ಮಂಗಳೂರು: ಐಡಾ ವಿಟಾ ಎನ್ನುವ ಪ್ರವಾಸಿ ನೌಕೆ ಹಡಗು ಸೋಮವಾರ ಬೆಳಗ್ಗೆ ನವ ಮಂಗಳೂರು ಬಂದರು(ಎನ್ ಎಂಪಿಟಿ)ಗೆ ಬಂದಿಳಿದಿದೆ.
ಹಡಗಿನಲ್ಲಿದ್ದ ಪ್ರವಾಸಿಗಳನ್ನು ಹಾಗೂ ಸಿಬ್ಬಂದಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸುಮಾರು 1154 ಮಂದಿ ಪ್ರವಾಸಿ ನಾವಿಕರು ಹಾಗೂ 407 ಮಂದಿ ಸಿಬ್ಬಂದಿ ಇದರಲ್ಲಿದ್ದರು. ಪ್ರವಾಸಿಗಳನ್ನು ತುಳುನಾಡಿನ ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ, ಗೊಂಬೆ, ಹುಲಿವೇಷ ಇತ್ಯಾದಿ ವೇಷಗಳಿಂದ ಸ್ವಾಗತ ನೀಡಲಾಯಿತು.
ಈ ಪ್ರವಾಸಿ ನೌಕೆಯು ಭಾನುವಾರ ಗೋವಾದಿಂದ ಹೊರಟು ಇಂದು ಮಂಗಳೂರಿಗೆ ಆಗಮಿಸಿದೆ. ರಾತ್ರಿ ಕೊಚ್ಚಿಗೆ ಪ್ರಯಾಣಿಸಲಿದೆ. ಇದರ ಬಳಿಕ ಮಾಲ್ಡೀವ್ಸ್, ಕೊಲೊಂಬೊ, ಮಲೇಷಿಯಾ, ಸಿಂಗಾಪುರ ಸಹಿತ 21 ದಿನಗಳ ದಕ್ಷಿಣ ಏಶ್ಯಾ ಸುತ್ತಾಡಲಿದೆ.
ಇದೇ ವೇಳೆ ನವಮಂಗಳೂರು ಬಂದಿನಲ್ಲಿ ಮೊದಲ ಬಾರಿಗೆ ಹೆಲಿ ಟೂರಿಸಂಗೆ ಚಾಲನೆ ನೀಡಲಾಯಿತು.