ಬೆಳ್ತಂಗಡಿ: ಉಜಿರೆಯಿಂದ ಧರ್ಮಸ್ಥಳಕ್ಕೆ ನ. 22ರಂದು ನಡೆಯುವ ಏಳನೇ ವರ್ಷದ ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆಯ ಸಿದ್ಧತೆಯ ಹಾಗೂ ನ. 17ರ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಅಳದಂಗಡಿ ವಲಯದ ಪೂರ್ವಭಾವಿ ಸಭೆ ಗುರುವಾರ ಅಳದಂಗಡಿ ಶ್ರೀಸೋಮನಾಥೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಪಾದಯಾತ್ರೆಯ ದಿನದಂದು ಮಧ್ಯಾಹ್ನ ದೇವಾಸ್ಥಾನದ ವಠಾರದಲ್ಲಿ ಸೇರಿ ಒಟ್ಟಿಗೆ ಹೋಗುವುದು, ಬಿಳಿ ಸಮವಸ್ತ್ರದಲ್ಲಿ ಬರುವುದು ಎಂದು ತೀರ್ಮಾನಿಸಲಾಯಿತು. ಸ್ವಚ್ಛತೆಯನ್ನು ಕೆದ್ದುವಿನಿಂದ ಪಿಲ್ಯ ಮಾರಿಗುಡಿಯವರೆಗೆ ನಡೆಸುವುದು ಎಂದು ನಿರ್ಧರಿಸಲಾಯಿತು.
ಸಭೆಯಲ್ಲಿ ಪಾದಯಾತ್ರೆ ಸಮಿತಿಯ ವಲಯಾಧ್ಯಕ್ಷ ವಿಶ್ವನಾಥ ಹೊಳ್ಳ ಮಾರ್ಗದರ್ಶನ ನೀಡಿದರು. ಪ್ರಮುಖರಾದ ಗಂಗಾಧರ ಮಿತ್ತಮಾರು, ಸದಾನಂದ ಪೂಜಾರಿ ಉಂಗಿಲಬೈಲು, ಕಿಶೋರ ಹೆಗ್ಡೆ, ನವೀನ್ ಸಾಮಾನಿ, ಧರ್ಣಪ್ಪ ಪೂಜಾರಿ, ಸುಭಾಶ್ಚಂದ್ರ ರೈ, ದೀಪಕ್ ಆಠವಳೆ, ದಿನೇಶ್ ಪಿಲ್ಯ, ನಾರಾಯಣ ಸಾಲಿಯಾನ್, ಒಕ್ಕೂಟದ ಅಧ್ಯಕ್ಷರು, ಸೇವಾಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು. ಎಸ್‍ಕೆಡಿಆರ್‍ಡಿಪಿ ಅಳದಂಗಡಿ ವಲಯ ಮೇಲ್ವಿಚಾರಕಿ ಮಲ್ಲಿಕಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.