಡೆದಿದೆ ಎಂಬ ಆರೋಪವು ಕೇಳಿಬಂದಿದೆ. ಮಾಧ್ಯಮದ ಪ್ರತಿನಿಧಿಗಳನ್ನು ಇಲ್ಲಿಗೆ ಕರೆಸಿದ್ದು ಯಾಕೆ? ಎಂದು ಈ ನರ್ಸ್ ಪ್ರತಿಭಟನಾ ನಿರತ ನೌಕರರನ್ನು ಗದರಿಸಿದ್ದಾರೆಂದು ದೂರಲಾಗಿದೆ.

ಮಧ್ಯಾಹ್ನ ಹಿಂತೆಗೆತ: ತಾಲೂಕು ವೈದ್ಯಾಧಿಕಾರಿ ಡಾ.ಸದಾಶಿವ ಅವರು ಸಂಜೆಯ ಒಳಗಾಗಿ ವೇತನ ತೆಗೆಸಿಕೊಡುವ ಭರವಸೆಯ ಮೇರೆಗೆ ಮಧ್ಯಾಹ್ನದ ಹೊತ್ತಿಗೆ ನೌಕರರು ಪ್ರತಿಭಟನೆ ಹಿಂತೆಗೆದುಕೊಂಡಿದ್ದು, ಸಂಜೆಯ ವೇಳೆಗೆ ವೇತನ ಸಿಗದಿದ್ದಲ್ಲಿ ಮಂಗಳವಾರದಿಂದ ವೇತನ ಪಾವತಿಯಾಗುವ ತನಕ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಡಿ ಗ್ರೂಪ್ ನೌಕರರು ನೀಡಿದ್ದಾರೆ.

ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುಮಾರು 15 ಮಂದಿ ಡಿ ಗ್ರೂಪ್ ನೌಕರರು ಗುತ್ತಿಗೆಯಾಧಾರದಲ್ಲಿ ಕೆಲಸ ಮಾಡುತ್ತಿದ್ದು, ಶಿವಮೊಗ್ಗದ ವ್ಯಕ್ತಿಯೊಬ್ಬರು ಗುತ್ತಿಗೆ ವಹಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಈ ನೌಕರರಿಗೆ ವೇತನ ಪಾವತಿಯಾಗದೆ ಸಂಕಷ್ಟದಲ್ಲಿದ್ದು, ಲೋಕಾಯುಕ್ತರು, ಶಾಸಕರು, ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇವರ ಈ ಸಮಸ್ಯೆ ಮಾತ್ರ ಇನ್ನು ಪರಿಹಾರವಾಗಲಿಲ್ಲ.

See also  ಚಂದ್ರಗಿರಿಯಲ್ಲಿ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು