News Kannada
Tuesday, November 29 2022

ಕರಾವಳಿ

  ಗಾಳಿ ಮಳೆ ಮೂಡುಬಿದಿರೆ ಮಾರ್ಕೆಟ್ ಅಂಗಡಿಗಳಿಗೆ ಹಾನಿ   - 1 min read

Photo Credit :

   ಗಾಳಿ ಮಳೆ ಮೂಡುಬಿದಿರೆ ಮಾರ್ಕೆಟ್ ಅಂಗಡಿಗಳಿಗೆ ಹಾನಿ   

ಮೂಡುಬಿದಿರೆ: ಗುರುವಾರ ಮಧ್ಯಾಹ್ನ ಬೀಸಿದ ಭಾರಿ ಗಾಳಿ ಮಳೆಗೆ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿರುವ ಪುರಸಭೆಯ  ತಾತ್ಕಾಲಿಕ ಮಾರುಕಟ್ಟೆಯ ಅಂಗಡಿ ಕೋಣೆಗಳಿಗೆ ಹಾನಿಯಾಗಿದೆ. ಒಟ್ಟು ಐದು ಅಂಗಡಿ ಕೋಣೆಗಳ ಛಾವಣಿಯ ಶೀಟುಗಳು ತೆರೆದುಕೊಂಡಿದ್ದು ಶಟರ್ ಗಳು ತಿರುಚಿಕೊಂಡಿವೆ. ಗೋಡೆಗಳಿಗೂ ಅಲ್ಪ ಪ್ರಮಾಣದ ಹಾನಿಯಾಗಿದೆ.

ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಶಾಸಕ ಉಮಾನಾಥ ಕೋಟ್ಯಾನ್, ಪುರಸಭಾ ಮುಖ್ಯಾಧಿಕಾರಿ ಇಂಧು, ಎಂಜಿನಿಯರ್ ದಿನೇಶ್ ಮತ್ತಿತರರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಂಗಡಿಕೋಣೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ.  ತಾತ್ಕಾಲಿಕವಾಗಿ ಈ ಅಂಗಡಿಗಳ ಸೊತ್ತುಗಳನ್ನು ಪಕ್ಕದ ಖಾಲಿ ಇರುವ ಅಂಗಡಿಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ.

ಮುಂದುವರಿದ ಆತಂಕ: ಭಾರೀ ಗಾಳಿ ಮಳೆಗೆ ಇಲ್ಲಿನ ತಾತ್ಕಾಲಿಕ ಮಾರ್ಕೆಟ್ ನಿರಂತರ ಆತಂಕವನ್ನೇ ಎದುರಿಸುತ್ತಿದೆ. ಕಳೆದ ವರ್ಷವೂ ಗಾಳಿ ಮಳೆಗೆ ಇಲ್ಲಿನ ಅಂಗಡಿಗಳ ಶೀಟುಗಳು ಹಾರಿದ್ದವು. ಮಳೆ ನೀರಿನ ಕೊಳಚೆಯ ನಡುವೆ ತಾತ್ಕಾಲಿಕ ಮಾರ್ಕೆಟ್, ಅದರಲ್ಲೂ ಶುಕ್ರವಾರದ ಸಂತೆಗೆ ಗ್ರಾಹಕರು, ವ್ಯಾಪಾರಿಗಳು ವ್ಯವಹರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಎರಡು ವರ್ಷಗಳ ಅವಧಿಗೆ ತಾತ್ಕಾಲಿಕ ಕೋಣೆಗಳಿಗೆ ಸ್ಥಳಾಂತರಗೊಂಡ ಮಾರ್ಕೆಟ್ ಇದೀಗ ತನ್ನದಲ್ಲದ ತಪ್ಪಿಗೆ ತಾತ್ಕಾಲಿಕವಾಗಿ ಸ್ವರಾಜ್ಯ ಮೈದಾನದಲ್ಲಿ ಸಂಕಟಪಡುವಂತಾಗಿದೆ.

See also  ಕಾರ್ಕಳ: ಸರಕಾರಿ ಆಸ್ಪತ್ರೆಯಲ್ಲಿ ಶೈತ್ಯಾಗಾರ ಕಾರ್ಯಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

193
Deevith S K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು