News Kannada
Tuesday, December 06 2022

ಕರಾವಳಿ

ಶಿವರಾಮ ಕಾರಂತರೆಂದರೆ ಅವರೊಬ್ಬ ವಿರಾಟ್ ವಿಶ್ವವಿದ್ಯಾನಿಲಯ: ಜಯಂತ್ ಕಾಯ್ಕಿಣಿ

Photo Credit :

ಶಿವರಾಮ ಕಾರಂತರೆಂದರೆ ಅವರೊಬ್ಬ ವಿರಾಟ್ ವಿಶ್ವವಿದ್ಯಾನಿಲಯ: ಜಯಂತ್ ಕಾಯ್ಕಿಣಿ

ಪುತ್ತೂರು: ಡಾ. ಶಿವರಾಮ ಕಾರಂತ ಅಸಮಾನ್ಯ ವ್ಯಕ್ತಿತ್ವದವರು. ಕಾರಂತರು ಎಂದರೆ ಅವರೊಬ್ಬ ವಿರಾಟ ವಿಶ್ವವಿದ್ಯಾನಿಲಯ. ಕಾರಂತರ ಆರಾಧನೆಯನ್ನು ಮಾಡುವುದರ ಬದಲು ಸಾಧಕ ಕಾರಂತರನ್ನು ಆವಾಹನೆ ಮಾಡುವ ಕೆಲಸ ಮಾಡಬೇಕು ಎಂದು ಚಿಂತಕ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಅವರು ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುತ್ತೂರು ಸಹಾಯಕ ಕಮಿಷನರ್ ಕಚೇರಿ ಮತ್ತು ಡಾ. ಶಿವರಾಮ ಕಾರಂತ ಬಾಲವನದ ಆಶ್ರಯದಲ್ಲಿ ನಡೆದ ಡಾ. ಶಿವರಾಮ ಕಾರಂತರ 118ನೇ ಜನ್ಮದಿನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಸಾಧನಾ ಭೂಮಿ: ಬಾಲವನ ಕಾರಂತರ ಸಾಧನಾ ಭೂಮಿ. ಯಾಕೆಂದರೆ 97 ನಾಟಕಗಳನ್ನು 200ಕ್ಕೂ ಮಿಕ್ಕಿ ಕಾದಂಬರಿಗಳನ್ನು ಕಾರಂತರು ಈ ಕರ್ಮ ಭೂಮಿಯಲ್ಲಿ ರಚಿಸಿದ್ದಾರೆ. ಅಲ್ಲದೇ ಮುದ್ರಣಾಲಯ, ನಾಟ್ಯ ಶಾಲೆ, ಮಕ್ಕಳ ಉದ್ಯಾನ ಹೀಗೆ ಹತ್ತು ಹಲವು ಸಂಗತಿಗಳಿಗೆ ಬಾಲವನ ಕಾರಣವಾಗುತ್ತದೆ. ಕಾರಂತರ ಕರ್ಮಭೂಮಿಯಾದ ಬಾಲವನದಲ್ಲಿ ಓಡಾಡುವ ಮೂಲಕ ನಾನು ನನ್ನ ಚೈತನ್ಯವನ್ನು ಪುನಶ್ಚೇತನಗೊಳಿಸಿಕೊಳ್ಳುತ್ತಿದ್ದೇನೆ ಎಂದರು.

ಕಾರಂತ ಥೀಮ್ ಪಾರ್ಕ್: ಅಧ್ಯಕ್ಷತೆ ವಹಿಸಿದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ಡಾ. ಶಿವರಾಮ ಕಾರಂತರ ಕರ್ಮ ಭೂಮಿ ಪುತ್ತೂರಿನ ಬಾಲವನದಲ್ಲಿ ಅವರ ಜನ್ಮದಿನೋತ್ಸವದ ಸಂದರ್ಭ ಪ್ರಶಸ್ತಿ ಪ್ರಧಾನ ಸಹಿತ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅವರಿಗೆ ನೀಡುವ ಗೌರವವಾಗಿದೆ. ಪುತ್ತೂರಿನ ಬಾಲವನದಲ್ಲಿ ಕಾರಂತ ಥೀಮ್ ಪಾರ್ಕ್ ನಿರ್ಮಿಸಲು ಪುತ್ತೂರು ಶಾಸಕ ಸಂಜೀವ ಮಠಂದೂರು ಯೋಜನೆ ರೂಪಿಸಿದ್ದಾರೆ. ಸರಕಾರದ ನೆರವಿನಿಂದ ಈ ಚಿಂತನೆ ಕಾರ್ಯಗತಗೊಳ್ಳಲಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಾದಂಬರಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಡಾ. ಶಿವರಾಮ ಕಾರಂತರು ಪುತ್ತೂರಿಗೆ ಹೆಸರು ತಂದು ಕೊಟ್ಟಿದ್ದಾರೆ ಎಂದರು. ಈ ಸಂದರ್ಭ ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಬಾಲವಿಜ್ಞಾನಿ ಅಮನ್ ಕೆ.ಎ. ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ, ಸವಣೂರು ಕೆ. ಸೀತಾರಾಮ ರೈ, ರೆ.ಫಾ. ವಿಜಯ ಹಾರ್ವಿನ್, ಕ್ಷಮಾ ರಾವ್, ನಗರಸಭಾ ಸದಸ್ಯರಾದ ದೀಕ್ಷಾ ಪೈ, ವಿದ್ಯಾ ಆರ್. ಗೌರಿ, ಇಂದಿರಾ ಬಿ. ಆಚಾರ್ಯ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಉಪಸ್ಥಿತರಿದ್ದರು.

ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್‍ನ ಪ್ರಾಂಶುಪಾಲ ಪ್ರೊ. ಝೇವಿಯರ್ ಡಿ’ಸೋಜಾ ಸ್ವಾಗತಿಸಿ, ತಹಶೀಲ್ದಾರ್ ಅನಂತ ಶಂಕರ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿಗೆ ಸನ್ಮಾನ:

ಪುತ್ತೂರು: ನಗರದ ಪರ್ಲಡ್ಕ ಡಾ. ಶಿವರಾಮ ಕಾರಂತ ಬಾಲವನದಲ್ಲಿ ಡಾ. ಕಾರಂತರ 118ನೇ ಜನ್ಮದಿನಾಚರಣೆಯ ಅಂಗವಾಗಿ ಹಿರಿಯ ಪತ್ರಕರ್ತ ಮಂಗಳೂರಿನ ಚಿದಂಬರ ಬೈಕಂಪಾಡಿಯವರಿಗೆ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಯನ್ನು ಗೌರವಿಸಿ ಸನ್ಮಾನಿಸಲಾಯಿತು.

See also  ಆರ್ಥಿಕ ಸಬಲೀಕರಣಕ್ಕೆ ಮೂರ್ತರೂಪ ಕೊಟ್ಟ ಸಹಕಾರಿ ಕ್ಷೇತ್ರ: ನಳಿನ್ ಕುಮಾರ್ ಕಟೀಲ್

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು