News Kannada
Saturday, October 01 2022

ಕರಾವಳಿ

ಮನೋಹರ್ ತೋನ್ಸೆಗೆ ಅಬುಧಾಬಿ ಕರ್ನಾಟಕ ಸಂಘದಿಂದ ಡಾ. ದ. ರಾ. ಬೇಂದ್ರೆ ಪ್ರಶಸ್ತಿ - 1 min read

Photo Credit :

ಮನೋಹರ್ ತೋನ್ಸೆಗೆ ಅಬುಧಾಬಿ ಕರ್ನಾಟಕ ಸಂಘದಿಂದ ಡಾ. ದ. ರಾ. ಬೇಂದ್ರೆ ಪ್ರಶಸ್ತಿ

ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಅಬುಧಾಬಿ ಇಂಡಿಯಾ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ನಡೆಯಲಿದೆ.

ಪ್ರತಿವರ್ಷ ನೀಡಲಾಗುತ್ತಿರುವ ಪ್ರತಿಷ್ಠಿತ “ಡಾ. ದ. ರಾ. ಬೇಂದ್ರೆ ಪ್ರಶಸ್ತಿ” ಯನ್ನು ಈ ಬಾರಿ ಸಾಹಿತ್ಯ, ಪತ್ರಿಕೋಧ್ಯಮದಲ್ಲಿ ಸಾಧನೆ ಮಾಡಿರುವ ಮನೋಹರ್ ತೋನ್ಸೆಯವರಿಗೆ ಪ್ರದಾನ ಮಾಡಲಾಯಿತು.

ಮನೋಹರ್ ತೋನ್ಸೆಯವರ ಹೆಜ್ಜೆ ಗುರುತು: ಭವ್ಯ ಭಾರತದ ಸುಂದರ ಕರ್ನಾಟಕದ ಕಡಲತೀರದ ತೋನ್ಸೆಯಲ್ಲಿ ಜನಿಸಿ ಬಡನಿಡಿಯೂರು ಗಾಂಧಿ ಸ್ಕೂಲ್‍ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಉನ್ನತ ಪದವಿ ಎಂ.ಎ. ಕನ್ನಡ ಲಿಟರೇಚರ್, ಎಂ ಕಾಂ. ಸಿ.ಐ.ಎ. ಅಮೇರಿಕಾ, ಸಿ.ಎಸ್.ಎಸ್.ಎ. ಅಮೇರಿಕಾ ದಲ್ಲ್ಲಿ ಪಡೆದಿರುವ ಮನೋಹರ್ ತೋನ್ಸೆಯವರು ಪ್ರಸ್ತುತ ಎಡಿಸಿಬಿ ಬ್ಯಾಂಕ್ ಅಬುಧಾಬಿಯಲ್ಲಿ ಸಹಾಯಕ ಉಪಾಧ್ಯಕ್ಷ ಮತ್ತು ಸಿನಿಯರ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

1987-1988 ರ ಅವಧಿಯಲ್ಲಿ ಮುಂಬೈಯ ಕನ್ನಡ ಮಾಸಿಕ “ಪತ್ರಪುಷ್ಪ”, “ಮೊಗವೀರ” ಮಾಸಿಕದಲ್ಲಿ ಮತ್ತು ಮಂಗಳೂರಿನಲ್ಲಿ ಪ್ರಸಾರವಾಗುತಿದ್ದ ಮುಂಗಾರು ಪತ್ರಿಕೆಯಲ್ಲಿ ಹಲವಾರು ಲೇಖನಗಳು ಪ್ರಕಟವಾಗಿದೆ.

ಅಬುಧಾಬಿಯಲ್ಲಿ ಸೇವೆಯಲ್ಲಿರುವಾಗಲೇ ಮಣಿಪಾಲದಲ್ಲಿ ಪ್ರಕಟವಾಗುತ್ತಿದ್ದ ಉದಯವಾಣಿ, ರೂಪತಾರ, ಮುಂಬೈನಲ್ಲಿ ಪ್ರಕಟವಾಗುತ್ತಿದ್ದ “ಕರ್ನಾಟಕ ಮಲ್ಲ”, “ಅಕ್ಷಯ” ಮಾಸಿಕದಲ್ಲಿ ಲೇಖನಗಳು, ಸಂದರ್ಶನ ವರದಿ ನಿರಂತರವಾಗಿ ಪ್ರಕಟವಾಗಿದೆ.

ಅಬುಧಾಬಿ ಇಂಡಿಯಾ ಸೋಶಿಯಲ್ ಸೆಂಟರ್ ನಲ್ಲಿ 1996 ರಲ್ಲಿ ಅಂಗ್ಲ ಭಾಷೆಯ ವಾರ್ತಾಸಂಚಿಕೆಯ ಸಂಪಾದಕರಾಗಿ, ಸಾಹಿತ್ಯ ಮತ್ತು ಕಲಾ ವಿಭಾಗದಲ್ಲಿ 3 ವರ್ಷಗಳ ಕಾಲ ಸಮಿತಿಯ ಸದಸ್ಯರಾಗಿ, 2003 ರಲ್ಲಿ ಗೌರವ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದಾರೆ.

ದುಬಾಯಿ ಕರ್ನಾಟಕ ಸಂಘದ “ಚಂದನ” ವಾರ್ತಾ ಪತ್ರ ದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಕಾಶ್ ರಾವ್ ಪಯ್ಯಾರ್ ರವರು ಲೋಕಾರ್ಪಣೆ ಗೊಳಿಸಿರುವ “ತಾರೆ ಎಣಿಸಿ ಮೊತ್ತ ಹೇಳಿ”, “ಕನ್ನಡ ನಾಡು ನುಡಿ ರಕ್ಷಣೆ ಯಾಕೆ ಮತ್ತು ಹೇಗೆ” ಮತ್ತು ಶ್ರೀಮತಿ ರಂಜನಿ ಸುರೇಶ್ ರವರ “ಕಂಠಿ ಸರ ಮತ್ತು ಇತರ ಕಥೆಗಳು” ಈ ಕೃತಿಗಳ ವಿಮರ್ಶೆಯನ್ನು ಮಂಡಿಸಿದ್ದಾರೆ.

ಬೆಂಗಳೂರು ಜ್ಞಾನ ಮಂದಾರ ಅಕಾಡೆಮಿಯಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಬುಧಾಬಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಹಲವು ವರ್ಷಗಳಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ ಸಮಸ್ಥ ಕನ್ನಡಿಗರ ಮನಗೆದ್ದಿದ್ದಾರೆ.

1994 ರಲ್ಲಿ ಪ್ರಾರಂಭವಾದ ಬಿಲ್ಲವರ ಬಳಗ ಅಬುಧಾಬಿ ಸ್ಥಾಪಕರಾಗಿ ಹಾಗೂ ಮುಖ್ಯ ಸಂಘಟಕರಾಗಿ ಸೇವೆ ಸಲ್ಲಿಸುತಿದ್ದಾರೆ. ಬಿಲ್ಲವರ ಬಳಗ ಅಬುಧಾಬಿ ಈ ವರ್ಷ ರಜತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದೆ.

ಪ್ರಶಸ್ತಿ ಸನ್ಮಾನ ಗೌರವಗಳು
ಮನೋಹರ್ ತೋನ್ಸೆಯವರ ಕನ್ನಡ ಭಾಷೆ, ಸಾಹಿತ್ಯ, ಪತ್ರಿಕೋಧ್ಯಮ, ಸಮಾಜ ಸೇವೆಯಲ್ಲಿ ಮಾಡಿರುವ ಸಾಧನೆಗೆ ಸಂದಿರುವ ಪ್ರಶಸ್ತಿ ಸನ್ಮಾನ ಗೌರವಗಳು.

ಬೆಂಗಳೂರು ಕಾಶಿ ವಿಶ್ವೇಶ್ವರ ಟ್ರಸ್ಟ್ ಆಶ್ರಯದಲ್ಲಿ ಜ್ಞಾನ ಮಂದಾರ ಹಾಗೂ ಸಾಂಸ್ಕೃತಿಕ ಸಂಸ್ಥೆಯಿಂದ “ಸುವರ್ಣ ಕನ್ನಡಿಗ -2006” ಪ್ರಶಸ್ತಿ.

See also  ಕಾರು ಬೈಕ್ ಅಪಘಾತ: ಗಾಯಾಳು ಮೃತ್ಯು

ಮುಂಬೈ ನ ಇಂಡಿಯಾ ಇಂಟನ್ರ್ಯಾಶನಲ್ ಫ್ರೆಂಡ್ಶಿಫ್ ಸೋಸೈಟಿ “ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ-2006”

ಬೆಂಗಳೂರು – ಸ್ಪೂರ್ತಿ ಚಾರಿಟೇಬಲ್ ಟ್ರಸ್ಟ್ – “ಸುವರ್ಣ ರತ್ನ -2007” ಪ್ರಶಸ್ತಿ

ಕರ್ನಾಟಕ ಸಂಘ ಮುಂಬೈ ಮತ್ತು ಜ್ಞಾನ ಮಂದಾರ ಅಕಾಡೆಮಿ ಆಶ್ರಯದಲ್ಲಿ ನಡೆದ ವಚನ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದಲ್ಲಿ “ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ -2008”

ಹೃದಯವಾಹಿನಿ – ಗಲ್ಫ್ ಬ್ಯಾಂಕರ್ ಪ್ರಶಸ್ತಿ – 2011

ಅಬುಧಾಬಿ ಕರ್ನಾಟಕ ಸಂಘ ಮತ್ತು ಹೃದಯವಾಹಿನಿ ಸಂಯುಕ್ತ ಆಶ್ರಯದಲ್ಲಿ 2019 ರಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ – ” ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ – 2019″

ಧರ್ಮ ಪತ್ನಿ ಶ್ರೀಮತಿ ಪೂರ್ಣಿಮಾ ಪುತ್ರಿಯರು ಕು. ಮೈತ್ರಿ ಮತ್ತು ಕು. ಮುಕ್ತಿಕಾ ರೊಂದಿಗೆ ಸುಖೀ ಸಂಸಾರಿಯಾಗಿರುವ ಶ್ರೀಯುತ ಮನೋಹರ್ ತೋನ್ಸೆಯವರ ಕನ್ನಡ ಭಾಷೆ ಮತ್ತು ಸಾಹಿತ್ಯ ಪತ್ರಿಕೋಧ್ಯಮ ರಂಗದಲ್ಲಿ ಸಾಧನೆ ಮಾಡಿರುವುದನ್ನು ಗುರುತಿಸಿ ಅಬುಧಾಬಿ ಕರ್ನಾಟಕ ಸಂಘ ಕೊಡ ಮಾಡುವ ದ. ರಾ. ಬೇಂದ್ರೆ ಪ್ರಶಸ್ತಿಯನ್ನು ಪಡೆಯುತ್ತಿರುವ ಈ ಸಂದರ್ಭದಲ್ಲಿ ಸಮಸ್ಥ ಅನಿವಾಸಿ ಕನ್ನಡಿಗರ ಪರವಾಗಿ ಹಾರ್ದಿಕ ಅಭಿನಂದನೆಗಳು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು