ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 44 ಸ್ಥಾನ ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕರಾದ ಗದ್ದುಗೆಗೇರಿದೆ.
ನ.12ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಇಂದು ಬೆಳಗ್ಗೆ ನಗರದ ರೊಸಾರಿಯೋ ಕಾಲೇಜಿನಲ್ಲಿ ನಡೆಯಿತು. ಆರಂಭದಲ್ಲೇ ಮುನ್ನಡೆಯನ್ನು ಸಾಧಿಸಿಕೊಂಡು ಹೋದ ಬಿಜೆಪಿ ಅಂತಿಮವಾಗಿ 60 ವಾರ್ಡ್ ಗಳಲ್ಲಿ 44ರಲ್ಲಿ ಗೆಲುವು ದಾಖಲಿಸಿಕೊಂಡಿದೆ. 14ರಲ್ಲಿ ಕಾಂಗ್ರೆಸ್ ಮತ್ತು ಎರಡು ಸ್ಥಾನಗಳನ್ನು ಎಸ್ ಡಿಪಿಐ ಗೆದ್ದಿದೆ.