ಮೂಡುಬಿದಿರೆ: ಪಡುಕೊಣಾಜೆಯ ಅಣ್ಣಿ ಪೂಜಾರಿ ಎಂಬವರ ಮಗ ನಿತೇಶ್ ಪೂಜಾರಿ ಅವರು, ಕೋಳಿ ಅಂಗಡಿಯೊಂದರಲ್ಲಿ ನಾಲ್ಕು ಕಾಲಿನ ಬಾಯ್ಲರ್ ಕೋಳಿಯನ್ನು ನೋಡಿದ್ದು, ಅದನ್ನು ಖರೀದಿಸಿ ಮನೆಯಲ್ಲಿ ಸಾಕುತ್ತಿದ್ದಾರೆ.
ಕೆಲವು ಸಮಯದ ಹಿಂದೆ ಇವರು ಕೋಳಿ ಮಾಂಸ ಖರೀದಿಗೆ ಹೋದ ವೇಳೆ ಅಂಗಡಿಯಲ್ಲಿ ನಾಲ್ಕು ಕಾಲಿನ ಕೋಳಿ ಇವರ ಕಣ್ಣಿಗೆ ಬಿದ್ದಿದೆ. ಅದನ್ನು ಖರೀದಿಸಿ ಮನೆಗೆ ತಂದು ಈಗ ಸಾಕುತ್ತಿದ್ದಾರೆ.