News Kannada
Sunday, September 25 2022

ಕರಾವಳಿ

ಬೆಳ್ತಂಗಡಿ: ಅರಸು ಜನ್ಮದಿನಾಚರಣೆ ಅಂಗವಾಗಿ ಸಂತ್ರಸ್ಥ ವಿದ್ಯಾರ್ಥಿಗಳಿಗೆ ಪರಿಹಾರ ವಿತರಣೆ - 1 min read

Photo Credit :

ಬೆಳ್ತಂಗಡಿ: ಅರಸು ಜನ್ಮದಿನಾಚರಣೆ ಅಂಗವಾಗಿ ಸಂತ್ರಸ್ಥ ವಿದ್ಯಾರ್ಥಿಗಳಿಗೆ ಪರಿಹಾರ ವಿತರಣೆ

ಬೆಳ್ತಂಗಡಿ: ಸರಕಾರಗಳು ರೂಪಿಸುವ ಯೋಜನೆಗಳು ರಾಜ್ಯವನ್ನು ಹಾಗೂ ಸಮಾಜವನ್ನು ಕಟ್ಟುವಂತದ್ದಾಗಿರಬೇಕು, ದೇವರಾಜ ಅರಸು ಹಾಗೂ ರಾಜೀವ ಗಾಂಧಿಯವರು ಇಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸಿ ನಾಡನ್ನು ಕಟ್ಟಿದವರಾಗಿದ್ದಾರೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.

ಅವರು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕೊಲ್ಲಿಯ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಲಾಗಿದ್ದ ನೆರೆ ಸಂತ್ರಸ್ಥರೊಂದಿಗೆ ರಾಜೀವಗಾಂಧಿ ಹಾಗೂ ದೇರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಂತ್ರಸ್ಥ ವಿಧ್ಯಾರ್ಥಿಗಳಿಗೆ ಪರಿಹಾರ ವಿತರಿಸಿ ಮಾತನಾಡಿದರು. ಪ್ರವಾಹ ಪೀಡಿತರ ನೆರವಿಗೆ ನಿಲ್ಲಬೇಕಾದುದು ಸರಕಾರದ ಕರ್ತವ್ಯವಾಗಿದೆ ಎಂದ ಅವರು ಕಳೆದ ಸರಕಾರದ ಅವಧಿಯಲ್ಲಿ ಮಡಿಕೇರಿಯಲ್ಲಿ ಪ್ರವಾಹವಾದಾಗ ಸರಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಸಂತ್ರಸ್ಥರ ಪರವಾಗಿ ನಿಂತಿತ್ತು. ಇದೀಗ ಕೇಂದ್ರದ ನೆರವೂ ಇಲ್ಲ ಇತ್ತ ಮುಖ್ಯಮಂತ್ರಿಗಳು ತನ್ನಲ್ಲಿ ನೋಟು ಪ್ರಿಂಟ್ ಮಾಡುವ ಯಂತ್ರವಿಲ್ಲ ಎನ್ನುತ್ತಿದ್ದಾರೆ. ಇದು ಓರ್ವ ಮುಖ್ಯಮಂತ್ರಿಯಿಂದ ಬರಬೇಕಾದ ಉತ್ತರವಲ್ಲ. ಹಿಂದಿನ ಸರಕಾರ 35 ಸಾವಿರ ಕೋಟಿಯ ಸಾಲಮನ್ನಾ ಮಾಡಿದರೆ ಈ ಸರಕಾರಕ್ಕೆ ನೆರೆ ಸಂತ್ರಸ್ಥರಿಗಾಗಿ ಒಂದು ಸಾವಿರ ಕೋಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಮಾಜಿ ಸಚಿವ ಬಿ ರಮಾನಾಧ ರೈ ಮಾತನಾಡಿ ಸಂತ್ರಸ್ಥ ಜನರೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಲು ಕಾಂಗ್ರೆಸ್ ಪಕ್ಷ ಈ ಕಾರ್ಯಕ್ರಮವನ್ನು ಪ್ರವಾಹಪೀಡಿತ ಪ್ರದೇಶದ ಜನರೊಂದಿಗೆ ಸೇರಿ ಆಯೋಜಿಸಿದೆ. ಪಕ್ಷ ಸದಾ ಜನರೊಂದಿಗೆ ಇದ್ದು ಜನರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ. ದೇವರಾಜ ಅರಸು ಅವರು ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯಿಂದಾಗಿ ಕರಾವಳಿಜಿಲ್ಲೆಗೆ ಅತ್ಯಂತ ಪ್ರಯೋಜನವಾಗಿದೆ, ಅದರಿಂದಾಗಿ ಜಿಲ್ಲೆಯ ಚಿತ್ರಣವೇ ಬದಲಾಗಿದೆ ಆದರೆ ನಮ್ಮ ಜನ ಅದನ್ನು ಮರೆತಿದ್ದಾರೆ ಎಂದರು.

ಪರಿಹಾರ ವಿತರಣೆಯ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಲಿ: ಬಂಗೇರ 

ಮಾಜಿ ಶಾಸಕ ಕೆ ವಸಂತ ಬಂಗೇರ ಅವರು ಮಾತನಾಡಿ ಬೆಳ್ತಂಗಡಿ ತಾಲೂಕು ಹಿಂದೆಂದೂ ಕಂಡರಿಯದಂತಹ ಪ್ರವಾಹ ಭೂ ಕುಸಿತವನ್ನು ಎದುರಿಸಿದೆ. ಜನರು ಅತಂತ್ರಸ್ಥಿತಿಯಲ್ಲಿದ್ದಾರೆ. ದಾನಿಗಳು ಮನಬಿಚ್ಚಿ ಪ್ರವಾಹ ಪೀಡಿತರಿಗೆ ಸಹಾಯ ಮಾಡಿದ್ದಾರೆ, ಆದರೆ ಬೆಳ್ತಂಗಡಿಯಲ್ಲಿ ಶೇಖರಣೆಯಾಗಿರುವ ಪರಿಹಾರ ಸಾಮಾಗ್ರಿಗಳ ವಿತರಣೆಯು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಅದರಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಪ್ರವಾಹದ ಸಂದರ್ಭದಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ. ಗಂಜಿಕೇಂದ್ರಗಳಲ್ಲಿದ್ದವರಿಗೆ ಅಗತ್ಯ ಸಾಮಾನುಗಳು ಸಿಕ್ಕಿದೆ ಆದರೆ ಕೆಲವೆಡೆ ಅದು ಇನ್ನೂ ಸರಿಯಾಗಿ ತಲುಪಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ ಈ ಬಗ್ಗೆ ಜಿಲ್ಲಾಧಿಕಾರಿಯವರು ಗಮನಹರಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ಪಕ್ಷದ ವತಿಯಿಂದ ಪ್ರವಾಹದಿಂದಾಗಿ ಹೆಚ್ಚಿನ ಹಾನಿಯಾಗಿರುವ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೆ ನೆರವಾಲು 116 ಮಕ್ಕಳಿಗೆ ತಲಾ ಐದು ಸಾವಿರದಂತೆ ಸಹಾಯಧನ ಒದಗಿಸುತ್ತಿರುವುದಾಗಿ ತಿಳಿಸಿದರು. ಪ್ರವಾಹದ ಸಂದರ್ಭದಲ್ಲಿ ಎಲ್ಲ ಜನರು ಜಾತಿ ಮತ ಧರ್ಮಗಳ ಭೇಧ ಮರೆತು ಒಂದಾಗಿ ದುಡಿದಿದ್ದಾರೆ ಇದು ಒಳ್ಳೆಯ ಬೆಳವಣಿಗೆ ಎಂದರು. ಸರಕಾರ ಘೋಷಿಸಿದ ಪರಿಹಾರ ಇನ್ನೂ ವಿತರಣೆಯಗುತ್ತಿಲ್ಲ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

See also  ಮಹಿಳೆ ಸುಪಾರಿ ಕೊಲೆ ಶಂಕೆ ; ಗಂಡನ ತೀವ್ರ ವಿಚಾರಣೆ

ವೇದಿಕೆಯಲ್ಲಿ ಮಾಜಿ ಶಾಸಕರಾದ ಮೊಯ್ದೀನ್ ಬಾವ, ಯುವಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ಜಿಲ್ಲಾ ಪಂಚಾಯತು ಸದಸ್ಯರುಗಳಾದ ಸಾಹುಲ್ ಹಮೀದ್. ಎಂಎಸ್ ಮಹಮ್ಮದ್, ನಮಿತ, ಮಹಿಳಾ ಕಾಂಗ್ರೆಸ್ ಅಧ್ಯಕೆ ಶಾಲೆಟ್ ಪಿಂಟೋ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಮಹಾನಗರ ಪಾಲಿಕೆಯ ಸದಸ್ಯರುಗಳಾದ ಅಪ್ಪಿ, ಪ್ರವೀಣ್ ಚಂದ್ರ ಆಳ್ವ, ಜೆಸಸಿಂತಾ ಲೋಬೋ, ಧನಂಜಯ ಅಡ್ಪಂಗಾಯ,  ಮಂಗಳೂರು ತಾ. ಪಂ ಅಧ್ಯಕ್ಷ ಮೋನು. ಸ್ಥಳೀಯ ಮುಖಂಡರುಗಳಾದ ರಾಜಶೇಖರ ಅಜ್ರಿ,  ಅಭಿನಂದನ್ ಹರೀಶ್ ಕುಮಾರ್, ಬಿ.ಎ ಹಮೀದ್,  ಉಷಾ ಶರತ್, ಹಾಜಿರಾ, ನೇಮಿರಾಜ ಗೌಡ, ಎಪಿಎಂಸಿ ಉಪಾಧ್ಯಕ್ಷ ಗಫೂರ್, ವಿ.ಟಿ ಸೆಬಾಸ್ಟಿಯನ್, ಚಾರ್ಮಾಡಿ ಹಸನಬ್ಬ, ಮಮ್ಮಿಕುಂಜ್ಞಿ ಹಾಗೂ ಇತರರು ಇದ್ದರು.

ಕೊಲ್ಲಿಯಲ್ಲಿ ಹಾಗೂ ಚಾರ್ಮಾಡಿಯಲ್ಲಿ ನಡೆದ ಸಭೆಗಳಲ್ಲಿ ಪ್ರವಾಹದಿಂದ ಸಂತ್ರಸ್ಥರಾಗಿರುವ ಕುಟುಂಬಗಳ 116 ಮಂದಿ ಮಕ್ಕಳಿಗೆ ತಲಾ ಐದು ಸಾವಿರದಂತೆ ಪರಿಹಾರಧನ ವಿತರಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು