ಮೂಡುಬಿದಿರೆ: “ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್” ನವದೆಹಲಿ ಇದರ ಆಶ್ರಯದಲ್ಲಿ ಅಕ್ಟೋಬರ್ 15ರಿಂದ ನವೆಂಬರ್ 15ರವರೆಗೆ ನಡೆದ ಚುನಾವಣೆಯಲ್ಲಿ “ಕರ್ನಾಟಕ ಸೆಕ್ಷನ್ ಮ್ಯಾನೇಜಿಂಗ್ ಕಮಿಟಿ”ಗೆ ಮೂಡುಬಿದಿರೆ ಸಮೀಪದ ತೋಡಾರಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಶಾಂಕ್. ಎಂ. ಗೌಡ ಅವರು ಅತ್ಯಧಿಕ ಮತಗಳಿಂದ ಆಯ್ಕೆಯಾಗಿದ್ದಾರೆ.
ಈ ಚುನಾವಣೆಗೆ ಕರ್ನಾಟಕದಿಂದ ಹನ್ನೆರಡು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಐದು ಮಂದಿ ಸದಸ್ಯರು ಆಯ್ಕೆಯಾಗಿರುತ್ತಾರೆ. ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್‍ನ ಕರ್ನಾಟಕ ಸೆಕ್ಷನ್ ನಲ್ಲಿ ಒಟ್ಟು ಹದಿನೆಂಟು ಸಾವಿರ ಮತಗಳಿದ್ದು, ಹನ್ನೆರಡು ಜನ ಸ್ಪರ್ಧಾಳುಗಳಲ್ಲಿ ಐದು ಮಂದಿ ಮಾತ್ರ ಹೆಚ್ಚು ಮತ ಪಡೆದು ಆಯ್ಕೆಯಾಗಿದ್ದಾರೆ. ಇವರ ಪತ್ನಿ ಭಾರ್ಗವಿ ಕೆ. ಅರ್. ಅವರು ಮಂಗಳೂರು ಇನ್ಸ್ಟೆಂಟ್ ಆಫ್ ಟೆಕ್ನಾಲಜಿಯಲ್ಲಿ ಅಸಿಸ್ಟೆಂಟ್ ಫ್ರೊಪೆಸರ್ ಆಗಿ ಮೂಡುಬಿದಿರೆ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಶಾಂಕ್ ಅವರು ಸುಳ್ಯ ಕೆ. ವಿ. ಜಿ. ಪಾಲಿಟೆಕ್ನಿಕ್‍ನ ಉಪನ್ಯಾಸಕ ಮಧುಕುಮಾರ್ ಬಿ. ಆರ್.- ಸುಳ್ಯ ಮಹಿಳಾ ಸಮಾಜದ ಕೋಶಾಧಿಕಾರಿ ಬಿ. ಟಿ. ಜಯಲಕ್ಷ್ಮಿ ಅವರ ಸುಪುತ್ರ. ಈ ಸದಸ್ಯತ್ವವು 2020 ರಿಂದ 2024ರವರೆಗೆ 5 ವರ್ಷಗಳ ಅವಧಿಯದ್ದಾಗಿರುತ್ತದೆ
ಶಶಾಂಕ್ ಅವರ ಈ ಗೆಲುವಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.