News Kannada
Tuesday, December 06 2022

ಕರಾವಳಿ

ಸುಳ್ಯ ನಗರದಲ್ಲಿ ನಡೆಯದ ಕಸ ಸಂಗ್ರಹ

Photo Credit :

ಸುಳ್ಯ ನಗರದಲ್ಲಿ ನಡೆಯದ ಕಸ ಸಂಗ್ರಹ

ಸುಳ್ಯ: ಸುಳ್ಯ ನಗರದಲ್ಲಿ ಕಸ ವಿಲೇವಾರಿಯಲ್ಲಿ ಮತ್ತೆ ಅವ್ಯವಸ್ಥೆ ಉಂಟಾಗಿದೆ. ನಗರದ ಹಲವು ಕಡೆಗಳಲ್ಲಿ ಕಸ ಸಂಗ್ರಹ ಮಾಡದೆ, ಕಸದ ವಾಹನ ತೆರಳದೆ ಹಲವು ದಿನಗಳು ಕಳೆದಿದೆ. ಸುಳ್ಯದ ಕುರುಂಜಿಭಾಗ್‍ಗೆ ಕಸದ ವಾಹನ ಬಾರದೇ ನಾಲ್ಕು ದಿನಗಳಾಯಿತು. ಹಳೆಗೇಟು ಜಯನಗರಕ್ಕೆ ಕಸ ಸಂಗ್ರಹ ವಾಹನ ಬಾರದೇ ವಾರವೇ ಕಳೆಯಿತು ಎಂದು ಸಾರ್ವಜನಿಕರು ಹೇಳಿದ್ದಾರೆ.

ಹೀಗೆ ಹಲವು ವಾರ್ಡ್‍ಗಳಲ್ಲಿ ಇದೇ ಪರಿಸ್ಥಿತಿ ಇದೆ. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ತುಂಬಿ ತುಳುಕುತ್ತಿದೆ. ಸಾರ್ವಜನಿಕರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಗರ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸ್ವಚ್ಛ ನಗರ, ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಯೋಜನೆಯನ್ನು ನಗರ ಪಂಚಾಯಿತಿ ರೂಪಿಸಿದ್ದರೂ ಇದೀಗ ಕಸ ಸಂಗ್ರಹ ಮತ್ತು ವಿಲೇವಾರಿ ನಡೆಯದೆ ಸಮಸ್ಯೆ ಸೃಷ್ಠಿಸಿದೆ. ನಗರ ಪಂಚಾಯಿತಿ ಎದುರಿನ ಕಟ್ಟಡದಲ್ಲಿ ಸಂಗ್ರಹಿಸಿಟ್ಟಿರುವ ಕಸ ತೆರವುಗೊಳೀಸಲಾಗದೇ ಹಲವು ತಿಂಗಳಿನಿಂದ ಅಲ್ಲಿಯೇ ಕೊಳೆಯುತಿದೆ. ಒಂದು ವರುಷದಿಂದ ನಗರದ ಹಸಿ ಕಸವನ್ನು ಕೃಷಿಕರೋರ್ವರ ತೋಟಕ್ಕೆ ಕೊಂಡು ಹೋಗಿ ಗೊಬ್ಬರ ಮಾಡಲಾಗುತ್ತಿತ್ತು. ಆದರೆ ಅದು ಈಗ ಸ್ಥಗಿತಗೊಂಡಿದೆ. ಇದೀಗ ಕಲ್ಚರ್ಪೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೆಲವು ದಿನ ಸಾಗಿಸಲಾಗಿತ್ತು. ಇದನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿತ್ತು.

ಒಟ್ಟಿನಲ್ಲಿ ನಗರಲ್ಲಿ ಕಸ ಸಮಸ್ಯೆ ಬಿಗಡಾಯಿಸಿದ್ದು ಕಸ ಸಂಗ್ರಹಿಸದೆ ಸಮಸ್ಯೆ ಇನ್ನಷ್ಟು ಜಟಿಲವಾಗುವ ಸಾಧ್ಯತೆ ಇದೆ. ಕಸ ವಿಲೇವಾರಿಗೆ ಸೂಕ್ತ ಜಾಗವನ್ನೂ ಕಂಡು ಹುಡುಕಲು ಕೂಡ ನಗರಾಡಳಿತಕ್ಕೆ ಸಾಧ್ಯವಾಗಿಲ್ಲ.

See also  ಉಡುಪಿಯಲ್ಲಿ ಜನಪ್ರತಿನಿಧಿಗಳ ನಿದ್ದೆಗೆಡಿಸಿದ ಮರಳು ಸಮಸ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

180

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು