News Kannada
Tuesday, November 29 2022

ಕರಾವಳಿ

ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ - 1 min read

Photo Credit :

ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ

ಬೆಳ್ತಂಗಡಿ: ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಗೆ ಚಾರ್ಮಾಡಿ ಘಾಟಿಯ ಬುಡದಿಂದ ತುದಿಯವರೆಗೆ ಗುಡ್ಡ ಕುಸಿತಗೊಂಡ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲಾಧಿಕಾರಿಯವರ ಆದೇಶದಿಂದಾಗಿ ಶುಕ್ರವಾರದಿಂದ ಲಘು ವಾಹನಗಳ ಸಂಚಾರ ಪ್ರಾರಂಭಗೊಂಡಿದೆ.

ಇನ್ನೊಂದೆಡೆ ಕುಸಿತಗಳಿಂದಾಗಿ ಆತಂಕಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಲ್ಲಿನ ಮಣ್ಣನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ. ಇನ್ನು ಮುಂದಕ್ಕೆ ಇಲ್ಲಿನ ರಸ್ತೆ ಅಭಿವೃದ್ಧಿಗಾಗಿ ಬರುವ ಕೋಟಿ ಕೋಟಿ ಅನುದಾನವು ವ್ಯರ್ಥವಾಗಲಿದೆಯೇ ಎನ್ನುವ ಚಿಂತೆ ಇಲಾಖೆಗೆ ಕಾಡತೊಡಗಿದೆ.

ಪಶ್ಚಿಮಘಟ್ಟ ಪರ್ವತ ಶ್ರೇಣಿಯ ನಾನಾ ಕಡೆ ಭೂಕುಸಿತ, ಜಲಸ್ಫೋಟ ಸಂಭವಿಸಿ ಆಗಸ್ಟ್ 9ರಂದು ಉಂಟಾದ ಭೀಕರ ನೆರೆ ಘಟ್ಟದ ತಪ್ಪಲಿನ ಹಳ್ಳಿಗಳನ್ನು ಕಂಗೆಡಿಸಿರುವ ನಡುವೆಯೇ, ಚಾರ್ಮಾಡಿ ಘಾಟಿ ರಸ್ತೆಯ ಪಕ್ಕದಲ್ಲಿ ಹತ್ತಾರು ಕಡೆ ಭೂಕುಸಿತ ಉಂಟಾಗಿದೆ. ಆಗಸ್ಟ್ ಮೊದಲ ವಾರದಿಂದಲೇ ಘಾಟಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಸೆ. 14ವರೆಗೆ ದ.ಕ. ಜಿಲ್ಲಾಧಿಕಾರಿರಯವರು ಸಂಚಾರ ಸ್ಥಗಿತಗೊಳಿಸಿದ್ದರು ಇದೀಗ ಚಿಕ್ಕಮಗಳೂರು ಡಿಸಿಯವರು ದ್ವಿಚಕ್ರ, ತ್ರಿಚಕ್ರ ಹಾಗೂ ಇನ್ನಿತರ ಸಣ್ಣ ವಾಹನಗಳು ಸಂಚರಿಸಲು ಅವಕಾಶ ನೀಡಿದ್ದರಿಂದ ಕೊಟ್ಟಿಗೆಹಾರದ ಕಡೆಯಿಂದ ವಾಹನಗಳು ಇಳಿಯತೊಡಗಿವೆ. ಆದರೆ ಘಾಟಿಯ ತಿರುವುಗಳು ಮಾತ್ರ ಇನ್ನೂ ಅಪಾಯದಿಂದ ಮುಕ್ತವಾಗಿಲ್ಲ ಹೀಗಾಗಿ ರಾ.ಹೆ. ಇಲಾಖೆಯು ಚಾರ್ಮಾಡಿ ಘಾಟಿ ರಸ್ತೆಯ ಬಗ್ಗೆ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ನಿರ್ಧಾರಕ್ಕೆ ಸ್ಪಷ್ಟ ಮುನ್ನೋಟ ಪಡೆಯುವುದಕ್ಕಾಗಿ ಮಣ್ಣು ಪರೀಕ್ಷೆ ನಡೆಸಿದೆ. ಮಣ್ಣು ತಜ್ಞರಾದ ಬೆಂಗಳೂರಿನ ಶ್ರೀನಿವಾಸ ಮೂರ್ತಿ ಚಾರ್ಮಾಡಿ ಘಾಟಿಯ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ.

ಸಮಗ್ರ ಪರೀಕ್ಷೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಅವರು ನಮಗೆ ವರದಿ ನೀಡಲಿದ್ದಾರೆ. ನಾವು ಅದನ್ನು ಸರಕಾರಕ್ಕೆ ಸಲ್ಲಿಸಲಿದ್ದೇವೆ. ಈ ಮೂಲಕ ಘಾಟಿಯ ಮಣ್ಣು ಇತ್ತೀಚಿನ ವರ್ಷಗಳಲ್ಲಿ ಯಾಕೆ ಕುಸಿಯುತ್ತಿದೆ. ಮಣ್ಣಿನ ಪದರದಲ್ಲಾದ ಬದಲಾವಣೆ ಏನೆಂಬುದು ತಿಳಿಯಲಿದೆ. ಇದು ಭವಿಷ್ಯದಲ್ಲಿ ಸರಕಾರ ಚಾರ್ಮಾಡಿ ಘಾಟಿಯ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ ಎಂದು ರಾ.ಹೆ. ಇಲಾಖೆಯ ಸಹಾಯಕ ಕಾರ್ಯಪಾಲ ಎಂಜಿನಿಯರ್ ರಮೇಶ್ ಎಚ್.ಪಿ. ತಿಳಿಸಿದ್ದಾರೆ.

2017ರಲ್ಲಿ ಇಲಾಖೆ ಚಾರ್ಮಾಡಿಯ ಶಾಶ್ವತ ಯೋಜನೆ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಇದರ ಅನುಷ್ಠಾನ ಪ್ರಸ್ತುತ ಕೈಗೊಂಡಿರುವ ಮಣ್ಣು ಪರೀಕ್ಷೆಯ ಮೇಲೆ ಅವಲಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಹೆದ್ದಾರಿ- 73 (ಮಂಗಳೂರು- ವಿಲ್ಲುಪುರಂ)ರಲ್ಲಿ ಬರುವ ಘಾಟಿ ರಸ್ತೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದವರೆಗೆ 22 ಕಿ.ಮೀ. ಉದ್ದವಿದ್ದು, ಕಿ.ಮೀ. 76ರಿಂದ 86.20ರವರೆಗಿನ ಘಾಟ್ ಭಾಗದಲ್ಲಿ ಹಲವೆಡೆ ಮಣ್ಣು ಕುಸಿತ, ರಸ್ತೆ ಕುಸಿತ ಉಂಟಾಗಿದ್ದು, ಇದನ್ನು ದುರಸ್ತಿಗೊಳಿಸುವ ಕಾರ್ಯ ದ.ಕ. ಮತ್ತು ಚಿಕ್ಕಮಗಳೂರು ವ್ಯಾಪ್ತಿಗಳಲ್ಲಿ ಪ್ರತ್ಯೇಕವಾಗಿ ನಡೆಯುತ್ತಿದೆ. ಆಗಸ್ಟ್ ಮೊದಲ ವಾರ ಆರಂಭಗೊಂಡ ಕೆಲಸ ಈಗಲೂ ಮುಂದುವರಿದಿದೆ. ಸೆ.14ರ ಹೊತ್ತಿಗೆ ವಾಹನ ಸಂಚಾರಕ್ಕೆ ಹೆದ್ದಾರಿಯನ್ನು ಮುಕ್ತಗೊಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

See also  ಕೆಎಸ್ಆರ್ ಟಿಸಿ ಬಸ್ಸು ಡಿಕ್ಕಿ: ಯುವಕನ ಸಾವು

11ನೇ ತಿರುವುವರೆಗಿನ ರಸ್ತೆಯ ಪಕ್ಕದಲ್ಲಿ ಹತ್ತಕ್ಕೂ ಅಧಿಕ ಕಡೆ ಭೂಕುಸಿತ ಉಂಟಾಗಿದ್ದು, ಅಲ್ಲೆಲ್ಲ ಕಾಮಗಾರಿ ನಡೆಸಿ ನೀರು ಹರಿಯಲು ವ್ಯವಸ್ಥೆ ಮಾಡಲಾಗಿದೆ. ತಾತ್ಕಾಲಿಕ ಗೋಡೆ ನಿರ್ಮಿಸಲಾಗಿದೆ. ರಸ್ತೆಗೆ ಬಿದ್ದ ಮಣ್ಣು, ಕಲ್ಲು ತೆರವು ಮಾಡಲಾಗಿದ್ದು, ರಸ್ತೆ ಕುಸಿದ ಕಡೆ ಕಲ್ಲು ತುಂಬಿಸಿ ಗಟ್ಟಿಗೊಳಿಸಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು