News Kannada
Friday, December 02 2022

ಕರಾವಳಿ

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಗೆ ‘ಉತ್ತಮ ಸಹಕಾರಿ ಪ್ರಶಸ್ತಿ’

Photo Credit :

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಗೆ 'ಉತ್ತಮ ಸಹಕಾರಿ ಪ್ರಶಸ್ತಿ'

ಮಂಗಳೂರು: ಸೌಹಾರ್ದ ಸಹಕಾರಿ ಕ್ಷೇತ್ರದ 2018-2019ನೇ ಸಾಲಿನ ರಾಜ್ಯದ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿಯನ್ನು ಒಡಿಯೂರು ಶ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ, ದಕ್ಷಿಣ ಕನ್ನಡ ಇವರಿಗೆ ನೀಡಿ ಪುರಸ್ಕರಿಸಿದೆ.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ಇದರ 18ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ, ಇದರ ಅಧ್ಯಕ್ಷ ಬಿ.ಹೆಚ್ ಕೃಷ್ಣಾ ರೆಡ್ಡಿ,  ಸಚಿವೆ ಶಶಿಕಲಾ ಜೊಲ್ಲೆ ಅಣ್ಣ ಸಾಹೇಬ್ ಮತ್ತು ಕ.ರಾ.ಸೌ.ಸಂ.ಸ.ನಿ ಇದರ ಮೈಸೂರು ಪ್ರಾಂತದ ನಿರ್ದೇಶಕ ಎಸ್.ಕೆ.ಮಂಜುನಾಥ್, ಎಚ್.ವಿ.ರಾಜೇವ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ್ ಇವರು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಲ|| ಎ.ಸುರೇಶ್ ರೈ ಎಂ.ಜೆ.ಎಫ್ ಇವರಿಗೆ ಸ್ಮರಣಿಕೆಯೊಂದಿಗೆ ರಾಜ್ಯದ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಅಭಿನಂದಿಸಿದರು

ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳ ಶುಭಾಶೀರ್ವಾದದೊಂದಿಗೆ ಲ|| ಎ ಸುರೇಶ್ ರೈ ಎಂ.ಜೆ.ಎಫ್ ಇವರ ಅಧ್ಯಕ್ಷತೆಯಲ್ಲಿ 2011ರಲ್ಲಿ ಆರಂಭವಾದ ಸಹಕಾರಿಯು ಕ್ಷಿಪ್ರವಾಗಿ ಅಭಿವೃದ್ಧಿಯನ್ನು ಕಂಡ ಸಹಕಾರಿಯಾಗಿರುತ್ತದೆ.  ಕೇವಲ 8 ವರ್ಷಗಳಲ್ಲಿ 15 ಶಾಖೆಗಳೊಂದಿಗೆ ಸಂಪೂರ್ಣ ಗಣಕೀಕೃತ ಕೋರ್ ಸಿಸ್ಟಂ, ಮೊಬೈಲ್ ಆ್ಯಪ್ ತಂತ್ರಜ್ಞಾನಗಳ ಮೂಲಕ ತನ ಸದಸ್ಯರಿಗೆ ತ್ವರಿತ ಹಾಗೂ ಪಾರದರ್ಶಕ ಸೇವೆಯನ್ನು ನೀಡುತ್ತಿದೆ. ಒಡಿಯೂರಿನ ಪೂಜ್ಯ ಶ್ರೀಗಳ ಗ್ರಾಮವಿಕಾಸ ಯೋಜನೆಯ ಸಂಕಲ್ಪದಂತೆ  ದಕ್ಷಿಣ ಕನ್ನಡ- ಉಡುಪಿ, ಉಭಯ ಜಿಲ್ಲೆಗಳ ಹಳ್ಳಿ ಹಳ್ಳಿಗಳ ಬಡ ಜನರನ್ನು ಒಗ್ಗೂಡಿಸಿ ಸ್ವ-ಸಹಾಯ ಗುಂಪುಗಳನ್ನು ಕಟ್ಟಿ ಆ ಮೂಲಕ  ಬಡ ಜನರ ಆರ್ಥಿಕ-ಸಾಮಾಜಿಕ ಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿಯು ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದೆ.  ಸಹಕಾರಿಯ ಅಧ್ಯಕ್ಷರಾದ ಲ|| ಎ ಸುರೇಶ್ ರೈ ಎಂ.ಜೆ.ಎಫ್ ಇವರು ಸಹಕಾರಿ ಸೇವೆಯನ್ನು ಪೂಜ್ಯ ಶ್ರೀಗಳ ಸೇವೆ ಎಂದು ತಿಳಿದು ಪ್ರಾಮಾಣಿಕತೆ, ಸಮರ್ಪಣಾ ಭಾವದಿಂದ ಸಹಕಾರಿಯ ಉನ್ನತಿಗೆ ಶ್ರಮ ವಹಿಸಿದವರು. 8 ವರ್ಷಗಳಿಂದ ಅಧ್ಯಕ್ಷರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿರುವುದರಿಂದ ಪೂಜ್ಯ ಶ್ರೀಗುರುಗಳ ಆಶೀರ್ವಾದವು ಪ್ರಸಾದವಾಗಿ ಪ್ರಶಸ್ತಿ ರೂಪದಲ್ಲಿ ಲಭಿಸಿದೆ ಎಂದರು.

 ಈ ಪ್ರಶಸ್ತಿಯು ಒಡಿಯೂರು ಸಹಕಾರಿಯ ಎಲ್ಲಾ ಸದಸ್ಯರಿಗೆ, ಆಡಳಿತ ಮಂಡಳಿಗೆ, ಸಿಬ್ಬಂದಿಗೆ, ಒಡಿಯೂರು ಸಂಸ್ಥಾನದ ಎಲ್ಲಾ ಭಕ್ತರಿಗೆ ಸಂದ ಗೌರವವಾಗಿದೆ ಎಂದರು.  ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಎಲ್ಲಾ ನಿರ್ದೇಶಕರು ಮೈಸೂರು ಪ್ರಾಂತದ ಎಲ್ಲಾ ಅಧಿಕಾರಿಗಳು ಒಡಿಯೂರು ಸಹಕಾರಿಯ ಆಡಳಿತ ಮಂಡಳಿಯ ನಿರ್ದೇಶಕರಾದ ಶ್ರೀ ಸೇರಾಜೆ ಗಣಪತಿ ಭಟ್, ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ದೇವಪ್ಪ ನೋಂಡ, ಶ್ರೀ ತಾರಾನಾಥ ಶೆಟ್ಟಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಎಂ.ಉಗ್ಗಪ್ಪ ಶೆಟ್ಟಿ ಹಾಗೂ ಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.

 

See also  ಅಡೂರು ಪರಿಸರದಲ್ಲಿ ಮತ್ತೆ ಕಾಡಾನೆ ಹಾವಳಿ, ಕಂಗಾಲಾದ ರೈತರು

 

         

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು