ಬಂಟ್ವಾಳ: ಪಂಜಿಕಲ್ಲು ಗ್ರಾಮ ಪಂಚಾಯತ್ ನ ತೆರವಾದ ಸ್ಥಾನಕ್ಕೆ ನ.12ರಂದು ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪೂಜಾರಿ 44 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಬಿಜೆಪಿ ಬೆಂಬಲಿತರ ವಶದಲ್ಲಿದ್ದ ಸ್ಥಾನ ಇದೀಗ ಕಾಂಗ್ರೇಸ್ ಪಾಲಾಗಿದೆ.
ಚುನಾವಣೆಯಲ್ಲಿ ಒಟ್ಟು 776 ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಕಾಂಗ್ರೆಸ್ ಬೆಂಬಲಿತ ಸುರೇಶ್ ಜೆ ಪೂಜಾರಿ 405, ಬಿಜೆಪಿ ಬೆಂಬಲಿತ ಡಿ. ಪ್ರವೀಣ್ ಸಫಲ್ಯ 361 ಮತ ಗಳಿಸಿದ್ದು, 10 ಮತಗಳು ತಿರಸ್ಕ್ರತ ಗೊಂಡಿದೆ.
ಮಂಗಳವಾರ ದಡ್ಡಲಕಾಡು ಶಾಲೆಯಲ್ಲಿ ಮತದಾನ ನಡೆದಿತ್ತು.
ಗುರುವಾರ ಬೆಳಿಗ್ಗೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಮತ ಎಣಿಕೆ ಕಾರ್ಯ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವದಲ್ಲಿ ನಡೆದಿದ್ದು,ಆಹಾರ ಶಿರಸ್ತೇದಾರ್ ಶ್ರೀನಿವಾಸ್ ಚುನಾವಣಾ ಪ್ರಭಾರ ಉಪತಹಶೀಲ್ದಾರ್ ಸೀತಾರಾಮ, ಪ್ರಥಮ ದರ್ಜೆ ಸಹಾಯಕ ರಾಜ್ ಕುಮಾರ್ ವಿದ್ಯಾ ಜೆ ಮೋರೆ, ಶ್ವೇತ ಚುನಾವಣಾ ಪ್ರಕ್ರಿಯೆಯಲ್ಲಿ ಹಾಜರಿದ್ದು ಎಣಿಕೆ ಕಾರ್ಯದಲ್ಲಿ ನೇರವಾದರು.ಕಿರಣ್ .ತೋಮಸ್. ಚಂದು ಸಹಕರಿಸಿದರು.
*ಕಾಂಗ್ರೇಸ್ ನಲ್ಲಿ ಸಂಭ್ರಮ:*
ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲಿ , ಬಿಜೆಪಿ ಬೆಂಬಲಿತರ ಸ್ಥಾನವನ್ನು ಗೆದ್ದಿರುವ ಕಾಂಗ್ರೇಸ್ ಇದೀಗ ಗೆಲುವಿನ ನಗೆ ಬೀರಿದೆ. ಮಾಜಿ ಸಚಿವ ಬಿ.ರಮಾನಾಥ ರೈ ಮಿನಿವಿಧಾನ ಸೌಧಕ್ಕೆ ಆಗಮಿಸಿ.
ವಿಜೇತ ಅಭ್ಯರ್ಥಿ ಸುರೇಶ್ ಪೂಜಾರಿಯವರನ್ನು ಅಭಿನಂದಿಸಿದರು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ತಾ.ಪಂ.ಸದಸ್ಯ ಪದ್ಮಾವತಿ, ಪ್ರಮುಖರಾದ ಸುದರ್ಶನ್ ಜೈನ್, ವೆಂಕಪ್ಪ ಪೂಜಾರಿ, ಬೂತ್ ಅಧ್ಯಕ್ಷ ವಿಕ್ಟರ್ ಪಾಯ್ಸ್, ಸದಾನಂದ ಶೆಟ್ಟಿ, ಜಗದೀಶ್ ಪೂಜಾರಿ, ವಿಶ್ವನಾಥ ಪೂಜಾರಿ, ರಾಜೇಶ್ ಗೌಡ ಪಂಜಿಕಲ್ಲು, ಲವೇಶ್ ದಡ್ಡಲಕಾಡು,ಪ್ರಕಾಶ್ ವಾಸ್, ಉದಯ ಮೇನಾಡ್,ಸಿಲ್ಸನ್, ಹರಿಕ್ ಪಿಂಟೋ, ಗಂಗಾಧರ ಪೂಜಾರಿ, ಮಹಮ್ಮದ್ ನಂದಾವರ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.