ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಮಂಗಳೂರಿನ ಸ್ಪಿಯರ್‍ಹೆಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್, ಮಂಗಳೂರಿನ ಗ್ಲೋಬಲ್ ಟಿವಿ, ಸಿನೆಟ್, ಎಜುಲಿಂಕ್ ಐಟಿಇಇ ಇವರ ಸಂಯುಕ್ತ ಆಶ್ರಯದಲ್ಲಿ ಇಂದು `ವಿಲೇಜ್ ಟಿವಿ’ ಲೋಕಾರ್ಪಣೆಗೊಳ್ಳಲಿದೆ. ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಿ ಅಂಗನವಾಡಿ ಕೇಂದ್ರದಲ್ಲಿ ಸಂಜೆ 4:30 ಕ್ಕೆ ಸಮುದಾಯ ಬಾನುಲಿ ಆಧಾರಿತ ಮಾದರಿಯಲ್ಲಿ `ವಿಲೇಜ್ ಟಿವಿ’ ಬಿಡುಗಡೆಗೊಳ್ಳಲಿದೆ.
ನಿವೃತ್ತ ಐ.ಎ.ಎಸ್. ಅಧಿಕಾರಿ ಮತ್ತು ಭಾರತ ಸರ್ಕಾರದ ಹೆರಿಟೇಜ್ ಪ್ರೊಜೆಕ್ಟ್‍ನ ಪ್ರಧಾನ ಸಲಹೆಗಾರ ಡಾ. ಸಿ.ವಿ. ಆನಂದ್ ಬೋಸ್ ವಿಲೇಜ್ ಟಿವಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಭಾರತೀಯ ರೈಲ್ವೆ ಹಣಕಾಸು ನಿಗಮದ ಮಾಜಿ ಎಂ.ಡಿ. ಸಂತೋಷ್ ಕುಮಾರ್ ಪಟನಾಯಕ್ ಗೌರವ ಅತಿಥಿಗಳಾಗಿ, ಮಂಗಳೂರು ವಿಶ್ವವಿದ್ಯಾನಿಯದ ಕುಲಪತಿ ಪ್ರೊ. ಪಿ. ಸುಬ್ರಮಣ್ಯ ಯಡಪಡಿತ್ತಾಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಆರ್. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.