News Kannada
Wednesday, November 30 2022

ಕರಾವಳಿ

ಭಾರತೀಯ ಯೋಗಕ್ಕೆ ಚಾರಿತ್ರಿಕ ಮಹತ್ವವಿದೆ: ಮೋಹನ್ ಆಳ್ವ - 1 min read

Photo Credit :

ಭಾರತೀಯ ಯೋಗಕ್ಕೆ ಚಾರಿತ್ರಿಕ ಮಹತ್ವವಿದೆ: ಮೋಹನ್ ಆಳ್ವ

ಬಂಟ್ವಾಳ: ಭಾರತೀಯ ಯೋಗಕ್ಕೆ ಚಾರಿತ್ರಿಕ ಮಹತ್ವವಿದ್ದು, ಇದರಿಂದಲೇ ಪ್ರಪಂಚದ 177ಕ್ಕೂ ಅಧಿಕ ರಾಷ್ಟ್ರಗಳಿಂದು ಯೋಗವನ್ನು ಅನುಸರಿಸುತ್ತಿವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು.

ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ರಿ., ಮಂಗಳೂರು ಹಾಗೂ ಬಂಟ್ವಾಳ ಘಟಕ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೌದ್ಧಿಕ, ಮಾನಸಿಕ, ಶಾರೀರಿಕ ನೆಮ್ಮದಿಗೆ ಯೋಗ ಅಗತ್ಯ ಎಂದ ಅವರು ಮಕ್ಕಳಿಗೆ ಸ್ಮರಣಶಕ್ತಿ, ದೇಹದ ಉಲ್ಲಾಸಕ್ಕೆ ಯೋಗ ಸಹಕಾರಿ, ಹಲವು ರೋಗಗಳು ಯೋಗದಿಂದ ಗುಣವಾದ ಉದಾಹರಣೆಗಳಿವೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ತಾನು ಸ್ವತಃ ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಿದ್ದು, ದೇಹಾರೋಗ್ಯ ಕಾಪಾಡಿಕೊಂಡಿದ್ದೇನೆ. ಯೋಗಾಸನ ಮತ್ತು ಸಸ್ಯಾಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮದಿಂದ ದೇಹವನ್ನು ಆರೋಗ್ಯದಿಂದಿಡಲು ಸಾಧ್ಯ ಎಂದು ಶುಭ ಹಾರೈಸಿದರು.

ಎಂಟರಿಂದ ಎಂಭತ್ತು ವರ್ಷದೊಳಗಿನ ಸುಮಾರು 300ರಷ್ಟು ಯೋಗಪಟುಗಳು ಶನಿವಾರ ನೋಂದಾವಣೆಗೊಂಡರು. ಯೋಗ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮೋನಪ್ಪ ಪೂಜಾರಿ, ದಾಮೋದರ ರಾಮಕುಂಜ ನೇತೃತ್ವದಲ್ಲಿ ರಾಜ್ಯ ಮಟ್ಟದ ಮೂವತ್ತು ತೀರ್ಪುಗಾರರು ಈ ಸ್ಪರ್ಧಾಕೂಟದಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಭಾನುವಾರ ಸ್ಪರ್ಧೆಯ ಸಮಾರೋಪ ನಡೆಯಲಿದೆ. ಇದಕ್ಕೂ ಮುನ್ನ ಆಳ್ವಾಸ್ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

See also  ಕಸ್ತೂರಿರಂಗನ್ ವರದಿ ನಿರ್ಧಾರಕ್ಕೆ ಸಂಪುಟ ಉಪಸಮಿತಿ: ಅಂಗಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು