ನಿಟ್ಟೆ: ನಿಟ್ಟೆ ವಿದ್ಯಾಸಂಸ್ಥೆ, ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು, ಜಸ್ಟೀಸ್ ಕೆ.ಎಸ್ ಹೆಗ್ಡೆ ದಂತ ಚಿಕಿತ್ಸಾಲಯ ಹಾಗೂ ರೋಟರಿ ಕ್ಲಬ್ ನಿಟ್ಟೆ ಇವರ ಸಹಭಾಗಿತ್ವದಲ್ಲಿ ನವಂಬರ್.7 ರಂದು ಬಜೆಗೋಳಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ಆರೋಗ್ಯ ಮಾಹಿತಿ ತಪಾಸಣೆ ಹಾಗೂ ಚಿಕಿತ್ಸೆಗಳ ಮಾಸಾಚರಣೆ ಕಾರ್ಯಕ್ರಮವು ಜರುಗಿತು.
ಎ.ಬಿ ಶೆಟ್ಟಿ ಸ್ಮಾರಕ ದಂತವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಯು.ಎಸ್.ಕೃಷ್ಣ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿಟ್ಟೆ ರೋಟರಿ ಕ್ಲಬ್‍ನ ಅಧ್ಯಕ್ಷೆ ರೋ.ಪ್ರೊ.ವೀಣಾದೇವಿ ಶಾಸ್ತ್ರೀಮಠ್ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ವಿದ್ಯಾಸಂಸ್ಥೆಯ ರಿಜಿಸ್ಟ್ರಾರ್ ಪ್ರೊ.ಯೋಗೀಶ್ ಹಗ್ಡೆ ಪ್ರಾಸ್ತಾವಿಸಿದರು.
ಬಜೆಗೋಳಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ, ರೋ.ಶೇಖರ್ ಪೂಜಾರಿ, ಡಾ.ಚೇತನಾ ಶಶಿಕಾಂತ್, ಡಾ.ಸಹನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ತಪಾಸಣಾ ಕಾರ್ಯಕ್ರಮವನ್ನು ನವೆಂಬರ್ ತಿಂಗಳಿನಲ್ಲಿ 7 ವಿವಿಧ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.