ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಹಕಾರಿ ಅಧ್ಯಯನ ಪೀಠ ಸ್ಥಾಪನೆಗೆ ಸರ್ವ ಸಿದ್ಧತೆ ನಡೆದಿದೆ’ ಎಂದು ಮಂ.ವಿ.ವಿ. ಕುಲಪತಿ ಡಾ| ಪಿ. ಎಸ್. ಯಡಪಡಿತ್ತಾಯ ಪ್ರಕಟಿಸಿದರು. ಏಳು ದಿನಗಳ ಪರ್ಯಂತ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆದ ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಬ್ಯಾಂಕ್‍ನ `ಸಹಕಾರ ಸಪ್ತಾಹ-2019′ ಚಿಂತನ ಸರಣಿ, ಸಾಂಸ್ಕøತಿಕ ವೈಭವ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮಗಳ ಸಮಾರೋಪ ಸಮಾರಂಭ, ಸಂಸ್ಥಾಪಕರ ದಿನಾಚರಣೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಎಂಸಿಎಸ್ ಬ್ಯಾಂಕ್‍ನಂಥ ಸಾವಿರ ಕಂಬಗಳ ನೆಲೆಗಟ್ಟಿನಲ್ಲಿ ಗಟ್ಟಿಯಾಗಿರುವ ಸಹಕಾರಿ ರಂಗದಿಂದ ದೇಶದ ಭವಿಷ್ಯ ಭದ್ರವಾಗಿರುವುದು’ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಮಂಗಳೂರು ಕಥೋಲಿಕ್‍ನ ಧರ್ಮಪ್ರಾಂತ್ಯದ ಬಿಷಪ್ ರೈ| ರೆ| ಪೀಟರ್ ಪಾವ್ಲ್ ಸಲ್ದಾನ್ಹಾ ಆಶೀರ್ವಚನವಿತ್ತು ಶುಭ ಹಾರೈಸಿದರು. ಇತಿಹಾಸ ತಜ್ಞ ಡಾ| ಪುಂಡಿಕಾೈ ಗಣಪಯ್ಯಭಟ್ ಸಮಾರೋಪ ಭಾಷಣ ಮಾಡಿದರು. `600 ವರ್ಷಗಳ ಹಿಂದೆಯೇ ಮೂಡುಬಿದಿರೆಯ ವ್ಯಾಪಾರಿಗಳ ಸಂಘದವರು ಸಹಕಾರಿ ತತ್ವಗಳಡಿ ಕಾರ್ಯನಿರ್ವಹಿಸುವ ಜತೆಗೆ ಶಾಸ್ತ್ರ, ಆಹಾರ, ವಿದ್ಯೆ, ಔಷಧ ದಾನ ಮಾಡುತ್ತಿದ್ದರು. ಸಾವಿರ ಕಂಬದ ಬಸದಿಯ ನಿರ್ಮಾಣ ಆಗಿನ ಕಾಲದ ಸಹಕಾರಿ ಗುಣದ ಪ್ರತೀಕ; 103 ವರ್ಷಗಳ ಹಿಂದೆ ಸ್ಥಾಪನೆಯಾದ ಎಂಸಿಎಸ್ ಬ್ಯಾಂಕ್ ಆಧುನಿಕ ಸಹಕಾರಿ ತತ್ವಗಳ ಫಲಶ್ರುತಿ’ ಎಂದ ಅವರು ಬ್ಯಾಂಕಿನ ಸಂಸ್ಥಾಪಕ ಪ್ರಮುಖ ಪಿ. ವೆಂಕಟೇಶ ಭಟ್ ಹಾಗೂ ಇಲ್ಲಿ ತನಕ 10 ಮಂದಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿಕೊಂಡರು.
ಪಾಂಡಿ ಅವರಿಗೆ ಸಾಧಕ ಪುರಸ್ಕಾರ: ಹಿರಿಯ ವಕೀಲರಾಗಿ ಆರು ದಶಕಗಳಿಗೂ ಮಿಗಿಲಾಗಿ ಸೇವೆ ಸಲ್ಲಿಸಿರುವ ಕಾರ್ಕಳದ ಎಂ. ಎನ್. ಪಾಂಡಿ ಅವರಿಗೆ ಎಂಸಿಎಸ್ ಬ್ಯಾಂಕ್‍ನಿಂದ ಮೊದಲ ಬಾರಿಗೆ ನೀಡಲಾಗುತ್ತಿರುವ ಕೊಡಮಾಡುವ `ಸಾಧಕ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಬ್ಯಾಂಕಿನ ಉಪಾಧ್ಯಕ್ಷ, ಪಾಂಡಿಯವರ ವಿದ್ಯಾರ್ಥಿ ಎಂ. ಬಾಹುಬಲಿ ಪ್ರಸಾದ್ ಸಮ್ಮಾನ ಪತ್ರ ವಾಚಿಸಿದರು. 4 ದಶಕಗಳ ಕಾಲ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ದಿ| ಎಂ. ಪಾಂಡುರಂಗ ಮಲ್ಯ ಅವರ ಭಾವಚಿತ್ರವನ್ನು ಎಂ. ಎನ್. ಪಾಂಡಿ ಅನಾವರಣಗೊಳಿಸಿದರು.
ಸಮ್ಮಾನ: ಮಾಧ್ಯಮರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ಜಿನೇಶ್ -ಪೆÇರ್ಲು, ಲೋಲಾಕ್ಷ ಕರ್ಕೇರಾ -ನಮ್ಮ ಕುಡ್ಲ, ಮಮತಾ ಶೆಟ್ಟಿ-ಅಭಿಮತ ಟಿವಿ, ರಾಜೇಶ್ ಶ್ಯಾನುಭಾಗ್-ಅಜಂತಾ, ವೇಣುಗೋಪಾಲ-ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ , ವೈದ್ಯಕೀಯ ರಂಗದಲ್ಲಿ ಜಿ.ವಿ.ಪೈ ಸ್ಮಾರಕ ಆಸ್ಪತ್ರೆ, ಆಳ್ವಾಸ್ ಆಸ್ಪತ್ರೆ, ಅಲಂಗಾರು ಮೌಂಟ್ ರೋಸರಿ ಆಸ್ಪತ್ರೆ, ಕೃಷಿ ರಂಗದ ಸಾಧಕರಾದ ತಿಮ್ಮಪ್ಪ ಶೆಟ್ಟಿ ಹಾಗೂ ಗೋಶಾಲಾ ಪ್ರವರ್ತಕ, ಉದ್ಯಮಿ ಬೋರ್ಕಟ್ಟೆ ಗಣಪತಿ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು.
ಇದೇ ವೇಳೆ ಬ್ಯಾಂಕಿನ ಸಹಕಾರಿಗಳಾದ ಅರುಣ್ ಮೆಂಡಿಸ್, ಸುಕುಮಾರ್ ರಾವ್ ಮುಂಬÉೈ, ಸುನಿಲ್ ಮೆಂಡಿಸ್ ಸುರೇಶ್ ಆಚಾರ್ಯ ಕಾಂತಾವರ, ಸಪ್ತಾಹದ ಕಲಾಪ ನಿರೂಪಕ ಮೋಹನದಾಸ ಜಿ. ಪ್ರಭು ಸಾಣೂರು ಅವರನ್ನು ಗೌರವಿಸಲಾಯಿತು.
ಸಹಕಾರ ಮಹಾಮಂಡಲಕ್ಕೆ ರೂ. 8.26 ಲಕ್ಷ : ಬ್ಯಾಂಕ್‍ನ ವಾರ್ಷಿಕ ಲಾಭಾಂಶದ ಶೇ. 2 (ರೂ. 8.26 ಲಕ್ಷ )ನ್ನು ಬ್ಯಾಂಕಿನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಸಿಇಓ ಚಂದ್ರಶೇಖರ ಅವರು ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಕ್ಕೆ ಮಂಡಳದ ಮಾಜಿ ಅಧ್ಯಕ್ಷ ಶೇಖರಗೌಡ ಮಾಲೀ ಪಾಟೀಲ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿರುವ 8 ಸಹಕಾರಿ ತರಬೇತಿ ಕೇಂದ್ರಗಳ ಪೈಕಿ ಮೂಡುಬಿದಿರೆಯಲ್ಲೂ ಒಂದು ಕೇಂದ್ರ 3 ದಶಕಗಳ ಹಿಂದೆಯೇ ಸ್ಥಾಪನೆಯಾಗುವುದಕ್ಕೆ ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ಪರಿಶ್ರಮವಿತ್ತು ಎಂದರು. ಮುಂದೆ ಮಂಗಳೂರು ವಿ.ವಿ.ಯಲ್ಲಿ ಸಹಕಾರ ವಿಷಯದಲ್ಲಿ ಸ್ನಾತಕೋತ್ತರ ಪದವಿ ತೆರೆಯಬೇಕು’ ಎಂದು ಅವರು ವಿ.ವಿ. ಕುಲಪತಿಯವರಲ್ಲಿ ವಿನಂತಿಸಿದರು.
ಬ್ಯಾಂಕ್ ಅಧ್ಯಕ್ಷ , ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಬ್ಯಾಂಕಿನ ಸಾಧನೆಗಳ ಚಿತ್ರಣ ನೀಡಿ, ಹಲವಾರು ವರ್ಷಗಳಿಂದ ಶೇ 25 ಡಿವಿಡೆಂಡ್. ರೈತರ ಪಿಂಚಣಿ, ಬ್ಯಾಂಕ್ ಸಿಬಂದಿಗೆ ಪಿಂಚಣಿ, ಸದಸ್ಯರಿಗೆ ರೂ. 1000 ಏಕಗಂಟಿನ ವಿಮಾ ಮೊತ್ತದಲ್ಲಿ ವರ್ಷಕ್ಕೆ ರೂ. 2 ಲಕ್ಷದ ವಿಮೆ ನೀಡುವ ಆರೋಗ್ಯ ಕಾರ್ಡ್, ಮಳೆಕೊಯ್ಲಿಗೆ ಸಹಾಯಧನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಏಳೂದಿನಗಳಲ್ಲಿ ಸಾಧಕರಿಗೆ ಸಮ್ಮಾನ ಸೇರಿದಂತೆ ಹಲವಾರು ವಿಷಯಗಳಲ್ಲಿ ರಾಜ್ಯದ ಸಹಕಾರಿ ರಂಗದಲ್ಲಿ ಅನುಪಮ ಸಂಸ್ಥೆಯಾಗಿ ಎಂಸಿಎಸ್ ಬ್ಯಾಂಕ್ ಬೆಳೆದಿದೆ’ ಎಂದರು.
ಸಿಇಓ ಚಂದ್ರಶೇಖರ ಎಂ. ಸ್ವಾಗತಿಸಿದರು. ಮೋಹನದಾಸ್ ಜಿ. ಪ್ರಭು ನಿರೂಪಿಸಿದರು. ನಿರ್ದೇಶಕ ಜಯರಾಮ ಕೋಟ್ಯಾನ್ ವಂದಿಸಿದರು. `ನಾದ್ ನಿನಾದ್’ ಝೀ ಕನ್ನಡ ಸರಿಗಮ ಖ್ಯಾತಿಯ ನಿಹಾಲ್ ತೌರೋ ಬಳಗದವರಿಂದ ರಸಮಂಜರಿ ಕಾರ್ಯಕ್ರಮ ಜರಗಿತು.
ಚಿತ್ರ: 2011ಎಂಡಿ1
ಎಂಸಿಎಸ್ ಬ್ಯಾಂಕ್‍ನ ಸಹಕಾರ ಸಪ್ತಾಹ-2019ರ ಸಮಾರೋಪ ಸಮಾರಂಭದಲ್ಲಿ ಹಿರಿಯ ವಕೀಲ ಎಂ. ಎನ್. ಪಾಂಡಿ ಅವರನ್ನು ಸಮ್ಮಾನಿಸಲಾಯಿತು.