News Kannada
Thursday, December 01 2022

ಕರಾವಳಿ

ಕಮಲ ಭಟ್ ಗೆ ರೋಟರಿ ‘ವೃತ್ತಿಪರತೆ ಸೇವಾ ಶ್ರೇಷ್ಠತೆ’ ಪ್ರಶಸ್ತಿ

Photo Credit :

ಕಮಲ ಭಟ್ ಗೆ ರೋಟರಿ 'ವೃತ್ತಿಪರತೆ ಸೇವಾ ಶ್ರೇಷ್ಠತೆ' ಪ್ರಶಸ್ತಿ

ಮಂಗಳೂರು: ನಗರದ ಖ್ಯಾತ ಶಾಸ್ತ್ರೀಯ ನೃತ್ಯ ಕಲಾ ಶಿಕ್ಷಣ ಗುರು ಹಾಗೂ “ನಾಟ್ಯಾಲಯ” ನೃತ್ಯ ಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪಕಿ ವಿದೂಷಿ ಕಮಲ ಭಟ್ ಅವರಿಗೆ ನೃತ್ಯ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗೆ ರೋಟರಿ ಸಂಸ್ಥೆಯ ಪ್ರಸ್ತುತ ಸಾಲಿನ ಪ್ರತಿಷ್ಠಿತ ವೃತ್ತಿಪರತೆ ಸೇವಾ ಶ್ರೇಷ್ಠತೆ ಪ್ರಶಸ್ತಿ ನೀಡಿ ಗೌರವಿಸಿದೆ. 

ಈಚೆಗೆ ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ನಗರದ ಹೋಟೇಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಪ್ರಧಾನ ಮಾಡಿ ಅಭಿನಂದಿಸಲಾಯಿತು.

ರೋಟರಿ ಮಂಗಳೂರು ಸಂಸ್ಥೆಯ ಅಧ್ಯಕ್ಷ ರೋ. ಡಾ. ರಂಜನ್ ಅವರು ಕಮಲ ಭಟ್‍ರವರು ನೃತ್ಯ ಕಲೆಗೆ ನೀಡಿದ ಸುದೀರ್ಘ ಅನುಪಮ ಸೇವೆ ಮತ್ತು ಕೊಡುಗೆಯನ್ನು ಪರಿಗಣಿಸಿ ಹಾಗು ಸಂಸ್ಥೆಯ ವೃತ್ತಿಪರ ಸೇವಾ ಯೋಜನೆ ಮತ್ತು ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರೋ. ಪ್ರತಿಭಾರಾವ್ ಅವರು ತಮ್ಮ ಅಭಿನಂದನಾ ಭಾಷಣದಲ್ಲಿ ಭಟ್‍ ಅವರು ಕಳೆದ ನಾಲ್ಕು ದಶಕಗಳಿಂದ ಸುಮಾರು 400 ನೃತ್ಯ ಕಲಾವಿದರಿಗೆ ನೃತ್ಯ ಶಿಕ್ಷಣ ತರಬೇತಿಯನ್ನು ಧಾರೆ ಎರೆದಿದ್ದಾರೆಂದು ಮಾಹಿತಿ ನೀಡಿ ಅವರ ಸಾಧನೆ ಮತ್ತು ವಿವಿಧ ಪ್ರಶಸ್ತಿಗಳ ವಿವರ ನೀಡಿದರು. ಪಾಶ್ಚ್ಚಾತ್ಯ ಸಂಸ್ಕೃತಿಯ ದಾಳಿಯಿಂದ ವಿನಾಶದ ಅಂಚಿನಲ್ಲಿರುವ, ಜಾನಪದ ಸಾಂಪ್ರದಾಯ, ಪರಂಪರೆಯಾದ ಶಾಸ್ತ್ರೀಯ ನೃತ್ಯ ಕಲೆಯನ್ನು ಉಳಿಸುವ ಮತ್ತು ಬೆಳೆಸುವ ಉತ್ತಮ ಕಾರ್ಯವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಕಮಲ ಭಟ್‍ ಅವರು ಶಾಸ್ತ್ರೀಯ ನೃತ್ಯ ದೇಶದ ಸಂಪ್ರಾದಾಯಿಕ ಕಲೆಯಾಗಿದ್ದು ಉಜ್ವಲ ಭವಿಷ್ಯ ಹೊಂದಿದ್ದು ಅದಕ್ಕೆ ದೇಶಾದಾದ್ಯಂತ ಕಲಾಭಿಮಾನಿಗಳ ಪ್ರೋತ್ಸಾಹ ಮತ್ತು ಸಹಕಾರ ಇದೆಯೆಂದು ನುಡಿದು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಸಹಾಯಕ ಗವರ್ನರ್ ರೋ. ಸುಮಿತ್ ರಾವ್, ರೋ. ವಿದ್ಯಾರಾವ್, ರೋ. ಮಂಗಳ ರೈ ರೋ. ಆಶಾ ಹೆಗ್ಡೆ ಉಪಸ್ಥಿತರಿದ್ದು ಸನ್ಮಾನದ ವಿಧಿವಿಧಾನವನ್ನು ನೆರವೇರಿಸಿದರು. ಕಾರ್ಯದರ್ಶಿ ಪ್ರಶಾಂತ್ ರೈ ವಂದಿಸಿದರು.

See also  ಅನೈತಿಕ ಸಂಬಂಧ ಶಂಕೆ: ಪತ್ನಿಯನ್ನು ಕೊಂದ ಪತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು