News Kannada
Saturday, September 24 2022

ಕರಾವಳಿ

ಕಟೀಲು ದೇವಿ ಸನ್ನಿಧಿಯಲ್ಲಿ ಆಣೆ ಮಾಡಲು ತಯಾರಾಗಿದ್ದೇನೆ: ಸತೀಶ್ ಶೆಟ್ಟಿ ಪಟ್ಲ - 1 min read

Photo Credit :

ಕಟೀಲು ದೇವಿ ಸನ್ನಿಧಿಯಲ್ಲಿ ಆಣೆ ಮಾಡಲು ತಯಾರಾಗಿದ್ದೇನೆ: ಸತೀಶ್ ಶೆಟ್ಟಿ ಪಟ್ಲ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆರು ಮೇಳಗಳ ತಿರುಗಾಟಕ್ಕೆ ಚಾಲನೆ ದೊರೆಯುವ ದಿನ ಭಾಗವತಿಗೆ ಅವಕಾಶ ನೀಡದಕ್ಕೆ ಖ್ಯಾತ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿವಾದದ ಬಗ್ಗೆ ವಿವರ ನೀಡಿದರು.

ಕಳೆದ 19 ವರ್ಷಗಳಿಂದ ಮೇಳದಲ್ಲಿ ಇರುವ ನಾನು ಇದುವರೆಗೆ ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ನನಗೆ ಈ ಸಲ ಮೇಳದಲ್ಲಿ ಅವಕಾಶ ಇಲ್ಲವೆನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಇದಕ್ಕಾಗಿ ನಾನು ದೇವಿಯ ಮುಂದೆ ಆಣೆ ಮಾಡಲು ತಯಾರಿದ್ದೇನೆ ಎಂದು ಪಟ್ಲ ಹೇಳಿದರು.

ಮೇಳದ ಸಂಚಾಲ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರಿಂದ ನನಗೆ ಲಿಖಿತ ಅಥವಾ ಮೌಖಿಕವಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈಗ ಸುಳ್ಳು ಆರೋಪ ಮಾಡಲಾಗುತ್ತಿದೆ. ದೇವಾಲಯದ ಮೇಳದ ತಿರುಗಾಟದ ವೇಳೆ ನಾನು ಇದುವರೆಗೆ ಯಾವುದೇ ರೀತಿಯಿಂದಲೂ ಕರ್ತವ್ಯಕ್ಕೆ ಚ್ಯುತಿ ತಂದಿಲ್ಲ ಎಂದರು.

ಮೇಳದಲ್ಲಿ ಕಲಾವಿದರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ಮೇಳವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಬೇಕೆನ್ನುವ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಪಟ್ಲ ಹೇಳಿದರು.

ನಿನ್ನ ಕಟೀಲು ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಮತ್ತು ಹರಿನಾರಾಯಣ ಅಸ್ರಣ್ಣ ಮೊದಲಾದವರು ಪಟ್ಲಗೆ ಮಾಹಿತಿ ನೀಡಲಾಗಿತ್ತು ಎಂದು ಹೇಳಿದ್ದರು.    

See also  ಮಂಗಳೂರಿನಲ್ಲಿ ಹುಚ್ಚ ವೆಂಕಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು