News Kannada
Saturday, October 01 2022

ಕರಾವಳಿ

ವಿವಿಧ ಯೋಜನೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ನಿಂದ ಪ್ರತಿಭಟನೆ - 1 min read

Photo Credit :

ವಿವಿಧ ಯೋಜನೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ ನಿಂದ ಪ್ರತಿಭಟನೆ

ಮೂಡುಬಿದಿರೆ: ಕೇಂದ್ರ ಸರಕಾರವು ಆಟೋ ಚಾಲಕರಿಗೆ ವಿಧಿಸಿರುವ ದುಬಾರಿ ದಂಡ, ಪರವಾನಿಗಾಗಿ, ವಿಪರೀತ ಇನ್ಸೂರೆನ್ಸ್ ಪ್ರೀಮಿಯಂ ದರ ಹೆಚ್ಚಳ, ಚಾಲನ ಪತ್ರ ನೀಡುವಾಗ ವಿದ್ಯಾರ್ಹತೆ ಕಡ್ಡಾಯ ಹಾಗೂ ಐ.ಎಂ.ವಿ ಕಾಯಿದೆ ತಿದ್ದುಪಡಿ ವಿರೋಧಿಸಿ, ಆಟೋ ರಿಕ್ಷಾ ಚಾಲಕರಿಗೆ ಪ್ರತ್ಯೇಕ ವಸತಿ-ಪಿಂಚಣಿ ಯೋಜನೆ, ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯದ ನೆರವು, ಹಳೆಯ ವಾಹನಗಳ ರದ್ಧತಿ ಬಳಿಕ ರೂ 50,000 ಪ್ರೋತ್ಸಾಹಧನ ನೀಡಬೇಕು ಹಾಗೂ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್‍ನ ಮೂಡುಬಿದಿರೆ ತಾಲೂಕು ವತಿಯಿಂದ ಗುರುವಾರ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಯಿತು.

ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ (ರಿ) ಸಿಐಟಿಯುನ ಜಿಲ್ಲಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ರಿಕ್ಷಾ ಚಾಲಕರುಗಳು ಪ್ರಾಮಾಣಿಕವಾಗಿ ದುಡಿಯುವವರು. ಫೈನಾನ್ಸ್ ನಿಂದ ಬಡ್ಡಿಗೆ ಹಣ ತೆಗೆದು ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಪ್ರಾಮಾಣಿಕರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲವನ್ನು ನೀಡುತ್ತಿಲ್ಲ ಬದಲಾಗಿ ಅಗರ್ಭ ಶ್ರೀಮಂತರಿಗೆ ಕೋಟಿಗಟ್ಟಲೆ ಸಾಲವನ್ನು ಬ್ಯಾಂಕುಗಳು ನೀಡುತಿದ್ದು ಅದನ್ನು ಪಡೆದಿರುವ ಸುಮಾರು 35 ಜನ ಈಗಾಗಲೇ ನಮ್ಮ ದೇಶವನ್ನು ಬಿಟ್ಟು ಹೋಗಿದ್ದಾರೆಂದು ಆರೋಪಿಸಿದರು.

ಪ್ರಾಮಾಣಿಕವಾಗಿ ದುಡಿಯುತ್ತಿರುವವರಿಗೆ ಸಾಲ ನೀಡುತ್ತಿಲ್ಲವೆಂದು ಆರೋಪಿಸಿದರು. ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದರೆ ಆಟೋ ರಿಕ್ಷಾದಲ್ಲಿಯೇ ಜೀವನ ಮಾಡುವವರು ಎಷ್ಟೋ ಜನ ಹೊರ ಉಳಿಯಬೇಕಾಗುತ್ತದೆ. ಸರಕಾರಗಳು ನಮಗೆ ತಂದೆ ತಾಯಿ ಇದ್ದಂತೆ. ಹಾಗಾಗಿ ಬಡಜನರ ಧ್ವನಿಗೆ ಸ್ಪಂದಿಸಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ ಎಂದರು.

ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ಸ್ (ರಿ) ಸಿಐಟಿಯು ಇದರ ಮೂಡುಬಿದಿರೆ ತಾಲೂಕಿನ ಗೌರವಾಧ್ಯಕ್ಷ ಯಾದವ ಶೆಟ್ಟಿ ಮಾತನಾಡಿ, ಸಂಪತ್ಭರಿತವಾದ ಭಾರತ ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಕಾನೂನು ಸಮಾನವಾಗಿರಬೇಕು. ಕಾನೂನಿನ ಹೆಸರಿನಲ್ಲಿ ಪೊಲೀಸ್ ಇಲಾಖೆ ಹೊರತುಪಡಿಸಿ ಬೇರೆ ಯಾರೂ ಕೈ ಹಾಕಿ ರೌಡಿಸಂ ಮಾಡಿದರೆ ನಾವು ಬಿಡಲಾರೆವು. ಮೂಡುಬಿದಿರೆಯಲ್ಲಿ ಸುಮಾರು 500 ಆಟೋಗಳು ಕಾರ್ಯನಿರ್ವಹಿಸುತ್ತಿದ್ದು, 70 ಆಟೋಗಳಿಗೆ ಮಾತ್ರ ಪರ್ಮಿಟ್ ಇದ್ದು 500 ಆಟೋಗಳಿಗೂ ಪರ್ಮೀಟ್ ನೀಡಬೇಕು. ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಆದ್ದರಿಂದ ತಾಲೂಕಿನ ಬೇರೆ ಬೇರೆ ಪ್ರದೇಶಗಳಲ್ಲಿ ಪುರಸಭೆ ಮತ್ತು ಪಂಚಾಯತ್‍ಗಳು ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

ಮೂಡುಬಿದಿರೆ ತಾಲೂಕು ತಹಾಶೀಲ್ದಾರ್ ಅನಿತಾಲಕ್ಷ್ಮೀ ಮೂಲಕ ಜಿಲ್ಲಾಧಿಕಾರಿಗಳಿಗೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಮೂಡುಬಿದಿರೆ ತಾಲೂಕು ಸಮಿತಿಯ ಅಧ್ಯಕ್ಷ ಸಾಲ್ವೋದರ್ ಕ್ರಾಸ್ತಾ, ಉಪಾಧ್ಯಕ್ಷ ಸಂತೋಷ್, ಸಂಚಾಲಕ ವಿಶ್ವನಾಥ, ಸಂಪತ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

See also  ನಾಗರಹಾವು ಕಡಿತ ಬಜರಂಗದಳ ಮಾಜಿ ಸಂಚಾಲಕನ ಸ್ಥಿತಿ ಗಂಭೀರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು