News Kannada
Friday, December 09 2022

ಕರಾವಳಿ

ಶುದ್ಧ ಮನಸ್ಸಿನಿಂದ ಭಗವಂತ ಆರಾಧಿಸಿದರೆ ಅನುಗ್ರಹ ಪ್ರಾಪ್ತಿ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

Photo Credit :

ಶುದ್ಧ ಮನಸ್ಸಿನಿಂದ ಭಗವಂತ ಆರಾಧಿಸಿದರೆ ಅನುಗ್ರಹ ಪ್ರಾಪ್ತಿ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಬೆಳ್ತಂಗಡಿ: ಶುದ್ಧ ಮನಸ್ಸಿನಿಂದ ಭಗವಂತನನ್ನು ಆರಾಧಿಸಿದಾಗ ಮಾತ್ರ ಭಗವಂತನ ಅನುಗ್ರಹ ಪ್ರಾಪ್ತಿಯಾಗಿ ಸಮಾಜದಲ್ಲಿ ಶಾಂತಿ-ನೆಮ್ಮದಿ, ಸತ್ಯ, ಧರ್ಮ ಬೆಳೆಯಲು ಸಾಧ್ಯ ಎಂದು ಕನ್ಯಾಡಿ ಶ್ರೀ ಗುರುದೇವ ಮಠಾಧೀಶ ನಿತ್ಯಾನಂದ ನಗರ ಶ್ರೀರಾಮಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಅವರು ಮಂಗಳವಾರ ಕನ್ಯಾಡಿ ಶ್ರೀರಾಮ ಕ್ಷೇತ್ರ ಶಿಷ್ಯವೃಂದದವರು ಹಾಗೂ ಭಕ್ತಬಂಧುಗಳು ನಡೆಸಿದ ಶ್ರೀಗಳ 11ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವದಲ್ಲಿ ಆಶಿರ್ವಚನ ನೀಡಿದರು.

ಸ್ವಾರ್ಥಕ್ಕಾಗಿ ಕಣ್ಣೀರು ಸುರಿಸುವವರೇ ಹೆಚ್ಚಾಗಿರುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ಬೆಳೆಯುತ್ತಿದೆ. ಅದಕ್ಕಾಗಿ ಸಮಾಜಕ್ಕಾಗಿ ತ್ಯಾಗ ಮಾಡುವ ಮನಸ್ಸು ಬೇಕಾಗಿದೆ ಧರ್ಮವನ್ನು ಬಾಹ್ಯ ರೂಪದಲ್ಲಿ ಕಾಣಲು ಸಾಧ್ಯವಿಲ್ಲ ಅದು ನಮ್ಮ ಅಂತರಾತ್ಮದಲ್ಲಿ ಕಾಣಬಹುದು. ಧರ್ಮ ಮತ್ತು ನಂಬಿಕೆಯು ಪ್ರತಿಯೊಬ್ಬರಲ್ಲಿ ಬೆಳೆದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಶಾಸಕ ಹರೀಶ್ ಪೂಂಜಾ ಮಾತನಾಡಿ, ಕನ್ಯಾಡಿ ಶ್ರೀರಾಮ ಕ್ಷೇತ್ರವು ಇಡೀ ದೇಶದಲ್ಲೇ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುವ ಕ್ಷೇತ್ರವಾಗಿದ್ದು, ಇಲ್ಲಿನ ಶ್ರೀಗಳ ನಿರಂತರ ಸೇವೆಯಿಂದ ಸಮಾಜದಲ್ಲಿ ಜಾಗೃತಿ ಮೂಡುತ್ತಿದೆ. ಇಂದು ರಾಜ್ಯಾದ್ಯಂತ ಪ್ರಕೃತಿ ವಿಕೋಪದಲ್ಲಿ ಅನೇಕ ಕಷ್ಟನಷ್ಟಗಳು ಬರುತ್ತಿದ್ದು, ಇದರ ನಿವಾರಣೆಗೆ ಮತ್ತು ಸಂತ್ರಸ್ತರಿಗೆ ಧೈರ್ಯ ತುಂಬುವ ಶಕ್ತಿ ಕನ್ಯಾಡಿ ಶ್ರೀರಾಮ ಕ್ಷೇತ್ರ ಪೀಠದಿಂದ ಸಿಗಲಿ ಎಂದರು.

ಮಾಜಿ ಸಚಿವ ಶಿವಾನಂದ ಭಟ್ಕಳ ಮಾತನಾಡಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಹಿಮೆಯನ್ನು ಸ್ವಾಮೀಜಿಗಳು ದೇಶದಾದ್ಯಂತ ಮಠಗಳನ್ನು ಸ್ಥಾಪಿಸುವ ಮೂಲಕ ಬಿತ್ತರಿಸಿದ್ದು, ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ. ಅದಕ್ಕಾಗಿ ಶ್ರೀಗಳ ಭಕ್ತವೃಂದವವರು ಸೇರಿ ಸುಮಾರು 50 ಸಾವಿರ ಮಠದ ಸದಸ್ಯತ್ವ ಅಭಿಯಾನ ಮಾಡಲು ಚಿಂತಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಂದೇಶ ವಾಚಿಸಿ ಕ್ಷೇತ್ರದ ವತಿಯಿಂದ ಶ್ರೀಗಳನ್ನು ಗೌರವಿಸಲಾಯಿತು.

See also  ನೀರ್ಕೆರೆ ಶಾಲೆಯಲ್ಲಿ ಸೈಕಲ್ ವಿತರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು