News Kannada
Wednesday, September 28 2022

ಕರಾವಳಿ

ಧರ್ಮಸ್ಥಳ ಲಕ್ಷದೀಪೋತ್ಸವ: ಸಂಭ್ರಮದ ಹೊಸಕಟ್ಟೆ ಉತ್ಸವ - 1 min read

Photo Credit :

ಧರ್ಮಸ್ಥಳ ಲಕ್ಷದೀಪೋತ್ಸವ: ಸಂಭ್ರಮದ ಹೊಸಕಟ್ಟೆ ಉತ್ಸವ

 ಬೆಳ್ತಂಗಡಿ: ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ ಕಾರ್ತಿಕ ಮಾಸದ ಶುಕ್ರವಾರ ಆರಂಭಗೊಂಡಿದ್ದು ಅದೇ ದಿನ ರಾತ್ರಿ ಶ್ರೀಮಂಜುನಾಥಸ್ವಾಮಿಯ ಹೊಸಕಟ್ಟೆ ಉತ್ಸವ ನೆರವೇರಿತು.

ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶುಕ್ರವಾರ ರಾತ್ರಿ  ಹೊಸಕಟ್ಟೆ ಉತ್ಸವದ  ಪೂಜಾಕಾರ್ಯದ   ವಿಧಿ-ವಿಧಾನಗಳು ನೆರವೇರಿದವು. ಹೊಸಕಟ್ಟೆ ಉತ್ಸವದ ಪ್ರಯುಕ್ತ ಮಂಜುನಾಥ ಸ್ವಾಮಿಯ ಉತ್ಸವಮೂರ್ತಿಯನ್ನು ಲಾಲಕಿ ಪಲ್ಲಕ್ಕಿಯಲ್ಲಿ ಕೂರಿಸಿ ಅತ್ಯಂತ ವಿಜೃಂಭಣೆಯ ಮೆರವಣಿಗೆಯೊಂದಿಗೆ ವಸಂತಮಹಲ್‍ನ ಬಳಿ ಭಕ್ತರ ಸಮ್ಮುಖದಲ್ಲಿ  ಕರೆದೊಯ್ಯಲಾಯಿತು. ದೇವರನ್ನು ಹೊಸಕಟ್ಟೆಯಲ್ಲಿ ಕೂರಿಸಿದ ಶ್ರೀಮಂಜುನಾಥಸ್ವಾಮಿಗೆ  ಅಷ್ಟ ಬಗೆಯ ಪೂಜೆಗಳು  ನಡೆದವು.   ವಿಶೇಷ ವಿಧಾನದಲ್ಲಿ ಪೂಜೆಯಾದ ನಂತರ ಹಲವು ವಿಧದ ಸೇವೆಗಳನ್ನು ನೆರವೇರಿಸಲಾಯಿತು. ಗಾಯನ ಸೇರಿದಂತೆ ಮೂರು ಬಗೆಯ ಸಂಗೀತ ಸೇವೆಯಲ್ಲಿ ಪೂಜೆಯು ಸಂಪನ್ನಗೊಂಡಿತು.

ದೇವಸ್ಥಾನದಿಂದ ಶ್ರೀಮಂಜುನಾಥಸ್ವಾಮಿಯ ಉತ್ಸವ ಮೂರ್ತಿಯನ್ನು ಶೃಂಗಾರಗೊಂಡ ಆನೆಗಳು, ನಿಶಾನೆಗಳು, ಬಿರುದಾವಳಿಗಳು, ಕೊಂಬು, ಕಹಳೆ, ಚೆಂಡೆ, ವಾದ್ಯಗಳ ಸೇವೆಯೊಂದಿಗೆ  ಸಾಗಿದ ಮೆರವಣಿಗೆಯ ಮೂಲಕ ಸಹಸ್ರಾರು ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡಿದ್ದರು.  ಹೊಸಕಟ್ಟೆ ಉತ್ಸವ ನಡೆಸಿದ ಬಳಿಕ ದೇವಾಲಯಕ್ಕೆ ಮರಳಿದ ನಂತರ ಸ್ವಾಮಿಯ ಮೂರ್ತಿಯನ್ನು ಬೆಳ್ಳಿರಥದಲ್ಲಿ ದೇವಾಲಯದ ಸುತ್ತ ಒಂದು ಸುತ್ತು ಉತ್ಸವ ನಡೆಯಿತು. ಶನಿವಾರ ರಾತ್ರಿ ಶ್ರೀಮಂಜುನಾಥಸ್ವಾಮಿಯ ಕೆರೆಕಟ್ಟೆ ಉತ್ಸವ ನೆರವೇರಿತು.  ಭಾನುವಾರ ರಾತ್ರಿ ಶ್ರೀಮಂಜುನಾಥಸ್ವಾಮಿಯ ಲಲಿತೋದ್ಯಾನ ಉತ್ಸವ ನಡೆಯಲಿದೆ.

ಇಂದಿನ ಕಾರ್ಯಕ್ರಮ:

ಇಂದು (ನ.24) ಲಲಿತಕಲಾ ಗೋಷ್ಠಿ: 

ಭಾನುವಾರ ಅಪರಾಹ್ನ 5-30 ರಿಂದ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ 5-30 ರಿಂದ ವಿದುಷಿ ಅಪೇಕ್ಷಾ ಮತ್ತು ಗೌರಿ ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ನೃತ್ಯ ವಿದುಷಿ ಎಸ್.ಎಂ. ಧರಣಿ ಕಶ್ಯಪ್ ಮತ್ತು ತಂಡದವರಿಂದ ವೈವಿಧ್ಯಮಯ ನೃತ್ಯ ರೂಪಕ ನಡೆಯಲಿದೆ. ಬಳಿಕ 7 ಗಂಟೆಯಿಂದ ಬೆಂಗಳೂರಿನ ಅನನ್ಯಾ ಭಟ್ ತಂಡದಿಂದ  ಸಂಗೀತ ಮೇಳ ಪ್ರದರ್ಶನಗೊಳ್ಳಲಿದೆ. ರಾತ್ರಿ 8-30 ರಿಂದ ಬೆಂಗಳೂರಿನ ಶಿವಲೀಲಾ ಸಾಂಸ್ಕøತಿಕ ಹಾಗೂ ಚಾರಿಟೇಬಲ್ ಟ್ರಸ್ಟ್‍ನ ಎಂ.ಎಸ್. ಶಾಂತಲಾ ಮತ್ತು ತಂಡದಿಂದ ನೃತ್ಯ ವೈವಿಧ್ಯ ನಡೆಯಲಿದೆ.

ವಸ್ತು ಪ್ರದರ್ಶನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

ಇಂದು (ನ.24) ಸಂಜೆ 6 ರಿಂದ ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಿಂದ ಸಾಂಸ್ಕøತಿಕ ಕಾರ್ಯಕ್ರಮ, ಬಳಿಕ 7 ರಿಂದ ಮೈಸೂರಿನ ಜಾದೂ ಕಲಾವಿದೆ ಸುಮಾ ರಾಜ್‍ಕುಮಾರ್ ಇವರಿಂದ ಮಾತನಾಡುವ ಗೊಂಬೆ ಮತ್ತು ಜಾದೂ, ನಂತರ 8-30 ರಿಂದ ಬೆಂಗಳೂರಿನ ನಾಟ್ಯಕಲಾ ಮೈತ್ರಿ ನೃತ್ಯ ಶಾಲೆಯ ವಿದುಷಿ ಮೈತ್ರಿ ಟಿ.ಕೆ. ತಂಡದಿಂದ ಭರತನಾಟ್ಯ ನಡೆಯಲಿದೆ.

ಶನಿವಾರ ಸಂಜೆ 5-30 ರಿಂದ ಬೆಂಗಳೂರಿನ ಉಸ್ಮಾನ್ ಅವರಿಂದ ಗಾಯನ, ಬೆಂಗಳೂರಿನ ಕಡಬ ಶ್ರೀನಿವಾಸ್ ಇವರಿಂದ ಜಾದೂ ಪ್ರದರ್ಶನ, ಉಡುಪಿ ದರ್ಪಣ ಸ್ಕೂಲ್ ಆಫ್ ಫರ್ಫಾರ್ಮಿಂಗ್ ಆಟ್ಸ್‍ನಿಂದ ನೃತ್ಯ ವೈವಿಧ್ಯ ನಡೆಯಿತು.

 

 

 

See also  ಜೂಜಾಟದಲ್ಲಿ ತೊಡಗಿದ್ದ 9 ಮಂದಿಯ ಸೆರೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು