News Kannada
Friday, December 02 2022

ಕರಾವಳಿ

ಬೆಳ್ತಂಗಡಿ ತಾಲೂಕಿನಲ್ಲಿ ತಗ್ಗದ ಮಳೆರಾಯನ ಆರ್ಭಟ

Photo Credit :

ಬೆಳ್ತಂಗಡಿ ತಾಲೂಕಿನಲ್ಲಿ ತಗ್ಗದ ಮಳೆರಾಯನ ಆರ್ಭಟ

ಬೆಳ್ತಂಗಡಿ: ಮಳೆರಾಯನ ಆರ್ಭಟ ಇನ್ನೂ ಕಡಿಮೆಯಾಗದೇ ಇರುವುದರಿಂದ ಆತಂಕದ ವಾತಾವರಣ ಈಚೆಗೆ ಪ್ರವಾಹ ಬಂದ ಪ್ರದೇಶಗಳಲ್ಲಿ ಇನ್ನೂ ಮನೆ ಮಾಡಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪಶ್ವಿಮ ಘಟ್ಟದ ತಪ್ಪಲಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಬೆಳ್ಳಂಬೆಳಗೆಯೇ ಕಪ್ಪು ಮೋಡ ಆವರಿಸಿ, ಮಳೆಯಾಗುತ್ತಿದ್ದರೆ ಜನರಲ್ಲಂತೂ ಪ್ರವಾಹದ ದಿನಗಳ ನೆನಪೇ ಹುಟ್ಟಿಸುವಂತಿದೆ.

ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಚಾರ್ಮಾಡಿ, ನೆರಿಯ ಗ್ರಾಮಗಳ ಪ್ರದೇಶದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದೆ. ನೇತ್ರಾವತಿ ನದಿ, ಅಣಿಯೂರು ಹಳ್ಳ, ಮೃತ್ಯುಂಜಯ ಹೊಳೆಯಲ್ಲಿ ನೀರಿನ ಮಟ್ಟ ಏರುತ್ತಿದೆ. ಕೆಲವೊಮ್ಮೆ ತಗ್ಗುತ್ತಿದೆ. ಆದರೆ ಯಾವುದೇ ಭೀತಿ ಹುಟ್ಟಿಸುವಂತಹ ರೀತಿಯಲ್ಲಿ ಇಲ್ಲ ಎಂದು ಈ ಭಾಗದ ಸ್ಥಳೀಯರು ಹೇಳುತ್ತಾರೆ.

ಮಿತ್ತಬಾಗಿಲು ಗ್ರಾಮದ ಏಳೂವರೆ ಹಳ್ಳ ಹಾಗೂ ಕೂಡಬೆಟ್ಟು ಹಳ್ಳದಲ್ಲಿ ಆಗಾಗ ನೀರಿನ ಪ್ರಮಾಣ ಏರುತ್ತಿರುತ್ತದೆ. ದುರ್ಗದಬೆಟ್ಟದಲ್ಲಿ ಭೂ ಕುಸಿತಗಳು ಉಂಟಾಗಿ ಮಲವಂತಿಗೆ ನಂದಿಕಾಡು, ಪರ್ಲ, ಮಕ್ಕಿ, ಸಿಂಗನಾರು, ದೈಪಿತ್ತಿಲು, ಇಲ್ಯರಕಂಡ, ಮಿತ್ತಬಾಗಿಲಿನ ಕುಕ್ಕಾವು, ಕಕ್ಕೆನಾಜೆ, ಚಾರ್ಮಾಡಿಯ ಹೊಸಮಠ, ಅಂತರ, ಕೊಳಂಬೆ, ಅನಾರು ಕಡೆಗಳಲ್ಲಿ ಪ್ರವಾಹ ಉಂಟಾಗಿತ್ತು. ಬೃಹತ್ ಗ್ರಾತ್ರದ ಮರಗಳು, ಕಲ್ಲುಗಳು ನೀರಿನೊಂದಿಗೆ ಕೊಚ್ಚಿಕೊಂಡು ಬಂದಿತ್ತು. ಹೊಸ ನೀರಿನ ಹಳ್ಳಗಳು ಸೃಷ್ಟಿಯಾಗಿತ್ತು. ಇದೀಗ ನಿರಂತರ ಮಳೆಯಿಂದ ಭೂಕುಸಿತದ ಭೀತಿ ಇನ್ನು ಜನರಿಂದ ಹೋಗಿಲ್ಲ.

ಶುಕ್ರವಾರ ಮುಂಜಾನೆ ಮಳೆಯ ರಭಸ ಹೆಚ್ಚಾಗಿತ್ತು. ನದಿಗಳಲ್ಲಿ ನೀರಿನ ಪ್ರಮಾಣದ ಮಟ್ಟವೂ ಹೆಚ್ಚಿತ್ತು. ಆದರೆ ಆಗಾಗ ಮಳೆಯೂ ಬ್ರೇಕ್ ನೀಡುವ ಕಾರಣ ನದಿ, ಹೊಳೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ನಮಗೂ ಕೂಡಾ ಅಷ್ಟೇನು ಭಯವಿಲ್ಲವಾಗಿದೆ ಎಂದು ಕುಕ್ಕಾವು ಕೂಡಬೆಟ್ಟು ನಿವಾಸಿ ವಾಸುದೇವ ಕಕ್ಕನಾಜೆ ಹೇಳುತ್ತಾರೆ.

ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂತರ-ಅರಣೆಪಾದೆ ಪ್ರದೇಶದಲ್ಲಿ ಮೂರನೇ ಬಾರಿ ಸಂಪರ್ಕ ಕಡಿದುಹೋಗಿದ್ದು, ನದಿಯಲ್ಲಿ ಮರಳು, ಮಣ್ಣು ತುಂಬಿ ನೀರು ಉಕ್ಕಿ ಹರಿಯುತ್ತಿದೆ. ಅಂತರಬೈಲು ಸಮೀಪ ಜೆಸಿಬಿ ನಿರಂತರ ಕಾಮಗಾರಿ ನಡೆಸುತ್ತಿದ್ದು, ಮಳೆ ನೀರು ಹೆಚ್ಚಳದಿಂದ ನಿರಂತರ ಸಂಪರ್ಕ ಕಡಿಗೊಳ್ಳುತ್ತಿದೆ.

 

See also  ನಾಡಬಂದೂಕು ತಯಾರಿಕೆ: ಒಬ್ಬನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು