ಮಂಗಳೂರು: ಇಂದು ನಡೆದ ಮಂಗಳೂರು ಮಹಾನಗರ ಪಾಲಿಗೆ ಚುನಾವಣೆ ಶಾಂತಿಯುವಾಗಿ ನಡೆದು ಸಂಜೆ ೫ರ ವೇಳೆಗೆ ೬೦ವಾರ್ಡುಗಳಲ್ಲಿ ಶೇ ೫೯.೬೭ರಷ್ಟು ಮತದಾನವಾಗಿದೆ. ಬೆಳಿಗ್ಗೆ ೭ಗಂಟೆಗೆ ಆರಂಭವಾದ ಮತದಾನ ಸಂಜೆ ರ ವೇಳೆಗೆ ಮುಗಿದಿದೆ.
ಮತದಾನದ ಹಿನ್ನೆಲೆ ಎಲ್ಲ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ನವೆಂಬರ್ ೧೪ರಂಧು ರೋಸಾರಿಯೋ ಪ್ರೌಢಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ.
ಅಂದು ೧೮೦ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಳಿದ್ದು, ೬೦ ವಾರ್ಡುಗಳ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪ್ರತಿಷ್ಠೆಯ ಕಣವಾಗಿದೆ.