News Kannada
Friday, October 07 2022

ಕರಾವಳಿ

ಜಿಲ್ಲಾಡಳಿತದಿಂದ ಬೆಳ್ತಂಗಡಿಯ ನೆರೆ ಸಂತ್ರಸ್ತರ ಮಾನಸಿಕ ಸ್ಥಿತಿಗತಿ ಅಧ್ಯಯನ - 1 min read

Photo Credit :

ಜಿಲ್ಲಾಡಳಿತದಿಂದ ಬೆಳ್ತಂಗಡಿಯ ನೆರೆ ಸಂತ್ರಸ್ತರ ಮಾನಸಿಕ ಸ್ಥಿತಿಗತಿ ಅಧ್ಯಯನ

ಬೆಳ್ತಂಗಡಿ: ತಾಲೂಕಿನಲ್ಲಿ ಆದ ಅನಾಹುತಕಾರಿ ಪ್ರವಾಹದ ಪರಿಣಾಮವಾಗಿ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದ ಜಿಲ್ಲಾ ಮಾನಸಿಕ ಆರೋಗ್ಯs ಸಮೀಕ್ಷಾ ತಂಡದಿಂದ ನೆರೆಪೀಡಿತ ಪ್ರದೇಶದ ಜನರ ಮಾನಸಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದೆ.

ಸಾವಿರಕ್ಕೂ ಹೆಚ್ಚು ಮಂದಿ ನೆಲೆಕಳೆದುಕೊಂಡಿದ್ದು, ಅವರಿಗೆ ಮತ್ತೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತ, ವಿವಿಧ ಸ್ತರದ ಜನಪ್ರತಿನಿಧಿಗಳು, ಸ್ವಯಂಸೇವಾ ಸಂಸ್ಥೆಯವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಡೆಸಿದ ಸಮೀಕ್ಷೆ ಕಾರ್ಯ ಅಂತಿಮ ಹಂತಕ್ಕೆ ತಲುಪಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಅತ್ಯಂತ ಹೆಚ್ಚಿನ ಹಾನಿಯಾಗಿದ್ದು, ನೆರೆಪೀಡಿತ ಪ್ರದೇಶ ಸೇರಿದಂತೆ ಹಲವು ಗುಡ್ಡಗಾಡು ಪ್ರದೇಶಗಳಲ್ಲಿಯೂ ಹೆಚ್ಚಿನ ಪ್ರಮಾಣದ ಹಾನಿ, ನಷ್ಟ ಸಂಭವಿಸಿದೆ. ಈ ಸಂದರ್ಭ ನೆರೆಪೀಡಿತ ಪ್ರದೇಶಗಳಿಂದ ಸಂತ್ರಸ್ಥರನ್ನು ರಕ್ಷಿಸಿ ಆಶ್ರಯಕೇಂದ್ರಗಳಲ್ಲಿ ಸಮಗ್ರ ನೆರವಿನ ಆಶ್ರಯ ನೀಡಲಾಗಿದ್ದು, ನೆರೆ ನಿಯಂತ್ರಣಗೊಂಡ ನಂತರ ಎಲ್ಲರೂ ತಮ್ಮ ತಮ್ಮ ಪ್ರದೇಶಗಳಿಗೆ ಹಿಂತುರುಗಿದ್ದಾರೆ. ನೆರೆಪೀಡಿತ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಪರಿಹಾರ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದು, ಪ್ರವಾಹದ ಹೊಡೆತಕ್ಕೆ ಸಂತ್ರಸ್ಥರು ಮಾನಸಿಕವಾಗಿ ಬಳಲಿರುವ ಸಾಧ್ಯತೆ ಹೆಚ್ಚಿದೆ.

ನೆರೆಸಂತ್ರಸ್ಥರ ಸಮಗ್ರ ಸರ್ವೇ
ನೆರೆ ಸಂತ್ರಸ್ಥರು ತಮ್ಮ ಮನೆ, ಕೃಷಿ ಭೂಮಿ ಕಳೆದುಕೊಂಡು ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ದ.ಕ ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದ ಜಿಲ್ಲಾ ಮಾನಸಿಕ ಆರೋಗ್ಯs ಸಮೀಕ್ಷಾ ತಂಡದಿಂದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದೆ.

ಕುಕ್ಕಾವು, ಅಗರಿಮಾರು ಪ್ರದೇಶಗಳಿಗೆ ವಿವಿದ ನೆರೆಸಂತ್ರಸ್ಥರನ್ನು ಆವ್ವಾನಿಸಿ ಹಲವರನ್ನು ಈ ತಂಡ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದೇ ತಂಡ ನೆರೆಪೀಡಿದ ಪ್ರದೇಶಗಳಿಗೂ ತೆರಳಿ ಜನರ ಮಾನಸಿಕ ಸ್ಥಿತಿ, ಆರೋಗ್ಯ, ಶುಚಿತ್ವಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದೆ. ಜಿಲ್ಲಾ ಮನೊರೋಗ ತಜ್ಞ ಡಾ. ಅರುಣ್ ಶೆಟ್ಟಿ ನೇತೃತ್ವದಲ್ಲಿ ನಡೆದ ಈ ಸಮಗ್ರ ಸರ್ವೆ ತಂಡದಲ್ಲಿ ಮನೋತಜ್ಞೆ ಜಯಶ್ರಿ, ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ದಿವ್ಯ, ಮನೋ ಸುಸ್ರೂಶಕಿ ಹಿತಾ, ಸಮುದಾಯ ಸುಸ್ರೂಶಕಿ ಶ್ರೀವಿದ್ಯಾ ಇವರು ಸಮಗ್ರ ಸರ್ವೇ ನಡೆಸಿದರು.
v

See also  ಬೆಳ್ತಂಗಡಿಯಲ್ಲಿ ಮಂಗಗಳ ಸಾವು ಪ್ರಕರಣ: ತನಿಖೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು