News Kannada
Sunday, September 25 2022

ಕರಾವಳಿ

ಮನಬಂದಂತೆ ವಿದ್ಯುತ್ ಬಿಲ್: ತಾ.ಪಂ. ಸಭೆಯಲ್ಲಿ ಆಕ್ರೋಶ - 1 min read

Photo Credit :

ಮನಬಂದಂತೆ ವಿದ್ಯುತ್ ಬಿಲ್: ತಾ.ಪಂ. ಸಭೆಯಲ್ಲಿ ಆಕ್ರೋಶ

ಬೆಳ್ತಂಗಡಿ: ತಾಲೂಕಿನ ಹಲವೆಡೆ ವಿದ್ಯುತ್ ಗ್ರಾಹಕರಿಗೆ ಮೆಸ್ಕಾಂ ಮೀಟರ್ ಸಿಬಂದಿ ಮನಬಂದಂತೆ ಬಿಲ್ ನೀಡಿದ ವಿದ್ಯಮಾನ ಗುರುವಾರ ನಡೆದ ತಾ.ಪಂ. ಸಭೆಯಲ್ಲಿ ತೀವ್ರವಾಗಿ ಮಾರ್ದನಿಸಿತು.

ತಾ.ಪಂ. ಸಭಾಂಗಣದಲ್ಲಿ ಗುರುವಾರ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆಯಲ್ಲಿ ಜರಗಿದ ತಾ.ಪಂ. ಸಾಮಾನ್ಯ  ಸಭೆಯಲ್ಲಿ ಕೆಲ ಕಾಲ ಚರ್ಚೆಗೆ ಕಾರಣವಾಯಿತು.

ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಬೆಳ್ತಂಗಡಿ ತಾಲೂಕಿನ ನಾಳ, ನ್ಯಾಯತರ್ಪು, ಓಡಿಲ್ನಾಳ ಸೇರಿದಂತೆ ಹಲವೆಡೆ ಏಕಾಏಕಿ ಸಾವಿರಾರು ವಿದ್ಯುತ್ ಬಿಲ್ ನೀಡಿರುವ ಕುರಿತು ಮೆಸ್ಕಾಂ ಅಧಿಕಾರಿಗಳು ಸ್ಪಷ್ಟನೆ ನೀಡಿ ಗ್ರಾಹಕರಿಗೆ ಸೂಕ್ತ ಸ್ಪಂದನೆ ನೀಡಬೇಕು ಎಂದು ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ಮೆಸ್ಕಾಂ ಮೀಟರ್ ರೀಡಿಂಗ್ ಸಿಬಂದಿ ನಿರ್ಲಕ್ಷ್ಯದಿಂದ ಗ್ರಾಹಕರಿಗೆ ಒಂದೇ ಸಮನೆ 10ರಿಂದ 30 ಸಾವಿರ ಬಿಲ್ ನೀಡಿದ್ದೀರಿ. ಈ ಕುರಿತು ನಮಗೆ ಸ್ಪಷ್ಟನೆ ಬೇಕು. ಇಷ್ಟು ದಿನ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ತಾ.ಪಂ. ಸದಸ್ಯ ಗೋಪಿನಾಥ್ ನಾಯಕ್ ಮಾತಿಗಿಳಿದರು.

ಪ್ರತಿಕ್ರಿಯಿಸಿದ ಮೆಸ್ಕಾಂ ಎಇಇ ಶಿವಶಂಕರ್, ಮೀಟರ್ ರೀಡಿಂಗ್ ಮಾಡದೆ ನಿಗದಿತ ಬಿಲ್ ನೀಡಿದ್ದರಿಂದ ಗ್ರಾಹಕರಿಗೆ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಬಂದ ಕೂಡಲೇ ಸಿಬಂದಿಯನ್ನು ವಜಾ ಮಾಡಲಾಗಿದೆ. ಆದರೆ ಗ್ರಾಹಕರು ಹೆಚ್ಚು ಬಿಲ್ ಬಂದ ಕುರಿತು ಮಾಹಿತಿ ನೀಡಿದಂತೆ ಕಡಿಮೆ ಬಿಲ್ ಬಂದಾಗ ಪರಿಶೀಲಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ ಎಂದು ಹೇಳಿದರು.

ಇದಕ್ಕೆ ಸದಸ್ಯರಾದ ವಿಜಯ ಗೌಡ ಹಾಗೂ ಶಶಿಧರ್ ಕಲ್ಮಂಜ ಆಕ್ಷೇಪ ವ್ಯಕ್ತಪಡಿಸಿದರು. ಒಂದು ವರ್ಷದಿಂದ ಬಿಲ್ ಸಮಸ್ಯೆಯಾಗಿರುವುದು ನಿಮ್ಮ ಗಮನಕ್ಕೆ ಬಾರದಿರುವುದರ ಕುರಿತು ಮೇಲಾಧಿಕಾರಿಗಳು ಪರೀಶಿಲಿಸದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ತಾ.ಪಂ. ಇ.ಒ. ಜಯರಾಂ ಮಧ್ಯ ಪ್ರವೇಶಿಸಿ, ಗ್ರಾಹಕರಿಗೆ ಮನವರಿಕೆ ಮಾಡಿ ಬಿಲ್ ಪಾವತಿಗೆ ಹೊರೆಯಾಗದಂತೆ ಸಮಸ್ಯೆ ಈ ಕೂಡಲೆ ಬಗೆಹರಿಸುವಂತೆ ಅಧಿಕಾರಿಗೆ ಸೂಚಿಸಿದರು.

ಅಬಕಾರಿ ಹಗಲು ದರೋಡೆ

ಸರಕಾರಕ್ಕೆ ಆದಾಯ ತರುವ ಎಂಎಸ್‍ಐಎಲ್‍ಗೆ ತಾಲೂಕಲ್ಲಿ ಪರವಾನಗಿ ನೀಡುತ್ತಿಲ್ಲ. ಆದರೆ ಎಗ್ಗಿಲ್ಲದೆ ಆಕ್ರಮವಾಗಿ ಮದ್ಯ ಮಾರಾಟ ನಡೆದರೂ ಅಬಕಾರಿ ಇಲಾಖೆ ಕಂಡರೂ ಕಾಣದಂತಿದೆ ಎಂದು ಸದಸ್ಯ ಜೋಯೆಲ್ ಮೆಂಡೋನ್ಸಾ ಸಭೆಯ ಗಮನ ಸೆಳೆದರು.

ಅಬಕಾರಿ ಇಲಾಖೆ ನಿರೀಕ್ಷಕಿ ಸೌಮ್ಯಲತಾ ಪ್ರತಿಕ್ರಿಯಿಸಿ, ಜಿಲ್ಲೆಯಿಂದ ಪರವಾನಿಗೆ ನೀಡಿರುವ ಕುರಿತು ನಮಗೆ ಸ್ಪಷ್ಟ ಮಾಹಿತಿ ಇಲ್ಲ. ತಾಲೂಕಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

ಅಬಕಾರಿ ಅಧಿಕಾರಿ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಕ್ರಮ ನಡೆಸುತ್ತಿರುವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದರೆ ಅಧಿಕಾರಿಗಳೆ ಹಣ ಪಡೆದು ದೂರವಾಣಿ ಮೂಲಕ ತಿಳಿಸಿ ಮತ್ತೆ ರೈಡ್ ಮಾಡುವ ನಾಟಕವಾಡುತ್ತಾರೆ ಎಂದು ಸದಸ್ಯ ಕೃಷ್ಣಪ್ಪ ನಾಯ್ಕ ದೂರಿದರು.

ವೈನ್ ಶಾಪ್‍ಗಳಲ್ಲಿ ದರ ಪಟ್ಟಿ

ತಾಲೂಕಿನ ವೈನ್ ಶಾಪ್‍ಗಳಲ್ಲಿ ಕಡ್ಡಾಯ ದರ ಪಟ್ಟಿ ನಿಗದಿ ಪಡಿಸಬೇಕೆಂಬ ಕಾನೂನು ಪಾಲನೆಯಾಗುತ್ತಿಲ್ಲ. ಈ ವಿರುದ್ಧ ಎಷ್ಟು ದೂರು ದಾಖಲಿಸಿದ್ದೀರಿ ಎಂದು ಸದಸ್ಯ ಲಕ್ಷ್ಮೀನಾರಾಯಣ ಪ್ರಶ್ನಿಸಿದರು. ಸದಸ್ಯ ಶಶಿಧರ್, ವಿಜಯ ಗೌಡ ಧ್ವನಿಗೂಡಿಸಿದರು.

See also  ಬೆಳ್ತಂಗಡಿ ತಾಲೂಕಿನಲ್ಲಿ ಎರಡು ಮಂಗಗಳ ಶವಪತ್ತೆ: ಭಯಭೀತರಾದ ಜನರು

ಇದಕ್ಕೆ ಪ್ರತಿಕ್ರಿಯಿಸಿದ ಇ.ಒ.ಜಯರಾಂ, ಅಬಕಾರಿ ಇಲಾಖೆಯಿಂದ ಸಾಮಾಜಿಕ ಜಾಲತಾಣ ರಚಿಸಿ, ದೂರು ಸಾರ್ವಜನಿಕರಿಂದ ದೂರು ಸ್ವೀಕರಿಸುವಂತಾಗಬೇಕು ಎಂದು ಖಡಕ್ ಸೂಚನೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು