News Kannada
Sunday, December 04 2022

ಕರಾವಳಿ

ಧರ್ಮಸ್ಥಳ ಗ್ರಾಮಾಭಿವದ್ಧಿಯಿಂದ “ಸ್ವಚ್ಛತಾ ಸೇನಾನಿಗಳಿಗೆ ಸಾಧಕ ಪ್ರಶಸ್ತಿ”

Photo Credit :

ಧರ್ಮಸ್ಥಳ ಗ್ರಾಮಾಭಿವದ್ಧಿಯಿಂದ “ಸ್ವಚ್ಛತಾ ಸೇನಾನಿಗಳಿಗೆ ಸಾಧಕ ಪ್ರಶಸ್ತಿ”

 ಬೆಳ್ತಂಗಡಿ: ಸ್ವಚ್ಛತೆಯ ಕುರಿತು ಸಾರ್ವಜನಿಕರಿಗೆ ಅರಿವು ಹೆಚ್ಚು ಮೂಡಿಸಿ, ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಲ್ಲಿ ರೋಗ-ರುಜಿನಗಳಿಂದ ದೂರ ನಿಂತು ಪ್ರತಿಯೊಬ್ಬರು ಸುಖೀ ಜೀವನ ನಡೆಸಬಹುದು ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಿಯೋಜಿಸಲ್ಪಟ್ಟ  ಸ್ವಚ್ಛತಾ ಸೇನಾನಿಗಳಲ್ಲಿ ಅತ್ಯುತ್ತಮ ಸ್ವಚ್ಛತಾ ಕಾರ್ಯ ನಿರ್ವಹಿಸಿದ 15 ಮಂದಿ ಸೇನಾನಿಗಳಿಗೆ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದರು.

ಸ್ವಚ್ಛತಾ ಸೇನಾನಿಗಳು ಕಳೆದ ಒಂದು ವರ್ಷದಿಂದ ಶಾಲೆ, ಅಂಗನವಾಡಿ, ಸಮುದಾಯ ಭವನ, ದೇವಸ್ಥಾನ, ಶ್ರದ್ಧಾಕೇಂದ್ರಗಳು, ಭಜನಾ ಮಂಡಳಿ, ಪೇಟೆ, ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ ಪ್ರತೀ ತಿಂಗಳು ಸ್ವಚ್ಛತಾ ಕಾರ್ಯಕ್ರಮ ನಡೆಸಿರುತ್ತಾರೆ. ಮಾತ್ರವಲ್ಲದೇ ಶಾಲೆಗಳಲ್ಲಿ, ಒಕ್ಕೂಟಗಳಲ್ಲಿ, ಇತರ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಿದ್ದರು.  ಸ್ವಚ್ಛತಾ ಸೇನಾನಿಗಳು ಈ ತನಕ   457 ಕಾರ್ಯಕ್ರಮವನ್ನು ನಡೆಸಿ 21528 ಮಂದಿ ಸ್ವಯಂ ಸೇವಕರಾಗಿ ಭಾಗವಹಿಸಿ ಅತ್ಯುತ್ತಮವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದ್ದರು.

ಸೇನಾನಿಗಳು ತುಂಬಾ ಆಸಕ್ತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ತಮ್ಮ ಗ್ರಾಮಗಳಲ್ಲಿ ಬಹಳ ಯಶಸ್ವಿಯಾಗಿ ನಡೆಸಿದ್ದು, ಇವರ ಸಾಧನೆಯನ್ನು ಗಮನಿಸಿದಾಗ 15 ಮಂದಿ ಅತ್ಯುತ್ತಮವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ “ಸಾಧಕ ಪ್ರಶಸ್ತಿ”ಗೆ ಆಯ್ಕೆಯಾಗಿದ್ದರು. ಅವರಿಗೆ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು  “ಸಾಧಕರಿಗೆ ಅಭಿನಂದನಾ ಪ್ರಶಸ್ತಿ” ಪ್ರಧಾನ ಮಾಡಲಾಯಿತು.

ಹೆಗ್ಗಡೆಯವರ ಮತ್ತು ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ದಿನದ ಆಚರಣೆಯ ಪ್ರಯುಕ್ತ ಕಳೆದ ವರ್ಷ ಅಂದರೆ 2018 ಅಕ್ಟೋಬರ್ ತಿಂಗಳಲ್ಲಿ ಬೆಳ್ತಂಗಡಿ ತಾಲೂಕನ್ನು ಸ್ವಚ್ಛ ತಾಲೂಕನ್ನಾಗಿ ಪರಿವರ್ತಿಸುವ ಉದ್ದೇಶದಿಂದ, ಸ್ವಯಂಸೇವಕರ ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನಾದ್ಯಾಂತ 118 ಮಂದಿಯನ್ನು ಸ್ವಚ್ಛತಾ ಸೇನಾನಿಯಾಗಿ ನಿಯೋಜನೆ ಮಾಡಿ ಕಳೆದ ಅ. 9 ಕ್ಕೆ  ಈ ದಿನ ಬೆಳ್ತಂಗಡಿ ತಾಲೂಕಿನಾದ್ಯಾಂತ “ಸ್ವಚ್ಛತಾ ಸೇನಾನಿಗಳ ದಿನಾಚರಣೆ”ಯ ಕಾರ್ಯಕ್ರಮವನ್ನು ಪ್ರತೀ ಸೇನಾನಿಗಳ ಗ್ರಾಮದಲ್ಲಿ  “ಸ್ವಚ್ಛತೆಯ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ಸ್ವಚ್ಛತಾ ಕಾರ್ಯಕ್ರಮ” ನಡೆಸಲಾಗಿತ್ತು.

 

 

ಹೇಮಾವತಿ ಹೆಗ್ಗಡೆಯವರು ಈ ಸಂದರ್ಭ ಸ್ವಚ್ಛತಾ ಸೇನಾನಿಗಳಾಗಿ ಕೆಲಸ ಮಾಡಿದ್ದಲ್ಲಿ, ಸ್ವಚ್ಛ ಗ್ರಾಮ ಸುಲಭ ರೀತಿಯಲ್ಲಿ ಪರಿವರ್ತನೆ ಆಗಬಹುದು. ಪ್ಲಾಸ್ಟಿಕ್ ಬಳಕೆಯನ್ನು ಪೂರ್ತಿ ನಿಲ್ಲಿಸಿ ಬದಲಿ ವ್ಯವಸ್ಥೆ ಬಟ್ಟೆಚೀಲಗಳನ್ನು ಬಳಕೆ ಮಾಡುವಂತೆ ಪೇರಣೆ ನೀಡಬೇಕು. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ನೊಂದಿಗೆ  ಪ್ರತಿ ಮನೆಗೆ ಅರಿವು ಮೂಡಿಸಿ ಜನರನ್ನು ಪರಿವರ್ತನೆ ಮಾಡಬೇಕು ಎಂದು ಮಾರ್ಗದರ್ಶನ ನೀಡಿದರು.

ಈ ಸ್ವಚ್ಛತಾ ಕಾರ್ಯಕ್ರಮದ ಯಶಸ್ವಿಗೆ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಎಲ್.ಹೆಚ್.ಮಂಜುನಾಥ್ ರವರು ಈ ಸಂದರ್ಭದಲ್ಲಿ ಮಾಹಿತಿ ಮಾರ್ಗದರ್ಶನ ನೀಡಿದ್ದರು.  ಈ ಕಾರ್ಯಕ್ರಮದಲ್ಲಿ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ.ಎ.ಶ್ರೀಹರಿ, ಹಣಕಾಸು ಪ್ರಾದೇಶಿಕ ನಿರ್ದೇಶಕರಾದ ಶಾಂತರಾಮ ಪೈ, ಶುದ್ಧಗಂಗಾ ಯೋಜನೆಯ ನಿರ್ದೇಶಕರಾದ ಲಕ್ಷ್ಮಣ್.ಎಂ ಹಾಗೂ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಗಳಾದ ಜಯಕರ ಶೆಟ್ಟಿ, ಯಶವಂತ್ ಭಾಗವಹಿಸಿದ್ದರು.

See also  ಕೃಷಿ ಮಾಡಬೇಕಾದ ಕುಡಾಲ್ ಮೆರ್ಕಳ ಬಯಲು ಖಾಲಿ ಬಿದ್ದಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು