News Kannada
Tuesday, December 06 2022

ಕರಾವಳಿ

ಆಲೆಟ್ಟಿ ಸಹಕಾರಿ ಸಂಘದ ಎದುರಿನಲ್ಲಿ ರೈತ ಸಂಘದ ವತಿಯಿಂದ ಪ್ರತಿಭಟನೆ

Photo Credit :

ಆಲೆಟ್ಟಿ ಸಹಕಾರಿ ಸಂಘದ ಎದುರಿನಲ್ಲಿ ರೈತ ಸಂಘದ ವತಿಯಿಂದ ಪ್ರತಿಭಟನೆ

ಸುಳ್ಯ: ಹಿಂದಿನ ಸಮ್ಮಿಶ್ರ ಸರಕಾರ ಮಾಡಿದ್ದ ಸಾಲ ಮನ್ನಾ ಮೊತ್ತವು ರೈತರ ಖಾತೆಗೆ ಜಮೆ ಆಗದೇ ಇರುವುದನ್ನು ಪ್ರತಿಭಟಿಸಿ ಕರ್ನಾಟಕ ರಾಜ್ಯ ರೈತ ಸಂಘ ಅಲೆಟ್ಟಿ ಗ್ರಾಮ ಘಟಕದ ನೇತೃತ್ವದಲ್ಲಿ ಸುಳ್ಯ ತಾಲೂಕಿನ ಆಲೆಟ್ಟಿ ಕೃಷಿ ಪತ್ತಿನ ಸಹಕಾರಿ ಸಂಘದ ಎದುರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, 15 ದಿನಗಳ ಒಳಗಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡದಿದ್ದರೆ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಈಗಿನ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡುವುದು ಬಿಡಿ, ಹಿಂದಿನ ಸರ್ಕಾರಗಳು ನೀಡಿದ ಹಣವನ್ನು ತಲುಪಿಸುವ ಪ್ರಯತ್ನವನ್ನಾದರೂ ಮಾಡಲಿ. ಸರಕಾರಕ್ಕೆ ಮತ್ತು ಸಹಕಾರಿ ಸಂಘಗಳಿಗೆ ರೈತರ ಬಗ್ಗೆ ಕಾಳಜಿಯಿದ್ದರೆ ರೈತರ ಖಾತೆಗೆ ಹಣ ತುಂಬುವ ಪ್ರಯತ್ನವನ್ನು ಮಾಡುತ್ತೇವೆಂದು ರೈತರ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲೆಸೆದರು.

ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ತೀರ್ಥರಾಮ ನೆಡ್ಚಿಲು, ಗಿರಿಜಾಶಂಕರ ತುದಿಯಡ್ಕ ಮಾತನಾಡಿದರು. ಧರ್ಮಪಾಲ ಗೌಡ ಕೊಯಿಂಗಾಜೆ, ಮೂಸ ಕುಂಞಿ ಪೈಂಬೆಚ್ಚಾಲು, ಗೀತಾ ಕೋಲ್ಚಾರು, ದಯಾನಂದ ಪಾತಿಕಲ್ಲು, ಹರೀಶ್ ಕೊಯಿಂಗಾಜೆ, ಯತೀಶ್ ಬಾಳ್ಯಾಡಿ, ಯತಿರಾಜ್ ಕೊಯಿಂಗಾಜೆ, ಕಮಲಾಕ್ಷ ಕೊಯಿಂಗಾಜೆ, ಪದ್ಮನಾಭ ಕೊನ್ನೊಡಿ, ಪದ್ಮ ಕೊಯಿಂಗಾಜೆ, ಅಚ್ಚುತ ಮಾಸ್ತರ್, ಹರಿಪ್ರಸಾದ್ ಗಬ್ಬಲ್ಕಜೆ, ಸತ್ಯ ಗಬ್ಬಲ್ಕಜೆ, ಮನ್ಮಥ ಕುಡೆಕಲ್ಲು, ದಿನೇಶ ನಾಗಪಟ್ಟಣ, ಕೃಷ್ಣಪ್ಪ ಗುಡ್ಡೆಮನೆ, ಚಂದ್ರಕಾಂತ ನಾರ್ಕೋಡು, ಪುಟ್ಟಣ್ಣ ಗೌಡ, ವಿವೇಕಾನಂದ ಗೌಡ ಕೋಲ್ಚಾರು ಮತ್ತಿತರರು ಉಪಸ್ತಿತರಿದ್ದರು.

ಹಣ ವಾಪಾಸ್ಸಾದ ಎಲ್ಲಾ ರೈತರ ಖಾತೆ ಸಂಖ್ಯೆಗಳನ್ನು ಈಗ ಅಪ್ಲೋಡ್ ಮಾಡುತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೆ ಸಾಲಮನ್ನಾ ಹಣ ಜಮಾ ಆಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

See also  ಕರೆಂಕಿ ಶ್ರೀ ದುರ್ಗಾಫ್ರೆಂಡ್ಸ್ ಕ್ಲಬ್ ನ ವತಿಯಿಂದ 'ಸರಕಾರಿ ಶಾಲೆ ಉಳಿಸಿ' ಅಭಿಯಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು