News Kannada
Thursday, March 23 2023

ಕರಾವಳಿ

ಮಿಶಲ್ ಕ್ವೀನಿ ಡಿ’ಕೋಸ್ತಗೆ ಸಚಿವೆ ನಿರ್ಮಲಾ ಸೀತಾರಾಮನ್ ಸುವರ್ಣ ಪದಕ ಹಸ್ತಾಂತರ

Photo Credit :

ಮಿಶಲ್ ಕ್ವೀನಿ ಡಿ'ಕೋಸ್ತಗೆ ಸಚಿವೆ ನಿರ್ಮಲಾ ಸೀತಾರಾಮನ್ ಸುವರ್ಣ ಪದಕ ಹಸ್ತಾಂತರ

ಮೂಡುಬಿದಿರೆ: ಮುಂಬೈಯಲ್ಲಿ ಕಸ್ಟಮ್ಸ್ ಮತ್ತು ಜಿಎಸ್‍ಟಿ  ವಿಭಾಗದಲ್ಲಿ  ಸಹಾಯಕ ಆಯುಕ್ತೆಯಾಗಿದ್ದು  ಸದ್ಯ ಪ್ರೊಬೇಶನರಿ ಅವಧಿಯಲ್ಲಿ  ತರಬೇತಿ ಪಡೆಯುತ್ತಿರುವ ನೀರುಡೆ ಮೂಲದ ಮಿಶಲ್ ಕ್ವೀನಿ ಡಿ’ಕೋಸ್ತ ಅವರು ತಮ್ಮ ತರಬೇತಿ ಅವಧಿಯಲ್ಲಿ ತೋರಿದ ಕ್ಷಮತೆಗಾಗಿ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ `ಫೈನಾನ್ಸ್ ಮಿನಿಸ್ಟರ್ಸ್ ಗೋಲ್ಡ್ ಮೆಡಲ್ ಫಾರ್ ಆಲ್‍ರೌಂಡ್ ಎಕ್ಸಲೆನ್ಸ್’ ಪುರಸ್ಕಾರಕ್ಕೆ  ಪಾತ್ರರಾಗಿದ್ದಾರೆ.

ಫರೀದಾಬಾದ್‍ನಲ್ಲಿರುವ ನೇಶನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಇನ್‍ಡೈರೆಕ್ಟ್ ಟ್ಯಾಕ್ಸಸ್ ಆ್ಯಂಡ್ ನರ್ಕೋಟಿಕ್ಸ್  ನಲ್ಲಿ  ನಡೆದ ಪಾಸಿಂಗ್ ಔಟ್ ಪೆರೇಡ್‍ನಲ್ಲಿ  ನಿರ್ಮಲಾ ಅವರಿಂದ ನ.8ರಂದು ಮಿಶಾಲ್ ಕ್ವೀನಿ ಡಿಕೋಸ್ತ ಅವರು ಈ ಸುವರ್ಣ ಪದಕ ಸ್ವೀಕರಿಸಿದರು.

ಈ ತರಬೇತಿಯಲ್ಲಿ  ಇಂಡಿಯನ್ ರೆವೆನ್ಯೂ ಸರ್ವಿಸ್‍ನ  69ನೇ ತಂಡದ 102 ಮಂದಿ ಭಾಗವಹಿಸಿದ್ದರು. ಮಿಶಲ್  ಅವರು ನೀರುಡೆಯ ಕೃಷಿಕ, ಸಮಾಜ ಸೇವಕ ಲಾಝರಸ್ ಡಿ’ಕೋಸ್ತ -ನ್ಯಾನ್ಸಿ ಫೆಲ್ಸಿ ಡಿ’ಕೋಸ್ತ ದಂಪತಿಯ ಪುತ್ರಿ .

See also  ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ವಿಧಿವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

193
Deevith S K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು