News Kannada
Friday, December 02 2022

ಕರಾವಳಿ

ಕಡಲಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ

Photo Credit :

ಕಡಲಕೆರೆಯಲ್ಲಿ ದೋಣಿ ವಿಹಾರಕ್ಕೆ ಚಾಲನೆ

ಮೂಡುಬಿದಿರೆ: ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿರುವ ಕಡಲಕೆರೆ ನಿಸರ್ಗಧಾಮದಲ್ಲಿ ಕಡಲಕೆರೆಗೆ 20 ಸಾವಿರ ಮೀನು ಮರಿಗಳ ಸಮರ್ಪಣೆ ಮತ್ತು ದೋಣಿವಿಹಾರ ಮಾಡುವ ಮೂಲಕ ಈ ವರ್ಷದ ದೋಣಿ ವಿಹಾರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಶನಿವಾರ ಚಾಲನೆ ನೀಡಿದರು

ಬಳಿಕ ಮಾತನಾಡಿದ ಅವರು ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಈ ಪ್ರದೇಶವನ್ನು ಮಿನಿಪಿಲಿಕುಳವಾಗಿ ರೂಪಿಸಲು ಯೋಜನೆಯನ್ನು ರೂಪಿಸಲಾಗುವುದು. ಮಳೆಗಾಳದಲ್ಲಿ ಆಕರ್ಷಣೀಯವಾಗಿರುವ ಈ ನಿಸರ್ಗಧಾಮದಲ್ಲಿ ದೋಣಿ ವಿಹಾರ ಹಾಗೂ ಪರಿಸರ ವೀಕ್ಷಣೆಗೆ ಶುಲ್ಕ ವಿಧಿಸುವುದರೊಂದಿಗೆ ನಿಗದಿತ ಅವಧಿಯಲ್ಲಿ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದು ಹಾಗೂ ಈ ಪರಿಸರದಲ್ಲಿ ಅನೈತಿಕ ಚಟುವಟಿಕೆ ನಡೆಯುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು ಶನಿವಾರ ಮತ್ತು ಭಾನುವಾರ ಪೊಲೀಸ್ ಕಾವಲು ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಕಡಲಕೆರೆಯಲ್ಲಿ ಬೇಸಿಗೆ ಕಾಲದಲ್ಲಿ ನೀರು ನಿಲ್ಲದಿರುವುದರಿಂದ ಮೀನು ಮರಿಗಳ ಅಭಿವೃದ್ಧಿಯಾಗದೆ ಮೀನುಗಳು ಸಾಯುತ್ತಿವೆ. ಬೇಸಿಗೆಯಲ್ಲಿ ಕೆರೆಯಲ್ಲಿ ಶಾಶ್ವತವಾಗಿ ನೀರು ನಿಲ್ಲುವಂತೆ ಮಾಡುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಪಾರ್ಕ್‍ನ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.

ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಚ್ಚಪ್ಪ, ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ, ರೋಟರಿ ಕ್ಲಬ್ ಅಧ್ಯಕ್ಷ ಸಿ.ಎಚ್ ಗಫೂರ್, ಮಾಜಿ ಅಧ್ಯಕ್ಷ ಡಾ.ರಮೇಶ್, ಪುರಸಭಾ ಸದಸ್ಯರಾದ ನಾಗರಾಜ ಪೂಜಾರಿ, ಸೌಮ್ಯ ಸಂದೀಪ್ ಶೆಟ್ಟಿ, ಸುರೇಶ್ ಕೋಟ್ಯಾನ್ ಕೊರಗಪ್ಪ, ಪಿ.ಕೆ.ಥೋಮಸ್, ಉದ್ಯಮಿ ನಾರಾಯಣ ಪಿ.ಎಂ. ಕಡಲಕೆರೆಯ ಬೋಟಿಂಗ್ ನಿರ್ವಾಹಕ ಡಾ.ಎಂ.ಎಸ್ ನಝೀರ್ ಮತ್ತಿತರರು ಉಪಸ್ಥಿತರಿದ್ದರು.

See also  ಅನಂತ್ ಕುಮಾರ್ ಸಾವನ್ನು ಸಂಭ್ರಮಿಸಿದ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್!!!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು