News Kannada
Sunday, November 27 2022

ಕರಾವಳಿ

ಬೆಳ್ತಂಗಡಿಯ 61 ಸಂತ್ರಸ್ತರ ಖಾತೆಗೆ 37 ಲಕ್ಷ ರೂ. ಜಮೆ: ಶಾಸಕ ಹರೀಶ್ ಪೂಂಜ - 1 min read

Photo Credit :

ಬೆಳ್ತಂಗಡಿಯ 61 ಸಂತ್ರಸ್ತರ ಖಾತೆಗೆ 37 ಲಕ್ಷ ರೂ. ಜಮೆ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಎನ್‍ಡಿಆರ್‍ಎಫ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ರಾಜ್ಯದ 191 ಮನೆಗಳ ಪೈಕಿ ಬೆಳ್ತಂಗಡಿಯ 61 ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರಕಾರ ನೇರವಾಗಿ 37 ಲಕ್ಷ ರೂ. ಖಾತೆಗೆ ಜಮೆ ಮಾಡಿದೆ. ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ವತಿಯಿಂದ ಬೆಳ್ತಂಗಡಿ ಸಂತಕಟ್ಟೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಸಭಾಭವನದಲ್ಲಿ ಹಮ್ಮಿಕೊಂಡ ಸಂಘಟನಾ ಪರ್ವ-2019 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಯನ್ನು ಮನೆ ಮನೆಗೆ ತಲುಪಿಸುವಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಶ್ರಮಿಸಬೇಕಿದೆ. ಮಂಗಳೂರು ವಿಭಾಗದಲ್ಲಿ 23 ಸಾವಿರ ಹೊಸ ಸದಸ್ಯತ್ವವನ್ನು ಮಾಡಲಾಗಿದ್ದು ಬೆಳ್ತಂಗಡಿ ಮೊದಲ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ 50 ಸಾವಿರ ಸದಸ್ಯತ್ವ ಗುರಿ ನಮ್ಮದಾಗಲಿ. ಸಂಘಟನಾತ್ಮಕವಾಗಿ ಅತೀ ಹೆಚ್ಚು ಸದಸ್ಯತ್ವ ಹೊಂದಿರುವ ಭಾರತೀಯ ಜನತಾ ಪಾರ್ಟಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಭಿವೃದ್ಧಿಯ ಆಡಳಿತ ನೀಡುವ ಮೂಲಕ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಸಂಘಟನೆಯ ಸದಸ್ಯತ್ವ ಅಭಿಯಾನದ ಜತೆಜತೆಗೆ ಬೂತ್ ಮಟ್ಟದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ವಿಭಾಗ ಸಹಪ್ರಭಾರಿ ಪ್ರತಾಪ್‍ಸಿಂಹ ನಾಯಕ್, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಬಿಜೆಪಿ ಚುನಾವಣಾಧಿಕಾರಿ ಬಾಲಕೃಷ್ಣ ವಿ.ಶೆಟ್ಟಿ, ಸಹಾಯಕ ಚುನಾವಣಾಧಿಕಾರಿ ಸದಾನಂದ ಪೂಜಾರಿ ಉಂಗಿಲಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿ.ಪಂ., ತಾ.ಪಂ. ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಶಕ್ತಿ ಕೇಂದ್ರಗಳ ಪದಾಧಿಕಾರಿಗಳು, ಗ್ರಾಮ ಸಮಿತಿ ಅಧ್ಯಕ್ಷರು, ಬೂತ್ ಸಮಿತಿ ಅಧ್ಯಕ್ಷರು,  ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಬೆಳಾಲು ಸ್ವಾಗತಿಸಿ, ಬಿಜೆಪಿ ಪ್ರಮುಖ್ ರಾಜೇಶ್ ಪೆರ್ಮುಡ ಕಾರ್ಯಕ್ರಮ ನಿರೂಪಿಸಿದರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಉಪ್ಪಡ್ಕ ವಂದಿಸಿದರು.

61 ಸಂತ್ರಸ್ತರ ಖಾತೆಗೆ 37 ಲಕ್ಷ ರೂ. ಜಮೆ

ಬೆಳ್ತಂಗಡಿ ತಾಲೂಕಲ್ಲಿ ನೆರೆಯಿಂದ ತತ್ತರಿಸಿದ ಪ್ರದೇಶಗಳಿಗೆ ಸಚಿವ ಸಂಪುಟ ರಚನೆಯಾಗುವ ಮುನ್ನವೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾಲೂಕು ಮಾತ್ರವಲ್ಲದೆ ರಾಜ್ಯವನ್ನು ಸುತ್ತಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಪ್ರಸ್ತಕ್ತ ಎನ್‍ಡಿಆರ್‍ಎಫ್ ಗೈಡ್‍ಲೈನ್ ಪ್ರಕಾರ ಬಿಡುಗಡೆಗೊಂಡ ರಾಜ್ಯದ 191 ಮನೆಗಳ ಪೈಕಿ ಬೆಳ್ತಂಗಡಿಯ 61 ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರಕಾರ ನೇರವಾಗಿ 37 ಲಕ್ಷ ರೂ. ಖಾತೆಗೆ ಜಮೆ ಮಾಡಿದೆ. ಅಧಿಕಾರಿಗಳ ಸಹಕಾರ, ಕಾರ್ಯಕರ್ತರ ಶ್ರಮದಿಂದ ನೆರೆ ಸಂತ್ರಸ್ತರ ಪರಿಹಾರ ಸಮರ್ಪಕವಾಗಿ ವಿತರಣೆಯಾಗಿದೆ. – ಶಾಸಕ ಹರೀಶ ಪೂಂಜ

 

See also  ಮಾಂಸದಂಗಡಿಯಲ್ಲಿ ಕಾರ್ಮಿಕ ನೇಣು ಬಿಗಿದು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು